Driving license and passport will be cancelled if you perform Namaz on the road, police warn,
ರಸ್ತೆಯಲ್ಲಿ ನಮಾಜ್ ಮಾಡಿದ್ರೆ ಡ್ರೈವಿಂಗ್ ಲೈಸೆನ್ಸ್ ಮತ್ತು ಪಾಸ್‌ಪೋರ್ಟ್, ರದ್ದು, ಪೊಲೀಸ್ ರಿಂದ ಎಚ್ಚರಿಕೆ
ಮೀರತ್ (ಮಾ. 28) ರಂಜಾನ್ ತಿಂಗಳ ಕಡೆಯ ಶುಕ್ರವಾರ ನಮಾಜ್ ಪ್ರಾರ್ಥನೆಯು ಹತ್ತಿರದ ಮಸೀದಿ, ನಿಗದಿತ ಈದ್ಗಾ ಮೈದಾನಗಳಲ್ಲಿ ಮಾಡಬೇಕು ಎಂದು ಪೊಲೀಸರು ತಿಳಿಸಿದರು. ರಸ್ತೆಯಲ್ಲಿ ನಮಾಜ್ ಮಾಡಿದರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕಾಗಿತದೆ ಎಂದು ಎಚ್ಚರಿಕೆ ನೀಡಿದ್ದಾರೆ. ರಸ್ತೆಯಲ್ಲಿ ನಮಾಜ್ ಮಾಡುವವರಿಗೆ ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ರದ್ದು ಮಾಡಲಾಗುತ್ತದೆ ಎಂದು ಉತ್ತರ ಪ್ರದೇಶದ ಮೀರತ್ ಪೊಲೀಸರು ಸೂಚನೆ ನೀಡಿದ್ದಾರೆ. ನಮಾಜ್ ಪ್ರಾರ್ಥನೆಗೆ ಮಸೀದಿ ಅಥವಾ ನಿಗದಿತ ಈದ್ಗಾ ಮೈದಾನಗಳಲ್ಲಿ ಮಾಡಬೇಕು. ನಿಗದಿತ ಸ್ಥಳಗಳಲ್ಲಿ ಮುಸ್ಲಿಮ್ ಸಮದಾಯಕ್ಕೆ ಎಲ್ಲಾ ಸೌಲಭ್ಯದ ಜೊತೆ ಭದ್ರತೆ ಇರುತ್ತದೆ. ಆದರೆ, ರಸ್ತೆಯಲ್ಲಿ ನಮಾಜ್ ಮಾಡಿದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುದೆ ಎಂದು ಮೀರತ್ ಸೂಪರಿಡೆಂಟ್ ಆಫರ್ ಪೊಲೀಸ್ ಆಯುಷ್ ವಿಕ್ರಮ್ ಸಿಂಗ್ ಬಹಿರಂಗವಾಗಿ ಎಚ್ಚರಿಕೆ ನೀಡಿದರು.
ಮೀರತ್ ನ ಪೊಲೀಸರು ಎಲ್ಲಾ ಜಿಲ್ಲೆಗಳಲ್ಲಿ, ಹಾಗೂ ತಾಲೂಕು ಕೇಂದ್ರಗಳಲ್ಲಿ ಪೊಲೀಸರ ಜೊತೆ ಸಭೆ ನಡೆಸಿದ್ದಾರೆ. ಮುಸ್ಲಿಮ್ ಸಮುದಾಯಕ್ಕೆ ಯಾವುದೇ ತೊಂದರೆ ಆಗಬಾರದು; ಅವರು ಸ್ವತಂತ್ರವಾಗಿ ರಂಜಾನ್ ಹಬ್ಬ ಆಚರಣೆ ಮಾಡಬೇಕು, ತಮ್ಮ ತಮ್ಮ ಮಸೀದಿಯಲ್ಲಿ ಅಥವಾ ಈದ್ಗಾ ಮೈದಾನದಲ್ಲಿ ನಮಾಜ್ ಆಚರಣೆ ನಡೆಸಲು ಅವಕಾಶ ಮಾಡಬೇಕು ಎಂದು ಮಿರತ್ ಎಸ್ ಪಿ ಹೇಳಿದ್ದಾರೆ. ಅದೆ ಸಮಯದಲ್ಲಿ, ರಸ್ತೆಯಲ್ಲಿ ನಮಾಜ್ ಯಾರಾದರೂ ಮಾಡಿದರೆ ಅಥವಾ ರಸ್ತೆ ಬಂದ್ ಮಾಡಿ ನಮಾಜ್ ಮಾಡಲು ಯತ್ನಿಸಿದರೆ, ಅವರ ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಖಚಿತ ಪಡಿಸಿದ್ದಾರೆ. ಹಾಗೆ ಡ್ರೈವಿಂಗ್ ಲೈಸೆನ್ಸ್ , ಪಾಸ್‌ಪೋರ್ಟ್ ಇಲ್ಲದವರಿಗೆ ಬೇರೆ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ಕಾಗಿ ಸೂಚನೆ ನೀಡಿದ್ದಾರೆ.
ಮುಸ್ಲಿಮರು ರಸ್ತೆಯಲ್ಲಿ ಯಾಕೆ ನಮಾಜ್ ಮಾಡುತ್ತಾರೆ?
ಎಸ್ಪಿ ಶಾಸಕ ಅಬು ಅಜ್ಮಿ ರವರು ಇದಕ್ಕೆ ಕಾರಣ ಕೊಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಮೀರತ್ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಯಾರೇ ಆದರೂ ಕೋಮು ಗಲಭೆ ಎಬ್ಬಿಸುವ ಪ್ರಯತ್ನ ಮಾಡಿದರೆ ಅವರಿಗೆ ಕಠಿಣವಾದ ಕಠಿಣ ಕ್ರಮ ಕೈಗೊಳ್ಳಲಾಗಿವದು ಎಂದು ಹೇಳಿದರು. ಯಾವುದೇ ಧರ್ಮ, ಪಂಥವನ್ನು ಇಯಾಳಿಸು ಪ್ರಯತ್ನ ಮಾಡದಂತೆ ಎಚ್ಚರಿಸಿದ್ದಾರೆ ಸೂಚಿಸಿದ್ದಾರೆ. ಮೀರತ್ ನ ಜಿಲ್ಲೆಯಲ್ಲಿ ಪಿಎಸಿ ಪಡೆ, ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಪಡೆಗಳನ್ನು ನಿಯೋಜಿಸಲಾಗಿದೆ. ಈಗಾಗಲೇ ಪೋಲಿಸರು ಫ್ಲಾಗ್ ಮಾರ್ಚ್ ನಡೆಸುತಿದ್ದಾರೆ. ಪರಿಸ್ಥಿತಿ ಸಂಪೂರ್ಣವಾಗಿ ಪೋಲಿಸರ ನಿಯಂತ್ರಣದಲ್ಲಿದೆ. ಇಷ್ಟಿದ್ದರು ಯಾರಾದರೂ ಅಹಿತಕರ ಘಟನೆ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಿರತ್ ಪೋಲಿಸರು ಗಂಭೀರ ಎಚ್ಚರಿಕೆ ಸೂಚಿಸಿದರು.
ನಕಲಿ ಅಥವಾ ಸುಳ್ಳು ಸುದ್ದಿ ಹರಡಿ ಸಮಾಜದ ಶಾಂತಿ ಕದಡುವ ಪ್ರಯತ್ನವನ್ನು ಮಾಡಿದರೆ ಅಂತಹವರಿಗೆ ಊಹೆಗೂ ಮೀರಿದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮೀರತ್ ಪೊಲೀಸರು ಸೂಚನೆ ನೀಡುತ್ತ ಎಚ್ಚರಿಸಿದರು. ಎಲ್ಲಾ ಮುಖಂಡರ ಜೊತೆ ಮಾತುಕತೆ ನಡೆಸಿರುವ ಮೂಲಕ ಪೊಲೀಸರು ಶಾಂತಿ ಸೌಹಾರ್ಧತೆ ಕಾಪಾಡುವಂತೆ ಮನವಿ ಸಲ್ಲಿಸಿದ್ದಾರೆ. ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ ಪೊಲೀಸ್ ನಿಯೋಜನೆಗಳನ್ನು ಮಾಡಲಾಗಿದೆ ಎಂದು ಮೀರತ್ ನ ಪೊಲೀಸರು ಹೇಳಿದ್ದಾರೆ.
ಈ ಸರತಿ ಮೀರತ್, ಪೊಲೀಸರು ಹೆಚ್ಚು ಡ್ರೋನ್ ಬಳಸಿಕೊಳ್ಳುತ್ತಿದ್ದಾರೆ. ಡ್ರೋನ್‌ಗಳಿಂದ ಗಳಿಂದ ಹಲವಾರು ಪ್ರದೇಶಗಳಲ್ಲಿ ಕಣ್ಗಾವಲು ಇರಿಸುವ ಬಗ್ಗೆ ಪೋಲಿಸರು ತಿಳಿಸಿದ್ದಾರೆ.