ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಂತೆ ಮತ್ತೊಂದು ಯೋಜನೆ,
ಕರ್ನಾಟಕ ರಾಜ್ಯ ಸರ್ಕಾರದಿಂದ ಬಡ ಮಹಿಳೆಯರ ನೆರವಿಗಾಗಿ ‘ಮನಸ್ವಿನಿ’ ಯೋಜನೆ ಜಾರಿಗೆ ಮಾಡಲಾಗಿದೆ, ಅರ್ಹರಿಗೆ ಪ್ರತಿ ತಿಂಗಳು ₹800 ಸಿಗಲಿದೆ – ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
- 40 ರಿಂದ 64 ವಯಸ್ಸಿನ ಮಹಿಳೆಯರಿಗೆ ಪ್ರತಿ ತಿಂಗಳು ₹800
- ಮನಸ್ವಿನಿ ಯೋಜನೆಯಡಿಯಲ್ಲಿ ವಿಚ್ಛೇದಿತ ಹಾಗೂ ಅವಿವಾಹಿತ ಮಹಿಳೆಯರಿಗೆ ಸರ್ಕಾರದಿಂದ ಆರ್ಥಿಕ ಸಹಾಯ.
- ಆನ್ಲೈನ್ ಮೂಲಕ, ಸೇವಾ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಇದನ್ನು ಒಮ್ಮೆ ಓದಿ: CET 2025 ಫಲಿತಾಂಶ ಪ್ರಕಟಣೆ: ಇಲ್ಲಿವೆ ಮುಖ್ಯ ಮಾಹಿತಿಗಳು
ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರ ಖರ್ಚಿಗೆ ಆರ್ಥಿಕ ನೆರವಾಗುವಂತೆ ರಾಜ್ಯ ಸರ್ಕಾರದಿಂದ ‘ಮನಸ್ವಿನಿ’ (Manasvini Scheme) ಎಂಬ ಹೊಸ ಯೋಜನೆ ಜಾರಿಗೆ ಮಾಡಲಾಗಿದೆ. ಈ ಯೋಜನೆಯಡಿಯಲ್ಲಿ 40 ರಿಂದ 64 ವರ್ಷದವರೆಗಿನ ವಿಚ್ಛೇದಿತ ಮತ್ತು ಅವಿವಾಹಿತ ಮಹಿಳೆಯರಿಗೆ ಪ್ರತಿ ತಿಂಗಳು ₹800 ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.
ಈ ಹೊಸ ಯೋಜನೆಯು ಮಹಿಳೆಯರು ಸ್ವಾವಲಂಬಿಯಾಗಿ ಬದುಕು ನಡೆಸಲು ಪುಷ್ಟಿ ಸಹಾಯ ಒದಗಿಸಲು ಸರ್ಕಾರದ ಮುಂದಿನ ಹೆಜ್ಜೆಯಾಗಿದೆ. ಇದು ಸರ್ಕಾರದ ಸಂಕಲ್ಪ. ಈಗಾಗಲೇ ‘ಗೃಹಲಕ್ಷ್ಮಿ’ ಯೋಜನೆಯ ಮೂಲಕ ಮಹಿಳೆಯರಿಗೆ ₹2000 ರೂ. ಸಹಾಯ ದೊರೆಯುತ್ತಿದ್ದು, ಇನ್ನು ಈ ಯೋಜನೆಯೊಂದಿಗೆ ₹800 ಹೆಚ್ಚಾಗಿ ಸಹಾಯ ಲಭಿಸುವ ಸಾಧ್ಯತೆ ಇದೆ.
ಅರ್ಜಿಯನ್ನು ಸಲ್ಲಿಸಲು ಸುಲಭ ವಿಧಾನವನ್ನು ನಿಗದಿಪಡಿಸಲಾಗಿದೆ. ಅರ್ಹ ಮಹಿಳೆಯರು ಹತ್ತಿರದ ಸೇವಾ ಕೇಂದ್ರಗಳಿಗೆ ಹೋಗಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಬೇಕಾದ ದಾಖಲೆಗಳೇನು?
- ಆದಾಯ ಪ್ರಮಾಣ ಪತ್ರ,
- ಆಧಾರ್ ಕಾರ್ಡ್
- ಸ್ವಯಂ ಘೋಷಣಾ ಪತ್ರ (ಅವಿವಾಹಿತ ಅಥವಾ ವಿಚ್ಛೇದಿತರಿಗಾಗಿ)
- ಬ್ಯಾಂಕ್ ಖಾತೆಯ ವಿವರ ಹೊಂದಿರಬೇಕು.
ಈ ಯೋಜನೆಯ ಅನುದಾನವನ್ನು ಸರ್ಕಾರ ಈಗಾಗಲೇ ಘೋಷಿಸಿದೆ ಮತ್ತು ಪ್ರಾಯೋಗಿಕವಾಗಿ ಜಾರಿಯಲ್ಲೂ ಕೂಡ ಇದೆ. ಅರ್ಹರಾಗಿರುವ ಮಹಿಳೆಯರು ಪ್ರತಿ ತಿಂಗಳು 800 ಪಡೆಯಲು ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಬೇಟಿ ನೀಡಿ ಇನ್ನೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದು.
ಸ್ನೇಹಿತರೆ, ಇದೇ ರೀತಿ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಸೇರಿಕೊಳ್ಳಿ, ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