Hyderabanalli balihud natiya mele dali:
ಹೈದರಾಬಾದ್ ನಲ್ಲಿ ಬಾಲಿವುಡ್ ನಟಿಯ ಮೇಲೆ ದಾಳಿ,
ಹೈದರಾಬಾದ್ ನ ಹೆಸರಾಂತ ಹೊಟೆಲ್‌ನಲ್ಲಿ ಘಟನೆ ನಡೆದಿದೆ. ಬಾಲಿವುಡ್ ನಟಿ ಮೇಲೆ ದಾಳಿ ಮಾಡಿದ್ದಾರೆ. ಬಾಲಿವುಡ್ ನಟಿ ಹೊಟೆಲ್ ರೂಮ್ ನಲ್ಲಿ ಮಲಗಿದ್ದ ಸಮಯದಲ್ಲಿ ದಾಳಿ ಮಾಡಿದ್ದಾರೆ, ನಟಿಯ ಕೈ ಕಾಲು ಕಟ್ಟಿ ಹಲ್ಲೆ ಮಾಡಿದ್ದಾರೆ. ಆಮೇಲೆ ದುಡ್ಡು ಒಡೆವೆ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ.
ಖ್ಯಾತ ಬಾಲಿವುಡ್ ನಟಿ ಮೇಲೆ ಭೀಕರ ದಾಳಿ ನಡೆದಿದೆ. ಹೈದರಾಬಾದ್ ಹೊಟೆಲ್ ರೂಂನಲ್ಲಿ ನಟಿ ಮಲಗಿದ್ದ ಸಮಯದಲ್ಲಿ ಏಕಾಏಕಿ ಈ ದಾಳಿ ನಡೆದಿದೆ. ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಹೊಟೆಲ್ ರೂಂಗೆ ನುಗ್ಗಿ ನಟಿಯ ಮೇಲೆ ದಾಳಿ ಮಾಡಿದ್ದಾರೆ. ನಂತರ ನಟಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ನಟಿಯ ಕೈ ಕಾಲು ಕಟ್ಟಿ ಮನುಷ್ಯತ್ವವಿಲ್ಲದೆ ಕೃತ್ಯಕ್ಕೆ ಮುಂದಾಗಿದ್ದಾರೆ. ನಟಿ ಕುಗಾಡುತ್ತಿದ್ದಂತೆ ದಾಳಿಕೋರರು ನಟಿಯ ಹಣ, ವಡವೆ, ಟ್ರೋಲಿ ಬ್ಯಾಗ್, ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.
ಖ್ಯಾತ ಬಾಲಿವುಡ್ ನಟಿಯನ್ನು ಹೈದರಾಬಾದ್‌ನ ಶೂ ರೂಂ ಒಂದನ್ನು ಉದ್ಘಾಟನೆ ಮಾಡಲು ಮುಖ್ಯ ಅತಿಥಿಯಾಗಿ ಕರೆಸಿಕೊಳ್ಳಲಾಗಿತ್ತು. ನಟಿಗೆ ಉಳಿದುಕೊಳ್ಳಲು ಹೈದರಾಬಾದ್‌ನ ಹೆಸರಾಂತ ಬಂಜಾರ ಹಿಲ್ಸ್ ಹತ್ತಿರದ ಮಸಾಬ್ ಟ್ಯಾಂಕ್‌ನ ಹೊಟೆಲ್‌ನಲ್ಲಿ ರೂಂ ಬುಕ್ ಮಾಡಲಾಗಿತ್ತು. ಆಹ್ವಾನದ ಮೇರೆಗೆ ನಟಿ ಶೋ ರೂಂ ಉದ್ಘಾಟನೆಗೆ ಆಗಮಿಸಿದ್ದಾರೆ. ನಂತರ ಬುಕ್ ಮಾಡಿದ್ದ ಹೊಟೆಲ್ ರೂಂ ನಲ್ಲಿ ಉಳಿದುಕೊಂಡಿದ್ದಾರೆ, ನಟಿ ಮಲಗಿದ್ದ ವೇಳೆ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಹೊಟೆಲ್ ನುಗ್ಗಿದ್ದಾರೆ. ಯಾರಿಗೂ ತಿಳಿಯದಂತೆ ನಟಿ ಇರುವ ರೂಂಗೆ ನುಗ್ಗಿದ್ದಾರೆ. ಮಲಗಿದ್ದ ನಟಿಯ ಮೇಲೆ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಹಲ್ಲೆ ಮಾಡಿದ್ದಾರೆ. ಕೈ ಕಾಲುಗಳನ್ನು ಕಟ್ಟಿ ಹಾಕಿ ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ನಟಿ ಕಿರುಚಾಡಿದ್ದಾರೆ. ನಟಿ ಕಿರುಚಾಡುತ್ತಿದ್ದಂತೆ ದುಷ್ಕರ್ಮಿಗಳು ನಟಿಯ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ, ಆಗ ಟ್ರೋಲಿ ಬ್ಯಾಗ್, ಹಣ, ಒಡವೆ ಚಿನ್ನಾಭರಣ, ರೂ 50,000 ನಗದು ಮುಂತಾದವುಗಳನ್ನು ಎತ್ತುಕೊಂಡು ಪರಾರಿಯಾಗಿದ್ದಾರೆ, ಎತ್ತಿಕೊಂಡು ಅಲ್ಲಿಂದ ಓಡಿ ಜೂಟ್ ಆಗಿದ್ದಾರೆ, ನಗದು ಸೇರಿದಂತೆ ಎಲ್ಲಾ ವಸ್ತುಗಳನ್ನು ದೋಚಿದ್ದಾರೆ.
ಮಾರ್ಚ್ 25 ಬೆಳಿಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. ನಟಿಯ ಕೂಗಾಟದಿಂದ ಹೋಟೆಲ್ ನಲ್ಲಿ ಇರುವಂತ ಇತರ ಸಿಬ್ಬಂದಿಗಳು ತಕ್ಷಣವೇ ಓಡೋಡಿ ಬಂದಿದ್ದಾರೆ. ಸಿಬ್ಬಂದಿಗಳು ಬರುವಷ್ಟರಲ್ಲಿ ಅಲ್ಲಿಂದ ದುಷ್ಕರ್ಮಿಗಳು ಪರಾರಿಯಾಗಿದ್ದರೆ. ನಟಿಯ ರಕ್ಷಣೆಗೆ ಬಂದ ಸಿಬ್ಬಂದಿಗಳು ಕೈ, ಕಾಲಿಗೆ ಕಟ್ಟಿದ್ದ ಹಗ್ಗ ಬಿಡಿಸಿದ್ದಾರೆ. ನಟಿ ಈ ವಿಷಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಬಿಸಿದ್ದಾರೆ. ಪೊಲೀಸರು ಹೋಟೆಲ್ ರೂಮಿನೊಳಗೆ ಬಂದು ಸಿಸಿಟಿವಿ ದೃಶ್ಯಗಳನ್ನು ಚೆಕ್ ಮಾಡಿದರೆ. ಹೊಟೆಲ್ ಸುತ್ತ ಮುತ್ತ ಇರುವಂತ ಸಿಸಿ ಟಿವಿ ಫೂಟೇಜ್ ಗಳನ್ನು ಕೂಡ ಪರಿಶೀಲಿಸಿದ್ದಾರೆ.
ನಟಿಯ ಹೆಸರನ್ನು ಹೇಳಲು ಆಗುವುದಿಲ್ಲ. ಈ ವಿಷಯದ ಕುರಿತು ಪೊಲೀಸರು ಈಗಾಗಲೇ ತನಿಖೆ ಪ್ರಾರಂಭಿಸಿದ್ದಾರೆ, ಪೊಲೀಸರು ಹೋಟೆಲ್ ಮ್ಯಾನೇಜರ್ ನ ಸೇರಿ ಕೆಲವು ಸಿಬ್ಬಂದಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರ.