Farmers invited to apply for irrigation subsidy, apply now.
ರೈತರಿಗೆ ನೀರಾವರಿ ಸಹಾಯಧನ ಪಡೆಯಲು ಅರ್ಜಿಗೆ ಆಹ್ವಾನ, ಇವಾಗ್ಲೇ ಅಪ್ಲೈ ಮಾಡಿ.
ಕೃಷಿ ಭಾಗ್ಯ ಯೋಜನೆ ಕರ್ನಾಟಕದ ರಾಜ್ಯ ಸರ್ಕಾರದಿಂದ ಕೃಷಿಗೆ ನೀಡಲಾಗುವ ಒಂದು ಪ್ರಮುಖ ಯೋಜನೆಯಾಗಿದೆ. ಇದರ ಮೂಲಕ ರೈತರು ಆಧುನಿಕ ನೀರಾವರಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಯೋಜನಿಯಲ್ಲಿ ರೈತರಿಗೆ ನೀರಾವರಿ ಸಬ್ಸಿಡಿ ನೀಡಲಾಗುತ್ತದೆ. ಇದರಿಂದ ಅವರು ಡ್ರಿಪ್ಸ್ ಅಥವಾ ಸ್ಪ್ರಿಂಕ್ಲರ್ ನೀರಾವರಿ ವ್ಯವಸ್ಥೆಯನ್ನು ಸ್ಥಾಪಿಸಲು ಆರ್ಥಿಕ ಸಹಾಯಧನ ಪಡೆಯಬಹುದು. ಈ ಯೋಜನೆಯ ಉದ್ದೇಶ ಏನೆಂದರೆ ನೀರಿನ ಪರಿಣಾಮಕಾರಿ ಬಳಕೆ, ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆಯುವ ಹಾಗೂ ರೈತರ ಆದಾಯವನ್ನು ಹೆಚ್ಚಿಸಿಕೊಳ್ಳುವುದು.
ಈ ಯೋಜನೆಯ ಅರ್ಹತೆಗಳೇನು?
1. ಕರ್ನಾಟಕದ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯನ್ನು ಪಡೆಯಬಹುದು.
2. ಜಮೀನು ಹೊಂದಿದವರು ಅಂದರೆ ಒಡೆತನದ ಅಥವಾ ಗುತ್ತಿಗೆದಾರರು.
3. ನೀರಾವರಿ ಸೌಲಭ್ಯಗಳು ಇಲ್ಲದೆ ಇರುವ ಪ್ರದೇಶದಲ್ಲಿ ವಾಸಿಸುತ್ತಿರುವ ರೈತರು.
ಎಷ್ಟು ಸಬ್ಸಿಡಿ ಕೊಡಲಾಗುತ್ತದೆ?
• ಸ್ಪ್ರಿಂಕ್ಲರ್ ವ್ಯವಸ್ಥೆಗೆ: 50% ಇಂದ 90 ಪರ್ಸೆಂಟ್ ವರೆಗೆ ಸಬ್ಸಿಡಿ ನೀಡಲಾಗುತ್ತದೆ.
• ಡ್ರಿಪ್ ನೀರಾವರಿ ವ್ಯವಸ್ಥೆಗೆ: 90% ಸಬ್ಸಿಡಿ ಇದು ಸಣ್ಣ ರೈತರಿಗೆ ಮಾತ್ರ.
• ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಎಷ್ಟು ಸಹಾಯಧನ ಕೊಡಲಾಗುತ್ತದೆ: ಸಹಾಯಧನ ಮಿತಿ 50,000 ಇಂದ 5 ಲಕ್ಷದವರೆಗೆ ಇರುತ್ತದೆ, ಜಮೀನಿನ ಗಾತ್ರ ಮತ್ತು ಯೋಜನೆಯ ಪ್ರಕಾರವನ್ನು ಅವಲಂಬಿಸಿರುತ್ತದೆ.
ಈ ಸಹಾಯಧನವನ್ನು ಪಡೆಯಲು ಅರ್ಜಿ ಹಾಕುವುದು ಹೇಗೆ?
