ಗೃಹಲಕ್ಷ್ಮಿ ಹಣ ಬಿಡುಗಡೆ, ಏಪ್ರಿಲ್, ಮೇ ತಿಂಗಳ ಹಣ ಖಾತೆಗೆ: ಲಕ್ಷ್ಮೀ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಏಪ್ರಿಲ್ ಹಣ ಬಿಡುಗಡೆ, ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟವಾಗಿ ಹೇಳಿಕೆ ನೀಡಿದ್ದಾರೆ.
• ಮಾರ್ಚ್ ತಿಂಗಳ ಹಣ ಮಾತ್ರ ಸ್ವಲ್ಪ ಸಮಸ್ಯೆ ಆಗಿತ್ತು.
• ಇನ್ನೂ ಒಂದು ವಾರದಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಲಿದೆ.
ಕರ್ನಾಟಕ ರಾಜ್ಯ ಸರ್ಕಾರದ ಮಹಿಳಾ ಸಬಲೀಕರಣ ಯೋಜನೆಯ ಅಡಿಯಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಹಲವಾರು ಫಲಾನುಭವಿಗಳಿಗೆ ಆರ್ಥಿಕ ಬಲ ಒದಗಿಸುತ್ತಿದೆ.
ಆದರೆ ಇತ್ತೀಚೆಗೆ ಕೆಲವು ಮಹಿಳೆಯರು “ಮಾರ್ಚ್, ಎಪ್ರಿಲ್ ತಿಂಗಳ ಹಣ ಇನ್ನೂ ಬಂದಿಲ್ಲ” ಎಂಬ ಗೊಂದಲದಲ್ಲಿ ಇದ್ದರು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಮಾತನಾಡಿ ಇನ್ನೂ ಒಂದು ವಾರದ ಒಳಗಡೆ ಫಲಾನುಭವಿಗಳ ಖಾತೆಗೆ ಜಮ ಆಗುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಇದನ್ನು ಓದಿ: FD ಯೋಜನೆಗಿಂತ ಅತಿ ಹೆಚ್ಚು ಬಡ್ಡಿ ನೀಡುವ 5 ಅತ್ಯುತ್ತಮ ಸುರಕ್ಷಿತ ಹೂಡಿಕೆಯ ಸರ್ಕಾರಿ ಉಳಿತಾಯ ಯೋಜನೆಗಳು
ಸಚಿವರ ಪ್ರಕಾರ, ಈ ಬಗ್ಗೆ ಯಾವುದೇ ಗೊಂದಲ ಮಾಡಿಕೊಳ್ಳಬಾರದು. “ಏಪ್ರಿಲ್ ತಿಂಗಳದ ಹಣ ಬಿಡುಗಡೆಗೆ ಸರ್ಕಾರ ಅನುಮೋದನೆ ಕೊಟ್ಟಿದೆ. ಬಿಲ್ ಕೂಡ ಪಾಸ್ ಮಾಡಲಾಗಿದೆ. ಬಾಕಿ ಇರುವ ಹಣ ಅಂದರೆ ಏಪ್ರಿಲ್ ತಿಂಗಳ ಹಣವನ್ನು ಮಹಿಳೆಯರ ಖಾತೆಗೆ ಇನ್ನೂ ಒಂದು ವಾರದಲ್ಲಿ ಜಮಾ ಆಗಲಿದೆ,” ಎಂದು ಅವರು ಖಚಿತವಾಗಿ ಹೇಳಿಕೆ ನೀಡಿದರು.
ಮಾರ್ಚ್ ತಿಂಗಳ ಹಣ ಮಾತ್ರ ಸ್ವಲ್ಪ ಬಿಡುಗಡೆಗೆ ತಡವಾಲಿದೆ. ಯಾಕೆಂದರೆ ಆ ಸಮಯದಲ್ಲಿ ಹಣಕಾಸು ವರ್ಷದ ಕೊನೆ (financial year-end) ಇರುವುದರಿಂದ ಸದ್ಯಕ್ಕೆ ಕೆಲವು ನಿರ್ಬಂಧಗಳು ಇರುತ್ತವೆ ಅದರಿಂದ ವಿಳಂಬವಾಗುವುದು ಎಂಬುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ರವರು ತಿಳಿಸಿದರು. ಈ ತಾತ್ಕಾಲಿಕ ತಡೆ ಬಗೆಹರಿದಿರುವುದರಿಂದ ಏಪ್ರಿಲ್ ಮತ್ತು ಮೇ ತಿಂಗಳ ಹಣವನ್ನು ಕೂಡ ಆದಷ್ಟು ಬೇಗ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.
ಬಿಜೆಪಿ ನೇತೃತ್ವದ ಕೆಲವೊಂದು ಶಕ್ತಿಗಳು ಇದರ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದರು, ಇದರ ನಿಜವಾದ ಸಂಗತಿ ಏನೆಂದರೆ ನಾವು ಬಿಲ್ ಪಾಸುಮಾಡಿದ್ದೇವೆ. ಅಧಿಕಾರಿಗಳ ತಾಂತ್ರಿಕ ಕಾರ್ಯವಿಧಾನ ಮುಗಿದ ತಕ್ಷಣ ಹಣ ಫಲಾನುಭವಿಗಳ ಖಾತೆಗೆ ಬರಲಿದೆ, ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ರವರು ಸ್ಪಷ್ಟಪಡಿಸಿದರು.
ಇನ್ನು ಪ್ರತಿಯೊಬ್ಬರ ಫಲಾನುಭವಿ ಮಹಿಳೆಯರ ಖಾತೆಗೆ (beneficiary account) ಹಣ ನೇರವಾಗಿ ಜಮಾ ಆಗುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಗೃಹಲಕ್ಷ್ಮಿ ಯೋಜನೆ ಮತ್ತೊಮ್ಮೆ ಮಹಿಳೆಯರ ಬದುಕಿನಲ್ಲಿ ಬದಲಾಗುವ ಹಾದಿಯನ್ನು ಹರಡುತ್ತಿದೆ.
ಈ ಯೋಜನೆಯಡಿಯಲ್ಲಿ ದಿನನಿತ್ಯದ ಅವಶ್ಯಕತೆಗಳಿಗೆ ಸಹಾಯ ಆಗುವಂತ ಹಣವು ದೊರೆಯುತ್ತಿದ್ದು, ಹಲವಾರು ಕುಟುಂಬಗಳು ಈ ಗೃಹ ಲಕ್ಷ್ಮಿ ಹಣದ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದರೂ,ಇನ್ನೂ ಕೆಲವರು ಇದರಲ್ಲಿ ತಾಂತ್ರಿಕ ವಿಳಂಬಗಳ ಬಗ್ಗೆ ಆಲೋಚನೆ ಮಾಡುತ್ತಿದ್ದರು.
ಇವಾಗ ಸಚಿವರ ಸ್ಪಷ್ಟನೆ ಬಳಿಕ ಮಹಿಳೆಯರಲ್ಲಿ ಭರವಸೆ ಬಂದಿದೆ. ಗೃಹಲಕ್ಷ್ಮಿಯ ಹಣದ ನಿರೀಕ್ಷೆಯಲ್ಲಿ ಇದ್ದ ಲಕ್ಷಾಂತರ ಫಲಾನುಭವಿ ಹೆಣ್ಣು ಮಕ್ಕಳಿಗೆ ಇದು ಪ್ರಯುಕ್ತ ಸುದ್ದಿ.
ಸ್ನೇಹಿತರೆ, ಇದೇ ರೀತಿ ಪ್ರತಿನಿತ್ಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೇಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.