Dr puneet rajkumar biography book

Dr puneet rajkumar biography book

ಡಾ” ಪುನೀತ್ ರಾಜ್‍ಕುಮಾರ್ ರವರ ಜೀವನ ಚರಿತ್ರೆಯನ್ನು ಪುಸ್ತಕ ರೂಪದಲ್ಲಿ ಬರೆದ ಅಶ್ವಿನಿ ಮೇಡಂ.

ನಟ ಡಾ” ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಯವರು ಪತಿಯ ಜೀವನ ಚರಿತ್ರೆಯನ್ನು ಪುಸ್ತಕ ರೂಪದಲ್ಲಿ ಬರೆದಿದ್ದಾರೆ. ಈ ಪುಸ್ತಕಕ್ಕೆ ಹೆಸರು ಅಪ್ಪು ಎಂದು ಇಡಲಾಗಿದೆ, ಪುಸ್ತಕದ ಕವರ್ ಪೇಜ್ ಬಿಡುಗಡೆ ಮಾಡಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಪುಸ್ತಕ ಬಿಡುಗಡೆ ಬಗ್ಗೆ ಘೋಷಣೆ ಮಾಡಿದರು.

ಅಭಿಮಾನಿಗಳಿಗೆ ಇಷ್ಟವಾದ ಹೆಸರು ಅಪ್ಪು ಆಗಿರುವುದರಿಂದ ಪುಸ್ತಕದ ಹೆಸರು ಅಪ್ಪು ಯೆಂದು ನಾಮಕರಣ ಮಾಡಿದ್ದಾರೆ. ಪುನೀತ್ ಬಯೋಗ್ರಫಿಗೆ ‘ಅಪ್ಪು ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಹಾಗೂ ಪ್ರಕೃತಿ ಬನವಾಸಿ ಇಬ್ಬರು ಸೇರಿ ಅಪ್ಪು ಪುಸ್ತಕ ಬರೆದಿದ್ದಾರೆ. ಈ ಪುಸ್ತಕ ಬರೆಯಲು 2 ವರ್ಷಗಳ ಕಾಲ ಇಬ್ಬರು ಶ್ರಮಿಸಿದ್ದಾರೆ. ಇವಾಗ ಪುಸ್ತಕದ ಬುಕ್‌ನ ಕವರ್ ಪೇಜ್ ಹೇಗಿದೆ ಎಂಬುದನ್ನು ಪುನೀತ್‌ ರಾಜ್ ಕುಮಾರ ಹುಟ್ಟು ಹಬ್ಬದ ದಿನದಂದು ಅಂದರೆ ಮಾ.17 ರಂದು ಅಶ್ವಿನಿ ಯವರು ರಿವೀಲ್ ಮಾಡಿದ್ದಾರೆ.

ಪುಸ್ತಕದ ಕವರ್ ಪೇಜ್ ಬಿಡುಗಡೆ ಮಾಡುವಾಗ ಅಶ್ವಿನಿ ಯವರ ಜೊತೆ ಅಪ್ಪುವಿನ ಇಬ್ಬರು ಮಕ್ಕಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಈ ಅಪ್ಪು ಬಯೋಗ್ರಫಿ ಪುಸ್ತಕ ಹೊರಗಡೆ ಬರುವ ನ್ಯೂಸ್ ಕೇಳಿ ಅಭಿಮಾನಿಗಳು ತುಂಬಾ ಖುಷಿ ಪಟ್ಟಿದ್ದಾರೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ರವರ ಪತ್ನಿ ಅಶ್ವಿನಿಯವರೇ ಈ ಪುಸ್ತಕ ಬರೆದಿದ್ದಾರೆ ಎಂದು ಕೇಳಿ ಪುಸ್ತಕದ ಬಿಡುಗಡೆಗಾಗಿ ಕಾತುರದಿಂದ ಕಾಯುತಿದ್ದಾರೆ. ಇನ್ನೆನು, ಇನ್ನಷ್ಟೇ ‘ಅಪ್ಪು’ ಬಯೋಗ್ರಫಿ ಬಿಡುಗಡೆ ದಿನದ, ದಿನಾಂಕ ಗೊತ್ತಾಗಬೇಕಿದೆ ಅಷ್ಟೇ.

Leave a Comment