ಎಸ್ ಎಸ್ ಎಲ್ ಸಿ ಮುಗಿದ ನಂತರ ಈ ಸರ್ಕಾರಿ ಕೆಲಸಗಳಿಗೆ ಅಪ್ಲೈ ಮಾಡಿ.
ಸರ್ಕಾರಿ ಉದ್ಯೋಗಗಳು ಸುರಕ್ಷಿತ ವೃತ್ತಿಜೀವನ ಹಾಗೂ ಸಾಮಾಜಿಕ ಗೌರವವನ್ನು ನೀಡುವುದರಿಂದ ಅನೇಕ ಯುವಕರ ಆದ್ಯತೆಯಾಗಿದೆ. ಹೆಚ್ಚಿನ ಶಿಕ್ಷಣ ಶಿಕ್ಷಣವಿಲ್ಲದಿದ್ದರೂ 10ನೇ ತರಗತಿ ಮಾತ್ರ ಪೂರ್ಣಗೊಳಿಸಿದವರಿಗೆ ಸಹ ಅನೇಕ ಸರ್ಕಾರಿ ಉದ್ಯೋಗಗಳು ಇಲ್ಲಿ ಲಭ್ಯವಿವೆ. ಈ ಲೇಖನದಲ್ಲಿ 10ನೇ ತರಗತಿ ನಂತರ ದೊರೆಯುವ ಪ್ರಮುಖ ಸರ್ಕಾರಿ ಉದ್ಯೋಗಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ರೈಲ್ವೆ ಉದ್ಯೋಗಗಳು.
ರೈಲ್ವೆ ನೇಮಕಾತಿ ಮಂಡಳಿಯು ಪ್ರತಿವರ್ಷ ಸಾವಿರಾರು ಕಾಲಿ ಉದ್ಯೋಗಗಳಿಗೆ ನೇಮಕಾತಿ ನಡೆಸುತ್ತಿರುತ್ತದೆ. ಹತ್ತನೇ ತರಗತಿ ಪಾಸ್ ದ ಅಭ್ಯರ್ಥಿಗಳಿಗೆ ರೈಲ್ವೆಯಲ್ಲಿ ಕಲೆಕ್ಟರ್ ಆರ್ಪಿಎಫ್ ಹಾಗೂ ಜೂನಿಯರ್ ಕ್ಲರ್ಕ್ ಉದ್ಯೋಗಗಳು ಇಲ್ಲಿ ಲಭ್ಯವಿವೆ. ಈ ಉದ್ಯೋಗಗಳಿಗೆ ಕನಿಷ್ಠ 50% ಅಂಕಗಳು ಮತ್ತು 18ರಿಂದ 25 ವರ್ಷ ವಯಸ್ಸಿನ ಅಗತ್ಯವಿದೆ. ಆಯ್ಕೆಯ ಪ್ರಕ್ರಿಯೆಯಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಕ್ಷತಾ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳು ಇಲ್ಲಿ ಸೇರಿವೆ.
ಸಿಬ್ಬಂದಿ ಆಯ್ಕೆ ಸಮಿತಿ ಉದ್ಯೋಗಗಳು.
ಸಿಬ್ಬಂದಿ ಆಯ್ಕೆ ಸಮಿತಿಯು ಕೇಂದ್ರ ಸರ್ಕಾರದಿಂದ ವಿವಿಧ ಇಲಾಖೆಗಳಿಗೆ ಸಿಬ್ಬಂದಿ ನೇಮಕಾತಿ ಮಾಡುತ್ತದೆ. ಹತ್ತನೇ ತರಗತಿ ಪಾಸ್ ಆದ ಅಭ್ಯರ್ಥಿಗಳಿಗೆ SSC ಮೂಲಕ ಲಭ್ಯವಿರುವ ಪ್ರಮುಖ ಉದ್ಯೋಗಗಳು ಡೇಟಾ ಎಂಟ್ರಿ, ಆಪರೇಟರ್ ಲೋಯರ್, ಡಿವಿಷನ್ ಕ್ಲರ್ಕ್, ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಪ್. ಈ ಉದ್ಯೋಗಗಳು ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 25 ರಿಂದ 27 ವರ್ಷದ ವಯಸ್ಸು ಇರಬೇಕು.
