Here is complete information on the Ganga Kalyan Yojana, a subsidy for drilling borewells for these farmers in the state.

Spread the love

Here is complete information on the Ganga Kalyan Yojana, a subsidy for drilling borewells for these farmers in the state.

ಗಂಗಾ ಕಲ್ಯಾಣ ಯೋಜನೆ ರಾಜ್ಯದಲ್ಲಿ ಈ ರೈತರಿಗೆ ಬೋರ್ವೆಲ್ ತೆಗೆಸಲು ಸಹಾಯಧನ ಈ ವಿಷಯದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಗಂಗಾ ಕಲ್ಯಾಣ ಯೋಜನೆ ಬೋರ್ವೆಲ್ ಸಹಾಯ ಧನದಿಂದ ರೈತರ ಕೃಷಿ ವ್ಯವಸ್ಥೆಗೆ ನೀರಾವರಿ ಅವಸ್ಥೆ ಸುಲಭ ಸೌಲಭ್ಯ.

ಭೂಮಿಯ ಮೇಲೆ ನೀರು ಅತ್ಯಂತ ಮುಖ್ಯವಾದದ್ದು, ನೀರು ಇಲ್ಲದೆ ಯಾವ ಜೀವಿಯು ಭೂಮಿಯ ಮೇಲೆ ಬದುಕಲು ಸಾಧ್ಯವಿಲ್ಲ. ಅದರಲ್ಲೂ ರೈತರಿಗೆ ಕೃಷಿ ಮಾಡಲು ಬಹಳ ಮುಖ್ಯವಾಗಿ ನೀರು ಬೇಕಾಗುತ್ತದೆ. ನೀರು ಇಲ್ಲದೆ ಯಾವ ಕೃಷಿ ಮಾಡಲು ಸಾಧ್ಯವಾಗುವುದಿಲ್ಲ. ಇನ್ನೂ ಬರಗಾಲ ಬಂತಂದರೆ ರೈತ ಪಡುವ ಕಷ್ಟ ಹೇಳುವಂತಿಲ್ಲ, ಕೇವಲ ಮಳೆಯನ್ನೇ ನಂಬಿಕೊಂಡು ಕೃಷಿ ಮಾಡಲು ಸಾಧ್ಯವಾಗುವುದಿಲ್ಲ, ಆದ್ದರಿಂದ ರೈತ ಕೃಷಿ ಚಟುವಟಿಕೆಗಳಿಗೆ ಬೋರ್ವೆಲ್ ಗಳನ್ನು ತೆಗೆಸಿ ನೀರನ್ನು ಸಸ್ಯಗಳಿಗೆ ಉಣಿಸುತ್ತಾನೆ. ಆದುದರಿಂದ ಸರ್ಕಾರ ಕೃಷಿ ಗೊಸ್ಕರ ಈ ಯೋಜನೆಗಳನ್ನು ತಂದಿದೆ. ಗಂಗಕಲ್ಯಾಣ ಯೋಜನೆಯ ಅಡಿಯಲ್ಲಿ ಬೋರ್ವೆಲ್ ಗಳನ್ನು ಕೊರೆಸಲು ಸರಕಾರ ಈ ಯೋಜನೆಯನ್ನು ನೀಡಲಾಗುತ್ತಿದೆ. 2024- 25 ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಬೋರ್ವೆಲ್ಗಳಿಗಾಗಿ ರೈತರಿಗೆ ಸಹಾಯಧನ ಪಡೆಯಲು ರಾಜ್ಯ ಸರ್ಕಾರ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ, ಅರ್ಹತಾ ಮಾನದಂಡಗಳೇನು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವವು? ಎಂಬ ಪೂರ್ತಿ ಮಾಹಿತಿ ಇಲ್ಲಿದೆ, ಬನ್ನಿ ಓದಿ ತಿಳಿದುಕೊಳ್ಳೋಣ.

ಗಂಗಾ ಕಲ್ಯಾಣ ಯೋಜನೆ ಅತ್ಯಂತ ಜನಪ್ರಿಯ ವಾದಂತ ಯೋಜನೆ ಇದಾಗಿದೆ. ರೈತರಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ಉದ್ದೇಶ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ವೆಲ್ ಕೊರಿಸಲು ಹಣದ ನೆರವು ಕೊಡಲಾಗುತ್ತಿದೆ. ಇದರಿಂದ ಬೆಳೆಗಳನ್ನು ಬೆಳೆದುಕೊಂಡು ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಈಗಲೇ ಅನೇಕ ರೈತರು ಈ ಗಂಗಾ ಕಲ್ಯಾಣ ಯೋಜನೆಯ ಪ್ರಯೋಜನೆಯನ್ನು ಪಡೆದುಕೊಂಡಿದ್ದಾರೆ.

ಈ ಯೋಜನೆಗೆ ಅರ್ಜಿ ಹಾಕಲು ಯಾರೆಲ್ಲ ಅರ್ಹರು?

• ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಗಳಾಗಿರಬೇಕು.

• ಇದಕ್ಕಿಂತ ಮುಂಚೆ ಆಯಾ ಜಾತಿ ಸಮುದಾಯದ ನಿಯಮದ ಯಾವುದಾದರೂ ಒಂದು ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ, ಅಂತವರು ಮತ್ತೊಮ್ಮೆ ಅರ್ಜಿ ಸಲ್ಲಿಸಿ ಸೌಲಭ್ಯ ಕೋರಲು ಅವಕಾಶವಿಲ್ಲ.

WhatsApp Group Join Now
Telegram Group Join Now       

• ಪರಿಶಿಷ್ಟ ಪಂಗಡಕ್ಕೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

• 1.20 ಎಕರೆಯಿಂದ 5 ಎಕರೆ ಜಮೀನು ಇರಬೇಕು.

WhatsApp Group Join Now
Telegram Group Join Now       

• ಅರ್ಜಿದಾರರ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು.

• ಅರ್ಜಿದಾರರು ಕೇಂದ್ರ ಅಥವಾ ರಾಜ್ಯ ಸರ್ಕಾರದ ಹುದ್ದೆಯಲ್ಲಿ ಕೆಲಸ ಮಾಡುತ್ತಿರಬಾರದು.

• ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಥವಾ ಈ ಯೋಜನೆಯ ಪ್ರಯೋಜನ ಪಡೆಯಲು ಯಾವುದೇ ರೀತಿಯ ನೀರಾವರಿ ಸೌಲಭ್ಯ ಹೊಂದಿರಬಾರದು.

• ಅರ್ಜಿದಾರರು ಈ ಯೋಜನೆಯನ್ನು ಪಡೆಯಲು ಕಡ್ಡಾಯವಾಗಿ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಇರಬೇಕು.

• ಈ ಯೋಜನೆಯನ್ನು ಪಡೆಯಲು ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅವಕಾಶವಿದೆ.

ಈ ಯೋಜನೆಯ ಸಹಾಯಧನದ ಪ್ರಮಾಣ ಎಷ್ಟು?

1.5 ಲಕ್ಷ ರೂಪಾಯಿಯಿಂದ ಹಿಡಿದು ಮೂರು ವರೆ ಲಕ್ಷ ರೂಪಾಯಿವರೆಗೆ ಸಹಾಯಧನವನ್ನು ಕೊಡಲಾಗುವುದು ಸ್ಥಾಪನೆಗೆ ಅನುಕೂಲ ಮಾಡಿಕೊಡುತ್ತದೆ.

ಈ ಯೋಜನೆಯ ಸದುಪಯೋಗ ಪಡೆಯಲು ಅರ್ಜಿ ಎಲ್ಲಿ ಸಲ್ಲಿಸಬೇಕು?

[Gram one, Bangalore one , Karnataka one, and Computer centre] ಗಳನ್ನು ಭೇಟಿ ಮಾಡಿ ಈ ಅರ್ಜಿಯನ್ನು ಸಲ್ಲಿಸಬಹುದು ಅಥವಾ https://sevasindhu.karnataka.gov.in/sevasindhu/kannada ಸೇವಾ ಸಿಂದು ಪೋರ್ಟಲ್ ಗೆ ಭೇಟಿ ನೀಡಿ ಈ ಅರ್ಜಿಯನ್ನು ಸಲ್ಲಿಸಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?

• ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಜೆರಾಕ್ಸ್ ಬೇಕಾಗುತ್ತದೆ.

• ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರದ ಜೆರಾಕ್ಸ್ ಬೇಕಾಗುತ್ತದೆ.

• ಬ್ಯಾಂಕ್ ಪಾಸ್ ಪಾಸ್‌ಬುಕ್ ಜೆರಾಕ್ಸ್ ಬೇಕಾಗುತ್ತದೆ.

• ಹಿಡುವಳಿ ಪ್ರಮಾಣ ಪತ್ರ ಜೆರಾಕ್ಸ್ ಬೇಕಾಗುತ್ತದೆ.

• ಜಮೀನಿನ ಪಹಣಿ ಬೇಕಾಗುತ್ತದೆ.

• ಸಣ್ಣ, ಅತಿ ಸಣ್ಣ ರೈತರ ದೃಢೀಕರಣ ಪ್ರಮಾಣ ಪತ್ರ ಬೇಕಾಗುತ್ತದೆ.

• ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋ ಬೇಕಾಗುತ್ತದೆ.

• ಬಾವಿ ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ ಪಡೆದುಕೊಳ್ಳಬೇಕಾಗುತ್ತದೆ. ಇದು ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಪಡೆದುಕೊಳ್ಳಬೇಕಾಗುತ್ತದೆ.

ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ.

ಈ ಯೋಜನೆ ಬಗ್ಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿದ್ದರೆ ಅಥವಾ ಯೋಜನೆಯ ಹೆಚ್ಚಿನ ಮಾಹಿತಿ ಅಥವಾ ವಿವರ ತಿಳಿದುಕೊಳ್ಳಲು ಕಲ್ಯಾಣ ಮಿತ್ರ 24*7 ಸಹಾಯವಾಣಿ 9482300400 ಈ ನಂಬರಿಗೆ ಕರೆ ಮಾಡಿ ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು ಹಾಗೂ ಸಾಮಾಜಿಕ ಮಾಧ್ಯಮಗಳ X ನಲ್ಲಿ ಫಾಲೋ ಮಾಡಿ ಅಗತ್ಯ ಮಾಹಿತಿಯನ್ನು ಪಡೆಯಬಹುದು.

ಈ ಯೋಜನೆ ಮೂಲಕ ರೈತರಿಗೆ ಸುಸ್ಥಿರ ಕೃಷಿ ವ್ಯವಸ್ಥೆ ನಿರ್ಮಾಣ ಮಾಡಲು ಮತ್ತು ಆರ್ಥಿಕವಾಗಿ ಸಬಲರಾಗಲು, ಬಲಿಷ್ಠರಾಗಲು ಸಹಾಯ ಮಾಡುತ್ತದೆ.

ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment