ಎಲ್ ಪಿ ಜಿ ಗ್ಯಾಸ್: ಸಿಲಿಂಡರ್ ಗ್ಯಾಸ್ ಬುಕ್ಕಿಂಗ್‌ನಲ್ಲಿ ರೂಲ್ಸ್ ಬದಲಾವಣೆ, ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯ.
ಎಲ್ ಪಿ ಜಿ ಸಿಲಿಂಡರ್ ಬುಕ್ಕಿಂಗ್ ನೇಮಕದಲ್ಲಿ ಪ್ರಮುಖ ತಿದ್ದುಪಡಿ ಆಗಿದೆ.
ಕರ್ನಾಟಕ ಬೆಂಗಳೂರು: ಕೇಂದ್ರ ಸರ್ಕಾರ ಅಡಿಗೆ ಅನಿಲ ಎಲ್ ಬಿ ಜಿ ಸಿಲಿಂಡರ್ಗಳ ಬುಕ್ಕಿಂಗ್ ನ ವಿತರಣೆ ಮತ್ತು ಸಬ್ಸಿಡಿ ವ್ಯವಸ್ಥೆಯಲ್ಲಿ ಕಠಿಣವಾದ ಪ್ರಮುಖ ನೇಮಗಳನ್ನು ಜಾರಿಗೆ ತಂದಿದೆ. 2025 ರಲ್ಲಿ ರೇಷನ್ ಕಾರ್ಡ್ ಹಾಗೂ ಸಿಲಿಂಡರ್ ಗೆ ಸಂಬಂಧಿಸಿದ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿತ್ತು; ಈ ಹೊಸ ನೇಮಗಳು 2028ರ ಡಿಸೆಂಬರ್ 31 ವರೆಗೆ ಈ ನಿಯಮಗಳು ಅನ್ವಯವಾಗಲಿದೆ.
ಈ ಬದಲಾವಣೆ ಮೂಲಕ ಗ್ಯಾಸ್ ವಿತರಣೆಯಲ್ಲಿ ಪಾರದರ್ಶಕತೆಯನ್ನು ಖಾತ್ರಿ ಪಡಿಸುವ ಗುರಿಯನ್ನು ಸರ್ಕಾರ ನಿಯಮಗಳನ್ನು ಹೊಂದಿದೆ.
ಇ ಕೆ ವೈ ಸಿ ಕಡ್ಡಾಯವಾಗಿ ಮಾಡಿಸಬೇಕು.
ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ಗೆ ಮೊದಲು ಗ್ರಾಹಕರು ಈ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಈ ಕೆವೈಸಿ ಮಾಡಲು ಆಧಾರ್ ಕಾರ್ಡ್ ಮುಖ್ಯವಾಗಿದೆ. ಹಾಗೂ ನಿಮ್ಮ ಆಧಾರ್ ಕಾರ್ಡಿಗೆ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನವೀಕರಿಸುವದು ಮತ್ತು ಒಟಿಪಿ ಮೂಲಕ ನಿಮ್ಮ ಗುರುತಿನ ದೃಢೀಕರಣ ಮಾಡುವುದು ಬಹು ಮುಖ್ಯವಾಗಿದೆ. ಕೆವೈಸಿ ಪೂರ್ಣಗೊಳಿಸದಿದ್ದರೆ ಸಿಲಿಂಡರ್ ವಿತರಣೆಯಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ.
ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ನಂಬರ್ ಇಂದ ಓಟಿಪಿ ಆಧಾರಿತ ಬುಕ್ಕಿಂಗ್.
ಈ ಹೊಸ ನೇಮದ ಪ್ರಕಾರ, ಸಿಲಿಂಡರ್ ಬುಕ್ಕಿಂಗ್ ಮಾಡುವಾಗ ಓಟಿಪಿ ದೃಢೀಕರಣ ಕಡ್ಡಾಯವಾಗಿದೆ.
