‘KGF’ air in Pakistani villages; Rocking Star Yash, Rocky Bhai’s craze,

Spread the love

‘KGF’ air in Pakistani villages; Rocking Star Yash, Rocky Bhai’s craze,

ಪಾಕಿಸ್ತಾನದ ಹಳ್ಳಿಗಳಲ್ಲಿ ‘ಕೆಜಿಎಫ್’ ಹವಾ; ರಾಕಿಂಗ್ ಸ್ಟಾರ್ ಯಶ್, ರಾಕಿ ಭಾಯ್ ಅವರ ಕ್ರೇಜ್,

ರಾಕಿಂಗ್ ಸ್ಟಾರ್ ಯಶ್ ರವರ ನಟನೆಯ ಚಿತ್ರ ಕೆಜಿಎಫ್ 2 ಚಿತ್ರ ಜಗತ್ತಿನ ಜನಪ್ರಿಯತೆ ಗಳಿಸಿದೆ, ಅದೆ ತರ ಪಾಕಿಸ್ತಾನದ ಹಳ್ಳಿಗಳಿಗೂ ತಲುಪಿದೆ. ‘ಗ್ಲೋಬಲ್ ಕನ್ನಡಿಗ’ ಯೂಟ್ಯೂಬ್ ಚಾನೆಲ್‌ನಲ್ಲಿ ಒಂದು ವೀಡಿಯೊದಲ್ಲಿ, ಪಾಕಿಸ್ತಾನದ ಮಕ್ಕಳು ಕೆಜಿಎಫ್ ಮತ್ತು ರಾಕಿ ಭಾಯ್ ಬಗ್ಗೆ ತಿಳಿದಿರುವುದು ವಿಶೇಷ.

ರಾಕಿಂಗ್ ಸ್ಟಾರ್ ಯಶ್ ಅವರು ‘ಕೆಜಿಎಫ್ 2’ ಮೂಲಕ ಪ್ರಪಂಚದಾದ್ಯಂತ ತಲುಪಿದ್ದಾರೆ. ಯಶ್ ಅವರನ್ನು ಬೇರೆ ಬೇರೆ ದೇಶಗಳಲ್ಲಿ ಗುರುತಿಸುತ್ತಾರೆ. ಅಮೆರಿಕ, ಇಂಗ್ಲೆಂಡ್ ಜನರಿಗೆ ಯಶ್ ಪರಿಚಯ ಇದೆ, ಆದರೆ ಅದೆನು ಅಂಥ ದೊಡ್ಡ ವಿಷಯ ಏನೂ ಅಲ್ಲ. ಆದರೆ, ನಮ್ಮ ಶತ್ರು ರಾಷ್ಟ್ರ ಎಂದೇ ಕರೆಸಿಕೊಳ್ಳುವ ಪಕ್ಕದ ರಾಷ್ಟ್ರದ, ಪಾಕಿಸ್ತಾನದ ಹಳ್ಳಿಯ ರಿಗೂ ಯಶ್ ಪರಿಚಯ ಇದೆ, ಇದನ್ನು ನೀವು ನಂಬುತ್ತೀರಾ? ಖಂಡಿತವಾಗಿ ನಂಬಲೇ ಬೇಕು. ಇದಕ್ಕೆ ಸಾಕ್ಷಿ ಕೂಡಿದೆ. ‘ಗ್ಲೋಬಲ್ ಕನ್ನಡಿಗ’ ಯೂಟ್ಯೂಬ್ ಚಾನೆಲ್​ನಲ್ಲಿ ಈ ವಿಚಾರ ಮೂಡಿ ಬಂದಿದೆ.

