ಶಿಕ್ಷಣ ಸಾಲ ಬರಬರಿ 10 ಲಕ್ಷ ರೂಪಾಯಿ, ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಇಲ್ಲಿದೆ.
ಶಿಕ್ಷಣ ಸಾಲವು ಪ್ರತಿಭಾವಂತ ವಿದ್ಯಾರ್ಥಿಗಳ ಕನಸುಗಳನ್ನು ನನಸಾಗಿಸುವ ಒಂದು ಸಾಲದ ಯೋಜನೆ ಇದಾಗಿದೆ. ವೈದ್ಯಕೀಯ ಇಂಜಿನಿಯರಿಂಗ್ ವ್ಯವಸ್ಥಾಪನೆ, ಕಾನೂನು ಅಥವಾ ವಿದೇಶದಲ್ಲಿ ಶಿಕ್ಷಣವನ್ನು ಪಡೆಯಲು ಬೇಕಾದ ಹಣಕಾಸಿನ ಅಗತ್ಯವನ್ನು ಇದು ಪೂರೈಸುತ್ತದೆ. ಕಾಲೇಜು ಶುಲ್ಕ, ಹಾಸ್ಟೆಲ್ ಶುಲ್ಕ, ಪುಸ್ತಕಗಳು, ಲ್ಯಾಪ್ಟಾಪ್, ಪ್ರಯಾಣದರ್ ಮತ್ತು ಮುಂತಾದವುಗಳ ಖರ್ಚುಗಳಿಗೆ ಇದು ಸಹಾಯವಾಗುತ್ತದೆ.
ಸ್ನೇಹಿತರೆ, ಇದೇ ರೀತಿಯ ಪ್ರತಿನಿತ್ಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಎಜುಕೇಶನ್ ಲೋನ್ ಪಡೆಯಲು ಅರ್ಹತೆಗಳು ಏನಿರಬೇಕು?
• ಎಜುಕೇಶನ್ ಲೋನ್ ಪಡೆಯಲು ವಿದ್ಯಾರ್ಥಿಯು ಭಾರತದ ನಾಗರಿಕನಾಗಿರಬೇಕು.
• ಸರ್ಕಾರದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಹೊಂದಿರಬೇಕು.
• ಮ್ಯಾನೇಜ್ಮೆಂಟ್ ಕೋಟದಲ್ಲಿ ಪ್ರವೇಶ ಪಡೆದರೆ ಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕ ಗಳಿಸಿರಬೇಕು.
• ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪ್ರವೇಶ ಪತ್ರ, ಶುಲ್ಕದ ವಿವರ ಹಾಗೂ ವಿಳಾಸ ಪುರಾವೆಗಳು ಅತ್ಯಗತ್ಯವಾಗಿ ಬೇಕು.
ಈ ಎಜುಕೇಶನ್ ಲೋನ್ ಎಷ್ಟು ಪಡೆಯಬಹುದು?
• ನಮ್ಮ ಭಾರತದಲ್ಲಿ ಶಿಕ್ಷಣ ಪಡೆಯುವವರಿಗೆ 10 ಲಕ್ಷ ರೂಪಾಯಿವರೆಗೆ ಸಾಲ ದೊರಕುತ್ತದೆ.
• ವಿದೇಶದಲ್ಲಿ ಶಿಕ್ಷಣ ಪಡೆಯುವವರಿಗೆ 60 ರಿಂದ 75 ಲಕ್ಷ ರೂಪಾಯಿ ಸಾಲ ದೊರೆಯುತ್ತದೆ. ಕೆಲವು ಬ್ಯಾಂಕುಗಳಲ್ಲಿ ಒಂದೂವರೆ ಕೋಟಿ ವರೆಗೆ ಸಾಲ ದೊರೆಯುತ್ತದೆ.
ಇದನ್ನು ಓದಿ: FD ಯೋಜನೆಗಿಂತ ಅತಿ ಹೆಚ್ಚು ಬಡ್ಡಿ ನೀಡುವ 5 ಅತ್ಯುತ್ತಮ ಸುರಕ್ಷಿತ ಹೂಡಿಕೆಯ ಸರ್ಕಾರಿ ಉಳಿತಾಯ ಯೋಜನೆಗಳು
ಮಾರ್ಜಿನ್ ಹಣ ಎಷ್ಟು?
• ನಾಲ್ಕು ಲಕ್ಷದವರೆಗೆ ಯಾವುದೇ ಮಾರ್ಜಿನ್ ಇರುವುದಿಲ್ಲ.
• ನಾಲ್ಕು ಲಕ್ಷದ ಮೇಲೆ ಭಾರತದಲ್ಲಿ ಮಾರ್ಜಿನ್ 5% ಇರುತ್ತದೆ.
• ವಿದೇಶದ ಶಿಕ್ಷಣಕ್ಕೆ ಮಾರ್ಜಿನ್ 15% ಇರುತ್ತದೆ.
ಸಾಲದ ಮರುಪಾವತಿ ವಿಧಾನ.
ಪದವಿ ಮುಗಿದ ಒಂದು ವರ್ಷದ ಬಳಿಕ ಅಥವಾ ಉದ್ಯೋಗ ಸಿಕ್ಕ ಆರು ತಿಂಗಳ ಬಳಿಕ ಮರುಪಾವತಿ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಐದರಿಂದ ಏಳು ವರ್ಷಗಳ ಒಳಗಡೆ ಮರುಪಾವತಿಸಬೇಕು. ಇನ್ನು ಕೆಲವು ಬ್ಯಾಂಕುಗಳು 15 ವರ್ಷಗಳವರೆಗೆ ಸಮಯ ನೀಡುತ್ತವೆ.
ಲೋನ್ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ.
ನೀವೇ ಖುದ್ದಾಗಿ ಬ್ಯಾಂಕುಗಳಿಗೆ ಭೇಟಿ ನೀಡಿ ಅಥವಾ ಅಧಿಕೃತ ವೆಬ್ಸೈಟ್ ಮುಖಾಂತರ ಅರ್ಜಿ ಸಲ್ಲಿಸಿ.
ಎಜುಕೇಶನ್ ಲೋನ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು.
- ಶುಲ್ಕದ ವಿವರ,
- ಕುಟುಂಬದ ಆದಾಯ ಪ್ರಮಾಣ ಪತ್ರ.
- ಪ್ರವೇಶ ಪತ್ರ.
- ಗುರುತಿನ ದಾಖಲೆಗಳು ಅಂದರೆ ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್.
ಇಷ್ಟು ಎಜುಕೇಶನ್ ಲೋನ್ ಗೆ ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು.
ಎಜುಕೇಶನ್ ಲೋನ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಧಿಕೃತ ವೆಬ್ಸೈಟ್ ಎಲ್ಲಾ ಬ್ಯಾಂಕುಗಳಿಗೆ ಒಂದೇ ಅರ್ಜಿ ಸಲ್ಲಿಸಿದರೆ ಸಾಕು ಆ ಅಧಿಕೃತ ವೆಬ್ಸೈಟ್ ಇಲ್ಲಿದೆ. vidyalakshmi.co.in
2025ರ ಪ್ರಕಾರ ಬಡ್ಡಿ ದರಗಳು ಈ ಕೆಳಗಿನಂತೆ ಇವೆ.
• ಎಸ್‌ಬಿಐ ಬ್ಯಾಂಕಿನಲ್ಲಿ ಬಡ್ಡಿದರ 7.9 ಇಂದ 10.9 ವರೆಗೆ ಬಡ್ಡಿದರ ಇರುತ್ತದೆ.
• ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಬಡ್ಡಿದರ 4 ರಿಂದ 12% ಬಡ್ಡಿದರ ಇರುತ್ತದೆ.
• ಬ್ಯಾಂಕ್ ಆಫ್ ಬರೋಡ ಈ ಬ್ಯಾಂಕಿನಲ್ಲಿ 7.9 ರಿಂದ 14.25% ಬಡ್ಡಿದರ ಇರುತ್ತದೆ.
