Best know as the co-founder of video massaging company Loom
Loom ಎಂಬ ವಿಡಿಯೋ ಮೆಸೇಜಿಂಗ್ ಸಂಸ್ಥೆಯ ಸಹ ಸ್ಥಾಪಕರಾಗಿ ಪ್ರಸಿದ್ಧಿಯಾದ ವಿನಯ್ ಹಿರೆಮಟ್ ಅವರ ಜೀವನ ಚರಿತ್ರೆ ಮತ್ತು ಸಾಧನೆಗಳು
ವಿಡಿಯೋ ಮೆಸೇಜಿಂಗ್ ಕಂಪನಿ ಲೂಮ್‌ನ ಸಹ-ಸಂಸ್ಥಾಪಕ ಎಂದು ಪ್ರಸಿದ್ಧರಾದ ವಿನಯ್ ಹಿರೇಮತ್ ಅವರ ಜೀವನ ಚರಿತ್ರೆ ಮತ್ತು ಸಾಧನೆಗಳು.
ವಿನಯ್ ಹಿರೆಮಟ್ ಅವರು ಭಾರತೀಯ ಮೂಲದ ಉದ್ಯಮಿ ಮತ್ತು ತಂತ್ರಜ್ಞಾನ ನಾವೀನ್ಯತೆ ವಂತರು, Loom ಎಂಬ ವಿಡಿಯೋ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನ ಸಹ ಸ್ಥಾಪಕರಾಗಿ ಜಗತ್ಪ್ರಸಿದ್ಧಿಯಾದವರು. ಇವರ ಜೀವನ ಮತ್ತು ವೃತ್ತಿಪರ ಪಯಣವು ಈಗಿನ ಯುವಕರಿಗೆ ಸ್ಫೂರ್ತಿದಾಯಕವಾಗಿದೆ.
ವಿನಯ್ ಹೀರೆಮಟ್ ರವರ ಜೀವನ ಮತ್ತು ಶಿಕ್ಷಣ:
ವಿನಯ್ ಹಿರೆಮಟ್ ಅವರು 1993ರಲ್ಲಿ ಜನಿಸಿದರು. ಇವರು 2010 ರಿಂದ 2012 ರವರೆಗೆ ಇಲಿನಾಯ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು, ಆದರೆ ತಮ್ಮ ಸ್ಟಾರ್ಟಪ್ ಕನಸುಗಳನ್ನು ಹಿಂಬಾಲಿಸಲು ವ್ಯಾಸಂಗವನ್ನು ಮುಂದುವರಿಸದೆ ಮಧ್ಯದಲ್ಲೇ ಬಿಟ್ಟರು.
ವೃತ್ತಿ ಪಯಣ:
ಓದುವುದನ್ನು ಬಿಟ್ಟ ನಂತರ, ವಿನಯ್ ಹಿರೆಮಟ್ ಅವರು ಸ್ಟಾರ್ಟಪ್‌ಗಳಿಗೆ ಕೇಂದ್ರವಾದ ಪ್ಯಾಲೊ ಆಲ್ಟೋ, ಕ್ಯಾಲಿಫೋರ್ನಿಯಾಗೆ ತೆರಳಿದರು. ಅವರು Backplane ಎಂಬ ಸ್ಟಾರ್ಟಪ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ವೃತ್ತಿ ಮುಂದುವರಿಸಿದರು.
Loom ಸ್ಥಾಪನೆ ಮತ್ತು ಯಶಸ್ಸು:
ವಿನಯ್ ಹಿರೆಮಟ್ ರವರು 2015ರಲ್ಲಿ, ಅವರು ಶಾಹೆದ್ ಖಾನ್ ಮತ್ತು ಜೋ ಥಾಮಸ್ ಅವರೊಂದಿಗೆ Loom ಅನ್ನು ಸ್ಥಾಪನೆ ಮಾಡಿದರು. Loom ಇದು ಒಂದು ವಿಡಿಯೋ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿದೆ, ತಂಡಗಳು ಮತ್ತು ವ್ಯವಹಾರಗಳಿಗೆ ಸಂವಹನವನ್ನು ಸುಲಭಗೊಳಿಸುತ್ತದೆ. ಈ ಪ್ಲಾಟ್‌ಫಾರ್ಮ್ ತನ್ನ ಬಳಕೆದಾರ ಸ್ನೇಹಿ ವಿನ್ಯಾಸ ಮತ್ತು ಕಾರ್ಯಕ್ಷಮತೆಯಿಂದಾಗಿ ವೇಗವಾಗಿ ಬೆಳೆದು ಜನರಿಗೆ ಪ್ರಿಯವಾಯಿತು. 2023ರಲ್ಲಿ, Loom ಅನ್ನು ಆಸ್ಟ್ರೇಲಿಯಾದ ಸಾಫ್ಟ್‌ವೇರ್ ಕಂಪನಿಗೆ Atlassian ಸುಮಾರು $975 ಮಿಲಿಯನ್‌ಗೆ ವಿನಯ್ ಹೇರೆಮಟ್ ಮಾರಾಟ ಮಾಡಿದರು.
ಆರ್ಥಿಕ ಯಶಸ್ಸು ಮತ್ತು ವ್ಯಕ್ತಿಗತ ಪರಿವರ್ತನೆ:
Loom ಮಾರಾಟದಿಂದಾಗಿ, ವಿನಯ್ ಹೀರೆಮಟ್ ಅವರು ಆರ್ಥಿಕವಾಗಿ ಬಲಿಷ್ಠವಾದರು, ಜೀವನದಲ್ಲಿ ಅವರು ಉದ್ದೇಶದ ಕೊರತೆಯನ್ನು ಅನುಭವಿಸಿದರು. ವಿನಯ್ ಹೀರೆಮಟ್ ಅವರು ತಮ್ಮ ಬ್ಲಾಗ್‌ನಲ್ಲಿ “ನಾನು ಶ್ರೀಮಂತ, ಆದರೆ ನನ್ನ ಜೀವನದಲ್ಲಿ ಏನು ಮಾಡಬೇಕು ಎನ್ನುವ ಬಗ್ಗೆ ತಿಳಿಯುತಿಲ್ಲಾ” ಎಂಬುದು ಶೀರ್ಷಿಕೆಯೊಂದಿಗೆ ಈ ವಿಚಾರವನ್ನು ಸಾರ್ವಜನಿಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ವಿನಯ್ ಹೇರೆಮಟ್ ಸದ್ಯ ಇವಾಗ ಏನು ಮಾಡುತಿದ್ದಾರೆ:
ಇವಾಗ, ವಿನಯ್ ಹಿರೆಮಟ್ ಅವರು ಹವಾಯಿಯಲ್ಲಿ ಭೌತಶಾಸ್ತ್ರವನ್ನು ಕಲಿಯುತಿದ್ದಾರೆ. ಅವರು ಈ ತಮ್ಮ ಹೊಸ ಪಯದಲ್ಲಿ ಖುಸಿಯಾಗಿದ್ದಾರೆ ಮತ್ತು ಭವಿಷ್ಯದಲ್ಲಿ ಹೊಸ ಅವಕಾಶಗಳನ್ನು ನೊಡುತಿದಗದಾರೆ.
ವಿನಯ್ ಹಿರೆಮಟ್ ಅವರ ಕಥೆ ಆರ್ಥಿಕ ಯಶಸ್ಸಿನ ನಂತರ ಜೀವನದ ಉದ್ದೇಶವನ್ನು ಹುಡುಕುವ ಪ್ರಯತ್ನವನ್ನು ಗೋಚರಿಸುತ್ತದೆ. ಅವರ ಅನುಭವಗಳು, ಆರ್ಥಿಕ ಸಾಧನೆಗಳ ಹೊರತಾಗಿಯೂ, ಜೀವನದಲ್ಲಿ ಅರ್ಥ ಮತ್ತು ಉದ್ದೇಶವನ್ನು ಕಂಡುಕೊಳ್ಳುವ ಮಹತ್ವವನ್ನು ಒತ್ತಿಹೇಳುತ್ತವೆ.
ಹಣ ಮತ್ತು ವೃತ್ತಿ ಸಾಧನೆಗಳು ಜೀವನದ ಮುಖ್ಯ ಭಾಗಗಳಾಗಿದ್ದರೂ, ಅಂತಿಮವಾಗಿ ಸುಖ, ಶಾಂತಿ, ನೆಮ್ಮದಿ, ಹುಡುಕಾಟವೇ ನಮಗೆ ಮುಖ್ಯ. ವಿನಯ್ ಹೀರೆಮಟ್ ಅವರ ಅನುಭವಗಳು ಹಲವರಿಗೆ ಇದು ಒಂದು ಪಾಠ, ವಿಶೇಷವಾಗಿ ಉದ್ಯಮಶೀಲತೆ ಅಥವಾ ವೃತ್ತಿ ಪ್ರಗತಿಯಲ್ಲಿ ಮುನ್ನಡೆಯಲು ಬಯಸುವವರಿಗೆ.