• ಮಾಹಿತಿ ಮಂದಿರ ಅಥವಾ ಕೃಷಿ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಸಬ್ಮಿಟ್ ಮಾಡಿ.
• ಆನ್ಲೈನ್ ಅರ್ಜಿ ಕೃಷಿ ಭಾಗ್ಯ https://raitamitra.karnataka.gov.in/ ನಲ್ಲಿ ನೊಂದಣಿ ಮಾಡಿ.
• ಯೋಜನೆ ಅನುಮೋದನೆ: ತಾಂತ್ರಿಕ ತಂಡವು ಸ್ಥಳ ಪರಿಶೀಲನೆ ಮಾಡಿದ ನಂತರ ಸಬ್ಸಿಡಿ ಅನುಮತಿ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳೇನು?
1. ಜಮೀನು ದಾಖಲೆ ಆದಾಯ ಪ್ರಮಾಣ ಪತ್ರ 7/12 ದಾಖಲೆ.
2. ಆಧಾರ್ ಕಾರ್ಡ್.
3. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.
ಈ ಯೋಜನೆಯ ಪ್ರಮುಖ ಪ್ರಯೋಜನಗಳು ಏನೆಂದರೆ ನೀರಿನ ಬಳಕೆಯನ್ನು 30 ಅಥವಾ 50% ಕಡಿಮೆ ಮಾಡುವುದು, ಬೆಳೆ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವುದು ಹಾಗೂ ಕೃಷಿ ಚರ್ಚೆಯನ್ನು ಖರ್ಚನ್ನು ಕಡಿಮೆ ಮಾಡುವುದು. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಭಾಗದ ಫ್ರೀ ನಂಬರ್ 1800-425-1556 ಈ ನಂಬರಿಗೆ ಕರೆ ಮಾಡಿ ಅಥವಾ ಅಧಿಕೃತ ವೆಬ್ಸೈಟ್ನಲ್ಲಿಅಧಿಕೃತ ವೆಬ್ಸೈಟ್ ನಲ್ಲಿ ವಿವರವನ್ನು ತಿಳಿದುಕೊಳ್ಳಿ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ ಮತ್ತು ಜಿಲ್ಲೆಗಳು.
2,25ನೇ ವರ್ಷದ ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಪ್ರಸ್ತುತ ಕಾವೇರಿ ಜಿಲ್ಲೆಯ ರೈತರು ಏಪ್ರಿಲ್ 22, 2025ರ ಒಳಗಡೆ ತಮ್ಮ ಅರ್ಜಿಯನ್ನು ಸಲ್ಲಿಸಿ.
ಇನ್ನು ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಆರ್‌ಎಸ್‌ಕೆ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ಕೊಡಬಹುದು. ಈ ಅವಕಾಶವನ್ನು ಬಳಸಿಕೊಂಡು ಸರಕಾರದ ನೀರಾವರಿ ಸಬ್ಸಿಡಿ ಯೋಜನೆಯಿಂದ ಪ್ರಯೋಜನ ತೆಗೆದುಕೊಳ್ಳಬಹುದು.
ಇನ್ನು ಉಳಿದ ಜಿಲ್ಲೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಕೃಷಿ ವಿಭಾಗ ನಂತರ ಪ್ರಕಟಿಸಲಿದೆ. ಈ ಹೊಸ ಮಾಹಿತಿಗಾಗಿ ನಿಮ್ಮ ಸ್ಥಳೀಯ ಕೃಷಿ ಕಚೇರಿಯನ್ನು ಸಂಪರ್ಕಿಸಿ.
ಈ ಯೋಜನೆಯ ರೈತರಿಗೆ ನೀರಾವರಿ ಸೌಲಭ್ಯವನ್ನು ಸುಧಾರಿಸಲು ಮತ್ತು ಸಮರ್ಥ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತಿದೆ. ಸಬ್ಸಿಡಿ ಪಡೆಯಲು ಅರ್ಜಿ ಸಲ್ಲಿಸಿ ಮತ್ತು ಕೃಷಿ ಉತ್ಪಾದನೆಯನ್ನು ಇನ್ನು ಹೆಚ್ಚಿಸಿಕೊಳ್ಳಿ.
ದಿನನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನಲನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.