Nandini idli and dose hittu delivery to your home
ಮನೆ ಮನೆಯ ಬಾಗಿಲಿಗೆ ಬರಲಿದೆ ‘ನಂದಿನಿ’ ಯವರ ಇಡ್ಲಿ ಮತ್ತು ದೋಸೆಯ ಹಿಟ್ಟು.
ಗಾರ್ಡನ್ ಸಿಟಿ ಬೆಂಗಳೂರು,
ಮಾರ್ಚ್ 22: ಕೆಎಂಎಫ್ ನ ತನ್ನ ‘ನಂದಿನಿ’ ಬ್ರಾಂಡ್ ಇಂದ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರುಕಟ್ಟೆಗೆ ತಂದು ಬೆಂಗಳೂರಿನ ನಿವಾಸಿಗರಿಗೆ ಪರಿಚಯಿಸಿದೆ. ಇವಾಗ ಬೆಂಗಳೂರು ನಗರದಲ್ಲಿ ಮಾತ್ರ ಮಾರುಕಟ್ಟೆಯಲ್ಲಿ ಸಿಗುತಿದೆ. 2024ರಲ್ಲಿ ಡಿಸೆಂಬರ್ 25ರಂದು ಇದನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು, ಇವಾಗ ತುಂಬ ಮಾರಾಟವಾಗುತ್ತಿದೆ. ಆದಕಾರಣ ಕೆ ಎಂ ಎಪ್ ಹೊಸ ಪ್ರಯತ್ನಕ್ಕೆ ಮುಂದಾಗಿದೆ.
ರಾಜಧಾನಿ ಬೆಂಗಳೂರು ನಗರದಲ್ಲಿ ಜನರಿಗೆ ಇಷ್ಟವಾಗಿರುವ ಈ ಉತ್ಪನ್ನವನ್ನು ಕರ್ನಾಟಕದ ಇನ್ನೂ ಬೇರೆ ಬೇರೆ ಜಿಲ್ಲೆಗಳಲ್ಲಿ ವಿಸ್ತರಣೆ ಮಾಡಲು ಕೆ ಎಂ ಎಪ್ ನಿರ್ಧಾರ ಮಾಡಿದೆ. ಆದರಿಂದ ಇಡ್ಲಿ ಹಾಗೂ ದೋಸೆ ಹಿಟ್ಟು ತಯಾರಿಸಲು ಹೆಚ್ಚಿಸಲಿದೆ. ಇ-ಕಾಮರ್ಸ್ ಸಂಸ್ಥೆಯ ಮೂಲಕ ಜನರ ಮನೆ ಮನೆಯ ಬಾಗಿಲಿಗೆ ಮುಟ್ಟಿಸಲು ಯೋಜನೆ ಕೈಗೊಂಡಿದೆ.
ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ‘ನಂದಿನಿ ವೇ’ ಪ್ರೋಟಿನ್ಯುಕ್ತ ದೋಸೆ ಮತ್ತು ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಸದ್ಯ ಬೆಂಗಳೂರಿನಲ್ಲಿ ಮಾತ್ರ ಇದು ಲಭ್ಯವಿದೆ, ಜನರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಜನರ ಆಸೆಯಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಕೂಡ ಈ ಪದಾರ್ಥವನ್ನು ಸೆಲ್ ಮಾಡಲು ಕೆಎಂಎಫ್ ಸಂಸ್ಥೆ ಇಚ್ಚಿಸಿದೆ. ಅದರಿಂದ ಮೊದಲು ಉತ್ಪಾದನೆಯನ್ನು ಹೆಚ್ಚಳ ಮಾಡಲು ಮುಂದಾಗಿದೆ.
ನೆಕ್ಸ್ಟ್ ಬರುವ ತೀಂಗಳಿಂದ ಮನೆ ಮನೆಗೆ ಬರುವ ಸಾದ್ಯತೆ ಇದೆ: ಗಾರ್ಡನ್ ಸಿಟಿ ಬೆಂಗಳೂರು ಅಷ್ಟೇ ಅಲ್ಲದೆ ಕರ್ನಾಟಕದ ಹೆಸರುವಾಸಿಯಾಗಿರುವ ನಗರದಲ್ಲಿ ಇ-ಕಾಮರ್ಸ್ ಇಂದ ವಹಿವಾಟು ಹೆಚ್ಚಿಸಲಾಗುತ್ತದೆ. ಆದರೆ ಈಗ ‘ನಂದಿನಿ’ ಇಡ್ಲಿ ಮತ್ತು ದೋಸೆ ಹಿಟ್ಟು ಆನ್‌ಲೈನ್‌ನಲ್ಲಿ ದೊರೆಯುತಿಲ್ಲ. ಬೂತ್‌ಗಳಲ್ಲಿ ಮಾತ್ರ ಖರೀದಿ ದೊರೆಯುತ್ತದೆ. ಅದಕ್ಕಾಗಿ ಬರುವ ತಿಂಗಳು ಏಪ್ರಿಲ್‌ನಿಂದ ಇ-ಕಾಮರ್ಸ್ ಕಂಪನಿಗಳಿಗೆ ನಂದಿನಿಯ ಇಡ್ಲಿ ಮತ್ತು ದೋಸೆ ಹಿಟ್ಟು ಮಾರಾಟ ಮಾಡಲು ಅನುಕೂಲ ಮಾಡಿಕೊಡಲಾಗುತ್ತದೆ. ಆಗ ಗ್ರಾಹಕರ ಮನೆ ಬಾಗಿಲಿಗೆ ದೋಸೆ, ಇಡ್ಲಿ ಹಿಟ್ಟು ಬರಲಿದೆ.