ಮಹಾಬಲ ರಾಮ್ ರವರ ‘ಗ್ಲೋಬಲ್ ಕನ್ನಡಿಗ’ ಎಂಬ ಯೂಟ್ಯೂಬ್ ಚಾನೆಲ್ ಇದೆ. ಈ ಚಾನೆಲ್ ಗೆ 3 ಲಕ್ಷಕ್ಕೂ ಅಧಿಕ ಹಿಂಬಾಲಕರು ಇದ್ದಾರೆ. ಅವರು ಇತ್ತೀಚೆಗೆ ಪಾಕಿಸ್ತಾನಕ್ಕೆ ಪ್ರವಾಸ ಹೋಗಿದ್ದರು. ಪಾಕಿಸ್ತಾನದ ಕರಾಚಿ, ಇಸ್ಲಾಮಾಬಾದ್ ನಗರಗಳನ್ನು ಅವರು ಎಕ್ಸ್​ಪ್ಲೋರ್ ಮಾಡಿದ್ದರು. ಇಸ್ಲಾಮಾಬಾದ್​ನ ಸಮೀಪವಿರುವ ಹಳ್ಳಿಗೆ ರಾಮ್ ಹೋಗಿರುತ್ತಾರೆ. ಅಲ್ಲಿನ ಮಕ್ಕಳು ‘ಕೆಜಿಎಫ್’ ಬಗ್ಗೆ ಮಾತನಾಡಿದ್ದಾರೆ.

ಮೊದಲು ತೆಲುಗಿನ ‘ಪುಷ್ಪ 2’ ಚಿತ್ರದ ‘ತಗ್ಗದೆಲೆ..’ ಶೈಲಿಯನ್ನು ತೋರಿಸಿದರೂ, ‘ಪಾಕಿಸ್ತಾನದ ಹಳ್ಳಿಗಳಲ್ಲಿ ದಕ್ಷಿಣ ಭಾರತದ ಕ್ರೇಜ್ ಇದೆ. ಪಾಕ್ ಹಳ್ಳಿಯಲ್ಲಿ ಇದನ್ನು ಮಾಡುತ್ತಿದ್ದಾರೆ. ಭಾರತದ ಸಿನಿಮಾದ ಪವರ್ ಇದು. ನಾವು ಇನ್ನೂ ಒಳ್ಳೊಳ್ಳೆ ಸಿನಿಮಾ ಮಾಡಬೇಕು. ವಿಶ್ವಕ್ಕೆ ತಲುಪಬೇಕು’ ಎಂದು ರಾಮ್ ಅವರು ಹೇಳಿದ್ದಾರೆ.

WhatsApp Group Join Now
Telegram Group Join Now       

‘ಕೆಜಿಎಫ್ ಗೊತ್ತಿದೆಯೇ?’ ಎಂದು ಕೇಳುತ್ತಿದ್ದಂತೆ ಅಲ್ಲಿನ ಮಕ್ಕಳು, ‘ರಾಕಿ ಭಾಯ್’ ಎಂದು ಕೂಗಿದ್ದಾರೆ. ಇದನ್ನು ಕೇಳಿದ ರಾಮ್ ತುಂಬ ಅಚ್ಚರಿಗೊಂಡರು. ಈ ಸಿನಿಮಾ ಬಗ್ಗೆ ಪಾಕಿಸ್ತಾನದ ಯಾವುದೋ ಒಂದು ಹಳ್ಳಿಯಲ್ಲಿ ತಿಳಿದಿದೆ ಎಂಬುದನ್ನು ಕೇಳಿ ಅವರು ತುಂಬ ಖುಷಿಪಟ್ಟರು.

ಪಾಕಿಸ್ತಾನದಲ್ಲಿ ಒಂದು ಅಚ್ಚರಿಯ ವಿಚಾರ ಇದೆ. ಅದೇನೆಂದರೆ ಪಾಕ್​ನಲ್ಲಿ ಭಾರತದ ಯಾವುದೇ ಸಿನಿಮಾಗಳು ಥಿಯೇಟರ್​ನಲ್ಲಿ ಪ್ರಸಾರ ಮಾಡುವಂತಿಲ್ಲ. ಎಲ್ಲದಕ್ಕೂ ಬ್ರೇಕ್ ಹಾಕಲಾಗಿದೆ. ಆದರೆ, ಒಟಿಟಿಯಲ್ಲಿ ಭಾರತೀಯ ಸಿನಿಮಾಗಳನ್ನು ನೋಡಬಹುದಾಗಿದೆ. ‘ಅಮೇಜಾನ್ ಪ್ರೈಮ್ ವಿಡಿಯೋ’ದಲ್ಲಿ ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾಗಳು ಇವೆ. ಅದನ್ನು ಪಾಕ್ ಮಂದಿ ವೀಕ್ಷಿಸಿ ಲೈಕ್ ಮಾಡಿದ್ದಾರೆ.

WhatsApp Group Join Now
Telegram Group Join Now       

 

Leave a Comment