ಗ್ರಾಹಕರು ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ನಂಬರ್ಗೆ ಕಳುಹಿಸಲಾದ ಓಟಿಪಿಯನ್ನು ನೋಂದಾಯಿಸದಿದ್ದರೆ ಸಿಲಿಂಡರ್ ಸಾಧ್ಯವಾಗುವುದಿಲ್ಲ. ಅಕ್ರಮ ಬುಕಿಂಗ್ ಮಾಡುವುದನ್ನು ಈ ವ್ಯವಸ್ಥೆಯಿಂದ ತಡೆಗಟ್ಟಬಹುದು. ಮತ್ತು ಕಪ್ಪು ಮಾರುಕಟ್ಟೆಯಲ್ಲಿ ಸಿಲಿಂಡರ್ಗಳ ಮಾರಾಟವನ್ನು ತಡೆಗಟ್ಟಬಹುದು ಹಾಗೂ ಸಬ್ಸಿಡಿಗಳನ್ನು ಸರಿಯಾದ ಫಲಾನುಭವಿಗಳಿಗೆ ತಲುಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಸಬ್ಸಿಡಿ ದುರುಪಯೋಗದ ತಡೆ:
ಈ ವ್ಯವಸ್ಥೆಯಿಂದ ಅಂದರೆ ಈ ಕೆ ವೈ ಸಿ ಮತ್ತು ಓಟಿಪಿ ಆಧಾರಿತ ವ್ಯವಸ್ಥೆಯಿಂದ ಗ್ಯಾಸ್ ವಿತರಣೆಯು ಹೆಚ್ಚು ಸುರಕ್ಷಿತವಾಗಿರುತ್ತದೆ. ಹಾಗೂ ಗ್ಯಾಸ್ ಏಜೆನ್ಸಿಗಳು ಗ್ರಾಹಕರನ್ನು ಸುಲಭವಾಗಿ ಗುರುತಿಸಬಹುದು. ಕೆಲವರು ಜಾಸ್ತಿ ಕಲೆಕ್ಷನ್ ಗಳನ್ನು ಹೊಂದಿರುವುದರಿಂದ ಸಬ್ಸಿಡಿಗಳನ್ನು ಅನಗತ್ಯವಾಗಿ ಪಡೆಯುತ್ತಿರುತ್ತಾರೆ, ಆದರೆ ಈ ಈವ್ಯವಸ್ಥೆಯಿಂದ ಅಂದರೆ ಆಧಾರ್ ಲಿಂಕ್ ಮತ್ತು ಕೆವೈಸಿ ಮೂಲಕ ಒಬ್ಬ ವ್ಯಕ್ತಿಗೆ ಒಂದೇ ಕನೆಕ್ಷನ್ ಇರುವಂತೆ ಖಾತ್ರಿಯಾಗುತ್ತದೆ. ಇದರಿಂದ ಸಬ್ಸಿಡಿ ವಂಚನೆಯನ್ನು ಕಡಿಮೆ ಮಾಡಬಹುದು.
ಸುರಕ್ಷಿತ ಮತ್ತು ಪಾರದರ್ಶಕದ ವಿತರಣೆ:
ಇ ಇಕೆ, ವೈಸಿಯ ಮತ್ತು ಓಟಿಪಿ ಆಧಾರಿತ ವ್ಯವಸ್ಥೆಯಿಂದ ಗ್ಯಾಸ್ ವಿತರಣೆ ಹೆಚ್ಚು ಸುರಕ್ಷಿತವಾಗಿರುತ್ತದೆ. ಇದರಿಂದ ಗ್ಯಾಸ್ ಏಜೆನ್ಸಿಗಳು ಗ್ರಾಹಕರ ಗುರುತ್ವವನ್ನು ಸುಲಭವಾಗಿ ದೃಢೀಕರಿಸಬಹುದು ಹಾಗೂ ಯಾವುದೇ ಅಕ್ರಮ ಚಟುವಟಿಕೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಈ ನೇಮಗಳು ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ಮಾಡುತ್ತವೆ, ವ್ಯವಸ್ಥೆಯನ್ನು ಸುಧಾರಿಸಿಕೊಳ್ಳುವ ಗುರಿಯನ್ನು ಹೊಂದಿವೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ಗ್ರಾಹಕರು ತಮ್ಮ ಗ್ಯಾಸ್ ಕನೆಕ್ಷನ್ ಗೆ ಸಂಬಂಧಿಸಿದ ಕೆವೈಸಿ ಪ್ರಕ್ರಿಯೆಯನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸಲು ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಸರ್ಕಾರ ಸೂಚಿಸಿದೆ. ಇದರಿಂದ ವಿತರಣೆಯಲ್ಲಿ ಯಾವುದೇ ವಿಳಂಬ ಆಗುವುದಿಲ್ಲ.
ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ಚಾನೆಲ್ ಅನ್ನು ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.