ಇವಾಗ ಸರಿ ಸುಮಾರು 4,600 ಕೆಜಿ ‘ನಂದಿನಿ’ ಇಡ್ಲಿ ಮತ್ತು ದೋಸೆ ಹಿಟ್ಟು ಮಾರಾಟವಾಗುತ್ತಿದೆ. ಈ ಉತ್ಪನ್ನಕ್ಕೆ ಬೇಡಿಕೆ ಸಹ ಹೆಚ್ಚುತ್ತಿದ್ದು, ಕೆಎಂಎಫ್ ಮುಂದಿನ ಮೂರು ತಿಂಗಳಿನಲ್ಲಿ ಮಾರಾಟವನ್ನು 15,000 ಕೆಜಿಗೆ ಹೆಚ್ಚಿಸಲು ಮುಂದಾಗಿದೆ. ಈ ಉತ್ಪನ್ನದ 450 ಗ್ರಾಂ ಪ್ಯಾಕೇಟ್ 40 ಮತ್ತು 900 ಗ್ರಾಂ ಪ್ಯಾಕೆಟ್‌ಗೆ 80 ರೂ. ಬೆಲೆ ಇದೆ.
ಕೆಎಂಎಫ್‌ನ ಅಧಿಕಾರಿಗಳು ಮಾತನಾಡಿ, ಸದ್ಯ ‘ನಂದಿನಿ’ ಬ್ಯ್ರಾಂಡ್ ಇಡ್ಲಿ ಮತ್ತು ದೋಸೆ ಹಿಟ್ಟು ಬೆಂಗಳೂರು ನಗರದ 750 ನಂದಿನಿ ಬೂತ್‌ಗಳಲ್ಲಿ ದೊರೆಯುತ್ತದೆ. ಏಪ್ರಿಲ್ ತಿಂಗಳಿನಿಂದ ಇ-ಕಾಮರ್ಸ್ ಮೂಲಕ ಮತ್ತು ನಗರದ ಪ್ರಮುಖ ರಿಟೇಲ್ ಶಾಪ್‌ಗಳಲ್ಲಿ ಇದನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ಬ್ಲಿಂಕ್ ಇಟ್, ಬಿಗ್ ಬಾಸ್ಕೆಟ್, ಝೊಮಟೋ ಇ-ಕಾಮರ್ಸ್‌ಗಳಲ್ಲಿ ಏಪ್ರೆಲ್ ಇಂದ ‘ನಂದಿನಿ’ ಇಡ್ಲಿ ಮತ್ತು ದೋಸೆ ಹಿಟ್ಟು ದೊರೆಯುತ್ತದೆ. ಹಾಗೆ ಬೆಂಗಳೂರು ನಗರದ ಪ್ರಮುಖ ರಿಟೇಲ್ ಮಳಿಗೆಗಳಲ್ಲಿ ದೊರೆಯುತ್ತದೆ. ದಿನಾಲು 10,000 ಕೆಜಿ ಹಿಟ್ಟು ತಯಾರಿಸಲು ನಾವು ಯೋಚನೆ ಮಾಡುತಿದ್ದೆವೆ. ಅದಕ್ಕಾಗಿಯೇ ಹೆಚ್ಚುವರಿ ಉತ್ಪಾದನಾ ಘಟಕಗಳನ್ನು ಸಹ ಪ್ರಾರಂಭ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ನಂದಿನಿ’ ಇಡ್ಲಿ ಮತ್ತು ದೋಸೆ ಹಿಟ್ಟು ಮಾರಾಟವನ್ನು ಮೈಸೂರು, ಮಂಗಳೂರು, ತುಮಕೂರು ಮತ್ತು ಹುಬ್ಬಳ್ಳಿಗೆ ವಿಸ್ತರಣೆ ಮಾಡಲು ಕೆ ಎಮ್ ಎಪ್ ಮುಂದಾಗಿದೆ. ಇನ್ನೆನೂ ಎರಡು ತಿಂಗಳಿನಲ್ಲಿ ಈ ಕೆಲಸ ಸುಲಬವಾಗಲಿದೆ. ಅದಕ್ಕಾಗಿ ಸ್ಥಳೀಯ ಹಿಟ್ಟು ಉತ್ಪಾದನಾ ಘಟಕಗಳನ್ನು ಸಹ ಗುರುತಿಸಲಾಗುತ್ತಿದೆ.
ಬೆಂಗಳೂರಿನಂತ ಸಿಟಿಯಲ್ಲಿ ಕೆಲಸಕ್ಕೆ ಹೋಗುವ ಜನರು ಬ್ಯುಸಿಯಲ್ಲಿರುತ್ತಾರೆ. ಈ ತರಾ ರಡಿ ಇರುವ ಪದಾರ್ಥಗಳನ್ನು ಜನರು ತುಂಬಾ ಲೈಕ್ ಮಾಡುತ್ತಾರೆ. ಇವರನ್ನು ಗುರಿಯಾಗಿಸಿಕೊಂಡು ಖಾಸಗಿ ಕಂಪನಿಗಳು ಜನರಿಂದ ದುಬಾರಿ ಹಣ ವಸೂಲಿ ಮಾಡುತಿರುವದನ್ನು ಸದೆಬಡೆಯಲು ಮುಂದಾಗಿದೆ, ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡಲು ನಮ್ಮ ‘ನಂದಿನಿ’ ಇಡ್ಲಿ ಮತ್ತು ದೋಸೆ ಹಿಟ್ಟು ಮಾರುಕಟ್ಟೆಗೆ ಬರುತ್ತಿದೆ. ಈ ಕೆಲಸಕ್ಕೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಹ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.