An order has been issued stating that the temporary scheme for government school teachers has been cancelled from today onwards, 2025.
ಇಂದಿನಿಂದಲೇ ಸರ್ಕಾರಿ ಶಾಲಾ ಶಿಕ್ಷಕರ ತಾತ್ಕಾಲಿಕ ಯೋಜನೆ ರದ್ದು ಮಾಡಲಾಗಿದೆ ಎಂದು ಆದೇಶ ಹೊರ ಬಂದಿದೆ 2025,
ಸರ್ಕಾರದ ಶಾಲೆ ಶಿಕ್ಷಕರ ತಾತ್ಕಾಲಿಕ ನಿಯೋಜನೆ ರದ್ದು
ಬೆಂಗಳೂರು, ಏಪ್ರಿಲ್ 9, 2025: ಕರ್ನಾಟಕದ ಸರ್ಕಾರವು ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ತಾತ್ಕಾಲಿಕ ಯೋಜನೆಯನ್ನು ರದ್ದುಪಡಿಸುವದಾಗಿ ತಿಳಿಸಿದೆ. ಇದು 2024 ಮತ್ತು 25ನೇ ಶೈಕ್ಷಣಿಕ ವರ್ಷದ ಅವಧಿಗೆ ಸಂಬಂಧಿಸಿದ.
ಈ ನಿಯೋಜನೆಯನ್ನು ಯಾಕೆ ರದ್ದು ಮಾಡಲಾಯಿತು?
ಕೆಲವು ಜಿಲ್ಲಾ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾತ್ಕಾಲಿಕವಾಗಿ ನಿಯೋಜಿಸಲಾದ ಶಿಕ್ಷಣವನ್ನು ಮಾರ್ಚ್ 31 2025 ರ ಒಳಗೆ ಕರ್ತವ್ಯದಿಂದ ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಗಮನಕ್ಕೆ ತಂದಿದ್ದಾರೆ. ಈಗ ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆ ಪ್ರಕ್ರಿಯೆ ನಡೆಯುತ್ತಿದೆ. ನಿಯೋಜಿತ ಶಿಕ್ಷಕರನ್ನು ತಕ್ಷಣವೇ ಮೂಲ ಶಾಲೆಗಳಿಗೆ ಹಿಂದಿರುಗಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಶಿಕ್ಷಕರಿಗೆ ನೀಡಲಾದ ಮಾರ್ಗದರ್ಶನಗಳು:
• ಈ ಯೋಜನೆಯಲ್ಲಿರುವ ಎಲ್ಲಾ ಶಿಕ್ಷಕರನ್ನು ತಕ್ಷಣ ಕರ್ತವ್ಯಯಿಂದ ಬಿಡುಗಡೆ ಮಾಡತಕ್ಕದ್ದು.
• ಬಿಡುಗಡೆಯಾದ ಎಲ್ಲಾ ಶಿಕ್ಷಕರು ಏಪ್ರಿಲ್ 9, 2025 ರ ಒಳಗೆ ತಮ್ಮ ಮೂಲ ಶಾಲೆಗಳಿಗೆ ಡ್ಯೂಟಿಗೆ ಹಾಜರಾಗಬೇಕು.
• ಗೈರು ಹಾಜರಿ ಆಗುವಂತಿಲ್ಲ; ನಿಗದಿತ ದಿನಾಂಕದೊಳಗೆ ಹಾಜರಾಗದಿದ್ದರೆ ಅಂತ ಶಿಕ್ಷಕರನ್ನು ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಲಾಗುತ್ತದೆ ಹಾಗೂ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ.
• ಹಾಜರಾಗದ ಶಿಕ್ಷಕರ ಸ್ಯಾಲರಿ ನಿಲ್ಲಿಸಲಾಗುತ್ತದೆ, ಮತ್ತು ಸಂಬಂಧಿತ ವೇತನ ಲೆಕ್ಕಾಧಿಕಾರಿಗಳು ಇದಕ್ಕೆ ಜವಾಬ್ದಾರರಾಗಿರುತ್ತಾರೆ.
ಅಧಿಕಾರಿಗಳಿಗೆ ಇರುವ ಸೂಚನೆಗಳೇನು?
1. ಬಿಡುಗಡೆ ಮಾಡಿದ ಶಿಕ್ಷಕರನ್ನು ಮತ್ತು ಮೂಲ ಶಾಲೆಗಳಿಗೆ ಹಾಜರಾಗುವವರ ಎಲ್ಲ ಜಿಲ್ಲಾವಾರು ಪಟ್ಟಿಯನ್ನು 175ರ ಒಳಗೆ ಶಿಕ್ಷಣ ಇಲಾಖೆ ಸಲ್ಲಿಸ ಸಲ್ಲಿಸತಕ್ಕದ್ದು.
2. ಈ ನೇಮವನ್ನು ಪಾಲಿಸದೆ ಇರುವ ಅಧಿಕಾರಿಗಳ ವಿರುದ್ಧ ಕರ್ತವ್ಯ ನಿರ್ಲಕ್ಷೆ ಎಂದು ಪರಿಗಣಿಸಿ ಕ್ರಮ ತೆಗೆದುಕೊಳ್ಳಲಾಗುವುದು.
ಪರಿಣಾಮಗಳು ಹಾಗೆ, ಮುಂದಿನ ಕ್ರಮ.
1. ಈ ಆದೇಶವು ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಹಂಚಿಕೆ ಮತ್ತು ನೇಮಕಾತಿ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಹೊಂದಿದೆ.
2. ಶಿಕ್ಷಕರು ತಮ್ಮ ಮೂಲ ಶಾಲೆಗಳಿಗೆ ಹಿಂತಿರುಗಿ ಹೋಗುವುದರಿಂದ ವಿದ್ಯಾರ್ಥಿಗಳಿಗೆ ಸ್ಥಿರ ಶಿಕ್ಷಣ ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತದೆ.
3. ಈ ನಿರ್ಧಾರ ಶಿಕ್ಷಣ ಇಲಾಖೆಯ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.