• ಕೆನರಾ ಬ್ಯಾಂಕ್ ಬಡ್ಡಿದರ 8.35 ರಿಂದ 11.75% ಬಡ್ಡಿದರ ಇರುತ್ತದೆ.
• ಎಚ್ ಡಿ ಎಫ್ ಸಿ ಬ್ಯಾಂಕಿನ ಬಡ್ಡಿದರ 10.5% ಗಿಂತಲೂ ಜಾಸ್ತಿ ಇರುತ್ತದೆ.
• ಐಸಿಐಸಿಐ ಬ್ಯಾಂಕುಗಳಲ್ಲಿ ಬಡ್ಡಿದರವು 10.25% ಗಿಂತಲೂ ಜಾಸ್ತಿ ಇರುತ್ತದೆ.
• ಆಕ್ಸಿಸ್ ಬ್ಯಾಂಕ್ ನಲ್ಲಿ ಬಡ್ಡಿದರವು 9.58 ರಿಂದ 12.75% ಬಡ್ಡಿದರ ಇರುತ್ತದೆ.
• ಕರ್ನಾಟಕ ಬ್ಯಾಂಕಿನ ಬಡ್ಡಿದರವು 10.48% ಗಿಂತಲೂ ಜಾಸ್ತಿ ಇರುತ್ತದೆ.
ಬಡ್ಡಿ ದರಗಳು ವಿದ್ಯಾರ್ಥಿಯ ಕ್ರೆಡಿಟ್ ಸ್ಕೋರ್ ಹಾಗೂ ಕೋರ್ಸ್ಗಳ ಅನುಸಾರ ಬದಲಾವಣೆ ಆಗಬಹುದು. ಇದರ ಬಗ್ಗೆ ಬ್ಯಾಂಕುಗಳಲ್ಲಿ ವಿಚಾರಣೆ ಮಾಡಿ ನೋಡಿ.
ಸರ್ಕಾರದ ರಿಯಾಯಿತಿಗಳೇನು?
ಸರ್ಕಾರ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಧಿಯಲ್ಲಿ ಬಡ್ಡಿಯ ಭಾಗವನ್ನು ಸರ್ಕಾರವೇ ಬರಿಸುತ್ತದೆ.
ಶಿಕ್ಷಣ ಲೋನ್ ಪಡೆದುಕೊಳ್ಳುವವರಿಗೆ ಪ್ರಮುಖ ಸಲಹೆಗಳು.
• ಬ್ಯಾಂಕುಗಳ ಬಡ್ಡಿದರ ಮತ್ತು ನಿಯಮಗಳನ್ನು ಹೋಲಿಸಿ ಆಯ್ಕೆ ಮಾಡಿ.
• ಸಾಲವನ್ನು ಮರುಪಾವತಿ ಮಾಡಲು ಕುಟುಂಬದ ಹಾರ್ದಿಕ್ಯವನ್ನು ಗಮನಿಸಿ.
• ಪ್ರಮಾಣಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶವನ್ನು ಪಡೆಯಿರಿ.
• ಅರ್ಜಿಯನ್ನು ಸಲ್ಲಿಸಲು ಎಲ್ಲಾ ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿ.
ಶಿಕ್ಷಣ ಸಾಲವು ವಿದ್ಯಾರ್ಥಿಗಳ ಕನಸುಗಳನ್ನು ನನಸು ಮಾಡುವ ಒಂದು ಉತ್ತಮ ಮಾರ್ಗ ಇದಾಗಿದೆ. ಸರಿಯಾದ ಮಾಹಿತಿ ಹಾಗೂ ಯೋಜನೆಗಳೊಂದಿಗೆ ನಿಮ್ಮ ಶಿಕ್ಷಣ ಸುಗಮವಾಗಿ ಮಾಡಿಕೊಳ್ಳಿ.
ಇದೇ ರೀತಿಯ ಪ್ರತಿನಿತ್ಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.