BSNL PLANS: ಅನ್ಲಿಮಿಟೆಡ್ ಕರೆ ಮತ್ತು ಡೇಟಾ ಕಮ್ಮಿ ಬೆಲೆಗೆ ಲಭ್ಯ ಬರೋಬ್ಬರಿ 180 ದಿನ.
BSNL ನ ಕೈಗೆಟುಕುವ ಯೋಜನೆ 180 ದಿನಗಳ ಅನಿಮಿತ ಕರೆ ಮತ್ತು ಡೇಟಾ.
ಭಾರತ್ ಸಂಚಾರ ನಿಗಮ ಲಿಮಿಟೆಡ್ ಭಾರತದ ಸರ್ಕಾರಿ ವಡೆತನದ ದೂರ ಸಂಪರ್ಕ ಕಂಪನಿ ಇದಾಗಿದ್ದು ತನ್ನ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಸೇವೆಗಳನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಶಾಪನ್ನು ಮೂಡಿಸಿದೆ ಇತ್ತೀಚೆಗೆ ಬಿ ಎಸ್ ಎನ್ ಎಲ್ ತನ್ನ ಹೊಸ ಬಜೆಟ್ ಸ್ನೇಹಿ ರಿಚಾರ್ಜ್ ಯೋಜನೆಯನ್ನು ಪರಿಚಯ ಮಾಡಿದೆ ಇದು 180 ದಿನಗಳ ಕಾಲ ದೀರ್ಘಾವಧಿಯ ಮಾನ್ಯತೆಯನ್ನು ಹೊಂದಿದೆ ಅನಿಮೇತ ಕರೆಗಳು ಮತ್ತು ಡೇಟಾ ಸೌಲಭ್ಯವನ್ನು ಜನರಿಗೆ ಒದಗಿಸುತ್ತದೆ ಈ ಯೋಜನೆಯು ಗ್ರಾಹಕರಿಗೆ ಆರ್ಥಿಕವಾಗಿ ಲಾಭದಾಯಕವಾಗಿದ್ದು ಖಾಸಗಿ ಟೆಲಿಕಾಂ ಕಂಪನಿಗಳಿಗೆ ತೀವ್ರ ಪೈಪೋಟಿಯನ್ನು ಮಾಡುತ್ತಿದೆ.
ಈ ಯೋಜನೆಯ ವಿಶೇಷತೆಗಳೇನು?
ಈ BSNL ರಿಚಾರ್ಜ್ ಯೋಜನೆಯ ಕೇವಲ 750 ರೂಪಾಯಿಗೆ ಲಭ್ಯವಿದ್ದು, ಆರು ತಿಂಗಳು, ಅಂದರೆ 180 ದಿನಗಳ ಮಾನ್ಯತೆಯನ್ನು ಒದಗಿಸುತ್ತದೆ. ಆಕರ್ಷಣಗಳು ಈ ಕೆಳಗಿನಂತೆವೆ: ಓದಿ ತಿಳಿದುಕೊಳ್ಳಿ.
ಅನಿಯಮಿತ ಕರೆ ಸೌಲಭ್ಯಗಳು.
ಈ ಯೋಜನೆಯ ಅಡಿಯಲ್ಲಿ ಗ್ರಾಹಕರು ಸ್ಥಳೀಯ ಎಸ್ಟಿಡಿ ಹಾಗೂ ರೋಮಿಂಗ್ ಕರೆಗಳನ್ನು ಯಾವುದೇ ಮಿತಿ ಇಲ್ಲದೆ ಮಾಡಬಹುದಾಗಿದೆ. ಇದರಿಂದ ದೀರ್ಘಾವಧಿಯ ಸಂಪರ್ಕದ ಚಿಂತೆ ಇಲ್ಲದೆ ಗ್ರಾಹಕರು ತಮ್ಮ ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಸಂಪರ್ಕ ಮಾಡಬಹುದು.
ದೈನಂದಿನ ಡೇಟಾ ಯೋಜನೆ.
ಈ ಯೋಜನೆಯು ಪ್ರತೀ ದಿನ ಒಂದು ಜಿಬಿ ಐ ಸ್ಪೀಡ್ ಡಾಟಾವನ್ನು ಕೊಡುತ್ತದೆ. ಒಟ್ಟು 180 ದಿನಗಳಲ್ಲಿ 180 ಜೀವಿ ಡೇಟಾ ದೊರೆಯುತ್ತದೆ. ದೈನಂದಿನ ಡೇಟಾ ಮಿತಿಯನ್ನು ಮೀರಿದ ಬಳಿಕ ಗ್ರಾಹಕರು 40kbps ವೇಗದಲ್ಲಿ ಇಂಟರ್ನೆಟ್ ಬಳಕೆ ಮಾಡಿಕೊಳ್ಳಬಹುದು. ಇದು ಮೂಲಭೂತ ಇಂಟರ್ನೆಟ್ ಅಗತ್ಯಗಳಿಗೆ ಸಾಕಾಗುತ್ತದೆ.
ಉಚಿತವಾದ ಎಸ್ಎಂಎಸ್ ಗಳು.
ಬಿಎಸ್ಎನ್ಎಲ್ ಪ್ರತಿದಿನ 100 ಉಚಿತ ಎಸ್ಎಂಎಸ್ ಸೌಲಭ್ಯಗಳನ್ನು ಈ ಯೋಜನೆ ಒದಗಿಸುತ್ತದೆ. ಇದರಿಂದ ಗ್ರಾಹಕರು ತಮ್ಮ ಸಂದೇಶವನ್ನು ಯಾವುದೇ ತೊಂದರೆ ಇಲ್ಲದೆ ಕಳುಹಿಸಬಹುದು.
ಯಾರಿಗೆ ಈ ಯೋಜನೆ ಸೂಕ್ತವಾಗಿರುತ್ತದೆ?
ಈ ಯೋಜನೆಯನ್ನು ಬಿಎಸ್ಎನ್ಎಲ್ ವಿಶೇಷವಾಗಿ ಜಿಪಿ 2 ವರ್ಗದ ಗ್ರಾಹಕರಿಗೆ ರೂಪಿಸಿದೆ. ಜಿಪಿ 2 ವರ್ಗವು ತಮ್ಮ ಹಿಂದಿನ ರಿಚಾರ್ಜ್ ನ ಮಾನ್ಯತೆ ಮುಗಿದ ಏಳು ದಿನಗಳಿಂದ 165 ದಿನಗಳ ಒಳಗಡೆ ರಿಚಾರ್ಜ್ ಮಾಡದೆ ಇರುವ ಗ್ರಾಹಕರನ್ನು ಒಳಗೊಂಡಿರುತ್ತದೆ. ಈ ಗ್ರಾಹಕರಿಗೆ ತಮ್ಮ ಸಂಖ್ಯೆಯನ್ನು ಸಕ್ರಿಯವಾಗಿ ಇಡಲು ಹಾಗೂ ದೀರ್ಘ ಅವಧಿಯ ಸಂಪರ್ಕವನ್ನು ಕಾಯ್ದಿರಿಸಲು ಈ ಯೋಜನೆ ಒಂದು ಉತ್ತಮ ಅವಕಾಶವೆಂದು ಹೇಳಬಹುದಾಗಿದೆ. ಈ ಯೋಜನೆಯು ಆಗಾಗ ರಿಚಾರ್ಜ್ ಮಾಡುವ ತೊಂದರೆಯನ್ನು ತಪ್ಪಿಸಲು ಇಷ್ಟಪಡುವ ಅವರಿಗೆ ಹಾಗೂ ಕಡಿಮೆ ವೆಚ್ಚದಲ್ಲಿ ದೀರ್ಘಕಾಲಿನ ಸಂಪರ್ಕವನ್ನು ಬಳಸುವ ಅವರಿಗೆ ಇದು ಒಂದು ಒಳ್ಳೆಯ ಯೋಜನೆ ಎಂದು ಹೇಳಬಹುದು. ವಿದ್ಯಾರ್ಥಿಗಳು, ವೃದ್ಧರು ಅಥವಾ ಕಡಿಮೆ ಇಂಟರ್ನೆಟ್ ಬಳಸುವವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.
ಇದನ್ನು ಓದಿ: ಗೃಹಲಕ್ಷ್ಮಿ, ಇನ್ನೂ ಬಾಕಿ ಉಳಿದಿರುವ ಹಣ ಒಟ್ಟು ಆರು ಸಾವಿರ ರೂಪಾಯಿಗಳು ಈ ದಿನದಂದು ನಿಮ್ಮ ಖಾತೆಗೆ ಜಮಾ ಆಗಲಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
ಬಿಎಸ್ಎನ್ಎಲ್ ಯೋಜನೆಯ ಲಾಭಗಳೇನು?
ಕೈಗೆಟುಕುವ ಬೆಲೆಯಲ್ಲಿ, ಕೇವಲ ರೂಪಾಯಿ 750ಗೆ 180 ದಿನಗಳ ಕಾಲ ಅನಿಯಮಿತ ಕರೆ, ಡೇಟಾ ಹಾಗೂ ಎಸ್ಎಂಎಸ್ ಸೌಲಭ್ಯಗಳು, ಹಾಗೂ ಇತರ ಟೆಲಿಕಾಂ ಕಂಪನಿಗಳ ಯೋಜನೆಗಳಿಗೆ ಹೋಲಿಸಿದರೆ ಇದು ತುಂಬಾ ಆರ್ಥಿಕವಾಗಿ ಇದೆ ಎಂದು ಹೇಳಬಹುದು.
- ದೀರ್ಘ ಅವಧಿಯ ಮಾನ್ಯತೆ, ಆರು ತಿಂಗಳ ಮಾನ್ಯತೆಯು ಗ್ರಾಹಕರಿಗೆ ಆಗಾಗ ರಿಚಾರ್ಜ್ ಮಾಡುವ ಒತ್ತಡವನ್ನು ಕಡಿಮೆ ಮಾಡುತ್ತದೆ.
- ವಿಶ್ವಾಸಾರ್ಹ ಸರ್ಕಾರಿ ವಡೆತನದ ಕಂಪನಿ ಇದಾಗಿದ್ದು ಬಿಎಎಸ್ಎನ್ಎಲ್ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಶ್ವಾಸಾರ್ಹ ಸಂಪರ್ಕವನ್ನು ಒದಗಿಸುತ್ತದೆ.
- ಬಜೆಟ್ ಸ್ನೇಹಿ, ಕಡಿಮೆ ಬೆಲೆಯಲ್ಲಿ ಒಂದು ಉತ್ತಮ ಸೌಲಭ್ಯವನ್ನು ಒದಗಿಸುವ ಈ ಯೋಜನೆಯು ಎಲ್ಲಾ ವರ್ಗದ ಗ್ರಾಹಕರಿಗೆ ಸೂಕ್ತವಾಗಿರುತ್ತದೆ ಎಂದು ಹೇಳಬಹುದು.
ಇತರ ಟೆಲಿಕಾಂ ಕಂಪನಿಗಳಿಗೆ ಹೋಲಿಕೆ.
ಏರ್ಟೆಲ್, ಜೀಯೊ ಮತ್ತು ವಿ ಐ ಗಳಂತಹ ಖಾಸಗಿ ಟೆಲಿಕಾಂ ಕಂಪನಿಗಳು ಸಾಮಾನ್ಯವಾಗಿ ತಮ್ಮ ದೀರ್ಘಾವಧಿಯ ಯೋಜನೆಗಳಿಗೆ ಹೆಚ್ಚಿನ ಹಣವನ್ನು ವಿಧಿಸುತ್ತವೆ, ಆದರೆ ಬಿಎಸ್ಎನ್ಎಲ್ 750 ರೂಪಾಯಿ ಯೋಜನೆಯು ಕಡಿಮೆ ಬೆಲೆಯಲ್ಲಿ ಸಮಾನ ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಹಕರ ಗಮನವನ್ನು ತಿಳಿಯುತ್ತಿದೆ. ಜೊತೆಗೆ ಬಿಎಸ್ಎನ್ ಎಲ್ ನನ್ನ ವ್ಯಾಪಕ ಜಾಲವು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸಂಪರ್ಕವನ್ನು ಕೊಡುತ್ತಿದೆ. ಇದು ಖಾಸಗಿ ಕಂಪನಿಗಳಿಗಿಂತ ಒಂದು ಹೆಜ್ಜೆ ಮುಂದೆ ಇದೆ ಎಂದು ಹೇಳಬಹುದು.
ರಿಚಾರ್ಜ್ ಮಾಡುವುದು ಹೇಗೆ?
ಗ್ರಾಹಕರು ಈ ಯೋಜನೆಯನ್ನು ಬಿಎಸ್ಎನ್ಎಲ್ ಅಧಿಕೃತ ವೆಬ್ಸೈಟ್ My BSNL app ಅಥವಾ [Paytm, PhonePay, Google Pay], ಇನ್ನೂ ಮುಂತಾದ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ರಿಚಾರ್ಜ್ ಮಾಡಬಹುದಾಗಿದೆ. ಇದಲ್ಲದೆ, ಸಮೀಪದ ಬಿಎಸ್ಎನ್ಎಲ್ ಅಂಗಡಿಗಳು ಅಥವಾ ಅಧಿಕೃತ ಏಜೆಂಟ್ಗಳ ಮೂಲಕ ರೀಚಾರ್ಜ್ ಮಾಡಿಸಿಕೊಳ್ಳಬಹುದು.
ಸ್ನೇಹಿತರೆ, ಕೊನೆದಾಗಿ ಹೇಳುವುದೇನೆಂದರೆ BSNL 750 ರೂಪಾಯಿ ರಿಚಾರ್ಜ್ ಯೋಜನೆಯು ಕೈಗೆ ಎಟುಕುವ ಬೆಲೆಯಲ್ಲಿ ದೀರ್ಘ ಅವಧಿಯ ಸಂಪರ್ಕವನ್ನು ಬಯಸುವ ಗ್ರಾಹಕರಿಗೆ ಒಂದು ಉತ್ತಮ ಆಯ್ಕೆ ಎಂದು ಹೇಳಬಹುದು. ಉಚಿತ ಎಸ್ಎಂಎಸ್ ಸೌಲಭ್ಯಗಳನ್ನು ಹೊಂದಿದೆ. ಇದು ಉತ್ತಮ ಯೋಜನೆ ಯೋಜನೆಯಾಗಿದ್ದು, ವಿಶೇಷವಾಗಿ GP2 ವರ್ಗದ ಗ್ರಾಹಕರಿಗೆ ಸೂಕ್ತವಾಗಿದೆ. ಒಂದು ವೇಳೆ ನೀವು ಆಗಾಗ ರಿಚಾರ್ಜ್ ಮಾಡುವ ತೊಂದರೆಯಿಂದ ದೂರವಾಗಲು ಹಾಗೂ ಕಡಿಮೆ ವೆಚ್ಚದಲ್ಲಿ ವಿಶ್ವಾಸಾರ್ಹ ಸಂಪರ್ಕವನ್ನು ಕಾಯ್ದಿರಿಸಲು ಬಯಸಿದರೆ ಬಿಎಸ್ಎನ್ಎಲ್ ನ ಈ ಯೋಜನೆ ನಿಮಗಾಗಿ ಇದೆ ಎಂದು ಹೇಳಬಹುದು.
ಸ್ನೇಹಿತರೆ, ಇದೇ ರೀತಿ ಪ್ರತಿನಿತ್ಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.