Huskuru maddurammana jatre
ಸಾವಿರಾರು ವರ್ಷಗಳ ಇತಿಹಾಸವಿರುವ ಹುಸ್ಕೂರಿನ ಮದ್ದೂರಮ್ಮನ ಜಾತ್ರೆ;
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಹತ್ತಿರವಿರುವ ಹುಸ್ಕೂರಿನ ಮದ್ದೂರಮ್ಮನ ಜಾತ್ರಯು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಪ್ರತಿವರ್ಷದಂತೆ ಈ ವರ್ಷ ಕೂಡ ಸಡಗರ ಸಂಭ್ರಮದಿಂದ ನಡೆಯುತಿರುವಾಗಲೆ ಅವಘಡ ನಡೆದೋಗಿದೆ .ಮದ್ದೂರಮ್ಮನ ಜಾತ್ರೆಯಲ್ಲಿ ಭಕ್ತರು ಮಾಡಿರುವ ವಿಡಿಯೋ ಒಂದು ಬೆಚ್ಚಿ ಬೀಳಿಸಿ ಭಯಪಡುವಂತೆ ಮಾಡಿದೆ. ನೂರ ಐವತ್ತು ಅಡಿ ಎತ್ತರದ ರಥಗಳು ಮದ್ದೂರಮ್ಮನ ಜಾತ್ರೆಗೆ ಹೋಗುತ್ತಿದ್ದವು. ಗಗನೆತ್ತರದ ರಥಗಳನ್ನು ಎಳೆಯುವ ಸಮಯದಲ್ಲಿ ಈ ಘಟನೆ ನಡೆದೊಗಿದೆ.
ಗ್ರಾಮಸ್ಥರು ಈ ರಥಗಳನ್ನು ಆನೇಕಲ್ ತಾಲೂಕಿನ ದೊಡ್ಡನಾಗಮಂಗಳ ಮತ್ತು ರಾಯಸಂದ್ರ ಗ್ರಾಮದ ರಥಗಳನ್ನು ಜೆಸಿಬಿ, ಎತ್ತುಗಳು, ಟ್ರಾಕ್ಟರ್ ಹಾಗೂ ಗ್ರಾಮದ ಜನರು ರಥಗಳನ್ನು ಎಳೆದು ತರುತ್ತಿದ್ದರು. ಗಗನ ಚುಂಬಿ ರಥಗಳು ಹುಸ್ಕೂರು ಮದ್ದೂರಮ್ಮನ ಜಾತ್ರೆಗೆ ಬರುವ ಸಂದರ್ಭದಲ್ಲಿ ಈ ಘಟನೆ ಜರುಗಿದೆ.
ಈ ಜಾತ್ರೆಯು ಲಕ್ಷಗಟ್ಟಲೆ ಜನ ಸಾಗರವೆ ಸೇರುವ ಪ್ರಸಿದ್ಧ ಜಾತ್ರೆ ಇದಾಗಿದೆ, ಪ್ರತಿಷ್ಟೆಗೆ ಅತಿ ಎತ್ತರದ ರಥಗಳನ್ನು ಮಾಡಿಸಿ ಎಳೆದುಕೊಂಡು ಬರುತ್ತಾರೆ. ಬೇರೆ ಬೇರೆ ಗ್ರಾಮದ ರಥಗಳು ಕಿಲೋಮೀಟರ್ ದೂರದಿಂದ ಚಿಕ್ಕ ಚಿಕ್ಕ ಮಾರ್ಗದಲ್ಲಿ ಬರುತ್ತವೆ. ಪ್ರತಿವರ್ಷ ಮಾರ್ಚ್ ತಿಂಗಳಿನಲ್ಲಿ ಬಹಳ ವಿಜ್ರೆಂಬಣೆಯಿಂದ ಮಾಡಲಾಗುತ್ತದೆ. ಈ ಸಾರಿ ಭಕ್ತರು ಹುಸ್ಕೂರು ಜಾತ್ರೆಗೆ ನಾಲ್ಕೈದು ರಥಗಳನ್ನು ಎಳೆದುಕೊಂಡು ತರಲಾಯಿತು.ಈ ರಥೋತ್ಸವದಲ್ಲಿ ರಾಯಸಂದ್ರದ ರಥ ನೆಲಕೂರುಳಿ ನಾಲ್ಕೈದು ಭಕ್ತರು ಗಾಯಗೊಂಡಿದ್ದಾರೆ.
ಆಕಾಶದೆತ್ತರ ರಥವನ್ನು ಎಳೆದುಕೊಂಡು ಬರುವಾಗ ಜೋರಾಗಿ ಗಾಳಿ ಸಹಿತ ಮಳೆ ಬಂದಿದೆ. ಮಳೆ ಮತ್ತು ಗಾಳಿ ಜೋರಾಗಿದರಿಂದ ನೂರ ಐವತ್ತು ಅಡಿ ಎತ್ತದ ರಥಗಳು ಆಯತಪ್ಪಿ ನೆಲಕುರುಳಿವೆ. ರಾಯಸಂದ್ರದ ರಥದ ಕೆಳಗೆ ಸಿಲುಕಿದ್ದ ಒಬ್ಬ ವ್ಯಕ್ತಿ ಗಾಯಗೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹುಸ್ಕೂರು ಜಾತ್ರೆಯ ಸಂಭ್ರಮದಲ್ಲಿಯೆ ಸೂತಕದ ಗಾಳಿ ಬಿಸಿದೆ.