ರಕ್ಷಣಾ ಸೇವೆಗಳು.
ಭಾರತೀಯ ಸೇನೆ ನೌಕಾದಳ ಹಾಗೂ ಯುವದಳಗಳಲ್ಲಿ 10ನೇ ತರಗತಿ ಪಾಸ್ ಆದ ಅಭ್ಯರ್ಥಿಗಳಿಗೆ ಅನೇಕ ಉದ್ಯೋಗಗಳು ಇಲ್ಲಿ ಲಭ್ಯವಿದೆ. ಎಲೆಕ್ಟ್ರಿಷಿಯನ್, ಫಿಟ್ಟರ್, ಟೈಲರ್, ಅಡಿಗೆ ಸಿಬ್ಬಂದಿ, ಹಾಗೂ ಡ್ರೈವರ್ ಉದ್ಯೋಗಗಳು, ಪ್ರಮುಖವಾಗಿ ಇಲ್ಲಿವೆ. ಈ ಉದ್ಯೋಗಗಳಿಗೆ ದೈಹಿಕ ಸಾಮರ್ಥ್ಯ ಮತ್ತು ವೈದ್ಯಕೀಯ ಫಿಟ್ನೆಸ್ ಅತ್ಯಂತ ಮುಖ್ಯವಾಗಿವೆ. ಐಟಿಐ ಪ್ರಮಾಣಪತ್ರ ಹೊಂದಿದ್ದರೆ ಪ್ರಾಧಾನ್ಯ ನೀಡಲಾಗುತ್ತದೆ. ರಕ್ಷಣಾ ಸೇವೆಗಳು ಆಕರ್ಷಕ ಸಂಬಳ, ಪಿಂಚಣಿ ಮತ್ತು ಇತರ ಸವಲತ್ತುಗಳನ್ನು ಕೂಡ ಪಡೆಯಬಹುದು.
ಇದನ್ನೂ ಓದಿ: ಪರ್ಸನಲ್ ಲೋನ್ ಪಡೆಯುವುದು ಹೇಗೆ? ಕೇವಲ ಒಂದು ದಿನದಲ್ಲಿ ಮಾತ್ರ ಲೋನ್ ಸಿಗುತ್ತದೆ.
ಪೊಲೀಸ್ ಶಾಖೆ ಮತ್ತು ಅಗ್ನಿಶಾಮಕ ದಳ.
ಪೋಲಿಸ್ ಇಲಾಖೆಯಲ್ಲಿ ಹೆಡ್ ಕಾನ್ಸ್ಟೇಬಲ್, ಸೀನಿಯರ್ ಕಾನ್ಸ್ಟೇಬಲ್, ಡ್ರೈವರ್ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಉದ್ಯೋಗಗಳಿಗೆ 10ನೇ ತರಗತಿ ಪಾಸಾದರೆ ಸಾಕು. ಈ ಉದ್ಯೋಗಗಳಿಗೆ ದೈಹಿಕ ಫಿಟ್ನೆಸ್ ಪರೀಕ್ಷೆ , ರನಿಂಗ್, ಲಾಂಗ್ ಜಂಪ್, ಹಾಗೂ ಇತರ ದೈಹಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಅಷ್ಟೇ, ಪೊಲೀಸ್ ಇಲಾಖೆಯು ಸ್ಥಿರವಾದ ವೇತನ ಹಾಗೂ ಸಾಮಾಜಿಕ ಸುರಕ್ಷತೆಯನ್ನು ನೀಡುತ್ತದೆ.
ಬ್ಯಾಂಕ್ ಮತ್ತು ಪೋಸ್ಟಲ್ ಸೇವೆಗಳು.
ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಹಾಗೂ ಇಂಡಿಯನ್ ಪೋಸ್ಟ್ ಆಫೀಸ್ನಲ್ಲಿ ಸಿಬ್ಬಂದಿ ಪೋಸ್ಟಲ್ ಅಸಿಸ್ಟೆಂಟ್ ಮತ್ತು ಮಲ್ಟಿ ಪರ್ಪಸ್ ಸ್ಟಾಪ್ ಹುದ್ದೆಗಳು ಇಲ್ಲಿ ಲಭ್ಯವಿವೆ. ಕೆಲವು ಉದ್ಯೋಗಗಳಿಗೆ ಐಟಿಐ ಪ್ರಮಾಣ ಪತ್ರ ಅಥವಾ ವೃತ್ತಿಪರ ತರಬೇತಿ ಅಗತ್ಯವಿರುತ್ತದೆ.
ರಾಜ್ಯ ಸರ್ಕಾರದ ಉದ್ಯೋಗಗಳು.
ರಾಜ್ಯ ಸರ್ಕಾರಗಳು ಗ್ರಾಮ ಪಂಚಾಯಿತಿ, ಪೌರಸಭೆ ಹಾಗೂ ಇತರ ಇಲಾಖೆಗಳಲ್ಲಿ ಕ್ಲರ್ಕ್ ಸಹಾಯಕ ಮತ್ತು ಇತರೆ ಉದ್ಯೋಗಗಳಿಗೆ ನೇಮಕಾತಿ ನಡೆಸುತ್ತವೆ. ಇವುಗಳಿಗೆ ಸಾಮಾನ್ಯವಾಗಿ ಹತ್ತನೇ ತರಗತಿ ಅರ್ಹತೆ ಇದ್ದರೆ ಸಾಕು. ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಮಾಹಿತಿಗಾಗಿ, ಅನುಕ್ರಮವಾಗಿ ರಾಜ್ಯ ಸರ್ಕಾರದ ನೇಮಕಾತಿ ಮಂಡಳಿಯ ವೆಬ್ಸೈಟ್ ಗಳನ್ನು ಪರಿಶೀಲಿಸಿಲನೆ ಮಾಡಿ ನೋಡಬಹುದು.
ಆಯ್ಕೆ ಪ್ರಕ್ರಿಯೆ ಮತ್ತು ತಯಾರಿ ಹೇಗಿರುತ್ತದೆ.
ಸರ್ಕಾರಿ ಉದ್ಯೋಗಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ ಲಿಖಿತ ಪರೀಕ್ಷೆ ದಕ್ಷತ ಪರೀಕ್ಷೆ ದೈಹಿಕ ಪರಿಚಯ ಹಾಗೂ ಸಾಕ್ಷ ಕಾರ್ ಹಂತಗಳು ಸೇರುವೆ ಪರೀಕ್ಷೆಗಳಿಗೆ ತಯಾರಿ ನಡೆಸಲು ಮಾಜಿ ಪ್ರಶ್ನೆ ಪತ್ರಿಕೆಗಳು ಮತ್ತು ಮಾದರಿ ಪ್ರಶ್ನೆಗಳನ್ನು ಪರಿಶೀಲಿಸಬೇಕು ದೈಹಿಕವಾಗಿ ಸಕ್ರಿಯವಾಗಿರುವುದು ಮತ್ತು ಸಾಮಾನ್ಯ ಜ್ಞಾನಗಳನ್ನು ಹೆಚ್ಚಿಸಿಕೊಳ್ಳುವುದು ಅತ್ಯಗತ್ಯವಾಗಿದೆ 10ನೇ ತರಗತಿ ಮಾತ್ರ ಪೂರ್ಣಗೊಳಿಸಿದವರಿಗು ಅನೇಕ ಸರಕಾರಿ ಉದ್ಯೋಗಗಳು ಇಲ್ಲಿ ಲಭ್ಯವಿವೆ. ಸರಿಯಾದ ಮಾರ್ಗದರ್ಶನ ಹಾಗೂ ಕಷ್ಟಪಟ್ಟು ದುಡಿಯುವುದರ ಮೂಲಕ ಯಾವುದೇ ಅಭ್ಯರ್ಥಿ ಈ ಉದ್ಯೋಗಗಳನ್ನು ಮಾಡಬಹುದು ನಿಯಮಿತವಾಗಿ ಸರ್ಕಾರಿ ನೇಮಕಾತಿ ವೆಬ್ಸೈಟ್ ಗಳನ್ನು ಪರಿಶೀಲಿಸಿ ಹಾಗೂ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿ.
ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನೆಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.