ಮನೆ ಕಟ್ಟಲು ಸಾಲ ಬೇಕಾ? ಈ ಬ್ಯಾಂಕ್ಗಳಲ್ಲಿ ಕಮ್ಮಿ ಬಡ್ಡಿಗೆ ಸಿಗುತ್ತೆ ಹೋಮ್ ಲೋನ್.

ಮನೆ ಕಟ್ಟಲು ಸಾಲ ಬೇಕಾ? ಈ ಬ್ಯಾಂಕ್ಗಳಲ್ಲಿ ಕಮ್ಮಿ ಬಡ್ಡಿಗೆ ಸಿಗುತ್ತೆ ಹೋಮ್ ಲೋನ್. ಇಲ್ಲಿದೆ ಸಂಪೂರ್ಣ ಮಾಹಿತಿ ಓದಿ ತಿಳಿದುಕೊಳ್ಳಿ.

ಮನೆ ಸಾಲ 8% ಗಿಂತ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲಕ್ಕೆ ಯಾವ ಬ್ಯಾಂಕ್ ಉತ್ತಮ ಇಲ್ಲಿದೆ ಸಂಪೂರ್ಣ ಮಾಹಿತಿ.

ಸ್ವಂತ ಮನೆ ಕನಸಿನಿಂದ ನಿಜವಾಗುವ ಸಮಯ

ಸ್ವಂತ ಮನೆ ಕಟ್ಟುವುದು ಎಲ್ಲರ ಜೀವನದಲ್ಲಿ ಬಹು ಮುