Directer A .T. Raghu; ಅವರು 76 ನೇ ವಯಸ್ಸಿನಲ್ಲಿ ಕಿಡ್ನಿ ಸಮಸ್ಯೆ ಇಂದ ನಿಧನರಾಗಿದ್ದಾರೆ.

Spread the love

ರೆಬಲ್ ಸ್ಟಾರ್ ಅಂಬರೀಷ್ ರವರಿಗೆ 27 ಸಿನಿಮಾ ನಿರ್ದೇಶನ ಮಾಡಿದ ಖ್ಯಾತ ನಿರ್ದೇಶಕ ಎಟಿ ರಘು ನಿನ್ನೆ ಮಾರ್ಚ್ 21 ರಂದು ಕೊನೆ ಉಸಿರೆಳೆದಿದ್ದಾರೆ.

ನಿರ್ದೇಶಕ ಎ.ಟಿ. ರಘು

ಅವರು 76 ನೇ ವಯಸ್ಸಿನಲ್ಲಿ ಕಿಡ್ನಿ ಸಮಸ್ಯೆ ಇಂದ ನಿಧನರಾಗಿದ್ದಾರೆ. ‘ಮಂಡ್ಯದ ಗಂಡು’ ಇನ್ನೂ ಮುಂತಾದ ಜಯಗಳಿಸಿದ ಸಿನಿಮಾ ಸೇರಿದಂತೆ 55ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ A T ರಘು ರವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ನಿಧಾನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.ಲೆಜೆಂಡ್ ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ A T ರಘು ರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರತಿಯೊಬ್ಬರೂ ಪ್ರಾರ್ಥಿಸೊಣ.

ಶುಭ ಶುಕ್ರವಾರ ಹೊಸ ಸಿನಿಮಾಗಳು ರಿಲೀಸ್ ಆಗುವ ಶುಭ ದಿನವೇ ಕನ್ನಡ ಚಿತ್ರರಂಗ ಒಂದು ಶಾಂಕಿಂಗ್ ಸುದ್ದಿ ಕೆಳಿದೆ. ಶುಭ ಶುಕ್ರವಾರದ ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕ ಎಟಿ ರಘು ನಮ್ಮನ್ನ
ಆಗಲಿ  ಹಿಂತಿರುಗಿ ಬಾರದ ಲೋಕಕ್ಕೆ ತೆರಳಿದ್ದಾರೆ.
ಅಂಬರೀಶ್ ನಾಯಕ ನಟನಾಗಿ ನಟಿಸಿರುವ ‘ಮಂಡ್ಯದ ಗಂಡು’ ಇನ್ನೂ ಜನಪ್ರಿಯ ಚಲನಚಿತ್ರ ಗಳು ಸೇರಿದಂತೆ ಒಟ್ಟು 55 ಸಿನಿಮಾಗಳಿಗೆ ಎಟಿ ರಘು ಅವರು ಆಕ್ಷನ್ ಕಟ್ ಹೇಳಿದಾರೆ. ರಘು ರವರ ನಿಧನ ಸುದ್ದಿ ತಿಳಿದು ಚಿತ್ರರಂಗದ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

ಅವರ ಜೊತೆಗಿನ ಒಡನಾಟದ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅವರು ಮಾತನಾಡಿದ್ದಾರೆ. ‘ತುಂಬ ನೋವಾಗುತ್ತದೆ. ನನಗೆ ಎ.ಟಿ. ರಘು ಅವರು ತುಂಬಾ ಆತ್ಮೀಯರು. ಸಿನಿಮಾ ಬಿಟ್ಟು ಅವರಿಗೆ ಬೇರೆ ಏನೂ ಗೊತ್ತಿರಲಿಲ್ಲ. ಮಗು ರೀತಿ ಇದ್ದರು. ಯಾರ ಮನಸ್ಸನ್ನೂ ಅವರು ನೋಯಿಸವರಲ್ಲ. ನಾನು ರಘು ಜೊತೆ 7 ಸಿನಿಮಾ ಮಾಡಿದಿವಿ’ ಎಂದು ದೊಡ್ಡಣ್ಣ  ಅವರು ಹೇಳಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿನಿಪ್ರಿಯರು ಕೋರಿದ್ದಾರೆ. ನಿರ್ದೇಶಕ ರಘು ಅವರಿಗೆ 76 ವರ್ಷ ವಯಸ್ಸಾಗಿತ್ತು.

ಗುರುವಾರ ಮಾರ್ಚ್​ 20 ರಂದು ರಾತ್ರಿ ಅವರು ಕೊನೆ ಉಸಿರೆಳೆದು ನಮ್ಮ ನಗಲಿದಗದಾರೆ. ಅನಾರೋಗ್ಯದಿಂದ ರಘು ತುಂಬ ಬಳಲುತ್ತಿದ್ದರು. ನಿರಂತರವಾಗಿ ಅವರು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಬೆಂಗಳೂರಿನ ಆರ್​ಟಿ ನಗರದ ಮಠದಹಳ್ಳಿಯಲ್ಲಿ ಅವರ ಪಾರ್ಥಿವ ಶರೀರ ಇಡಲಾಗಿತ್ತು. ಮಾರ್ಚ್ 21ಮದ್ಯಾಹ್ನ 2 ಗಂಟೆ ಬಳಿಕ
ಬೆಂಗಳೂರಿನ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು. ಈ ಘಟನೆ ಕನ್ನಡ ಚಲನಚಿತ್ರರಂಗಕ್ಕೆ ನುಂಗಲಾರದ ತುತ್ತಾಗಿದೆ.

ಎಟಿ ರಘು ಅವರು ಕೊಡುವ ಸಮುದಾಯಕ್ಕೆ ಸೇರಿದವರು ಇವರು ಹುಟ್ಟಿದ್ದು ಕೊಡಗಿನಲ್ಲಿ ಚಲನಚಿತ್ರದ ಮೇಲೆ ಅಪಾರ ಆಸಕ್ತಿ ಹೊಂದಿದ್ದವರಾಗಿದ್ದರು. ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕರನಾಗಿ, ಚಿತ್ರಕಥೆ ಬರಹಗಾರನಾಗಿ ಗುರುತಿಸಿಕೊಂಡರು. ಅವರು ಕನ್ನಡ ಮಾತ್ರವಲ್ಲದೆ ಹಿಂದಿಯಲ್ಲೂ ಸಿನಿಮಾ ನಿರ್ದೇಶನ ಮಾಡಿದ್ದಾರೆ.

WhatsApp Group Join Now
Telegram Group Join Now       
ನ್ಯಾಯ ನೀತಿ ಧರ್ಮ ಇದು AT ರಘು ರವರ ಚೊಚ್ಚಲ ಸಿನಿಮಾ. ಈ ಸಿನಿಮಾ 1980 ರಲ್ಲಿ ಬಿಡುಗಡೆ ಆಗಿತ್ತು. ಅಂಬರೀಷ್, ಆರತಿ, ದ್ವಾರಕೀಶ್ ಅವರು ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಂಡಿತು. ಈ ಸಿನಿಮಾ ಮೂಲಕ ಅಂಬರೀಷ್ ಮತ್ತು ರಘು ನಡುವೆ ಒಳ್ಳೆಯ ಒಡನಾಟ ಬೆಳೆಯಿತು. ಅಂಬರೀಷ್ ನಟನೆಯ ‘ಆಶ’, ‘ಮಂಡ್ಯದ ಗಂಡು’, ‘ಮಿಡಿದ ಹೃದಯಗಳು’ ಸೇರಿದಂತೆ ಒಟ್ಟು 27 ಸಿನಿಮಾಗಳನ್ನು ರಘು ನಿರ್ದೇಶನ ಮಾಡಿದ್ದರು.ರಘು ಅವರು ಹಿಂದಿ, ಮಲಯಾಳಂ ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾರೆ. ‘ಆಶ’ ಚಿತ್ರವನ್ನು ರಘು ರವರು ಹಿಂದಿಗೆ ರಿಮೇಕ್ ಮಾಡಿದರು ಈ ಸಿನಿಮಾದಲ್ಲಿ ರಜನೀಕಾಂತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದಾರೆ ಸಿನಿಮಾದ ಹೆಸರು ‘ಮೆರಿ ಅದಾಲತ್’ 1984 ರಲ್ಲಿ ಈ ಸಿನಿಮಾ ರಿಲೀಸ್ ಆಯಿತು.

Leave a Comment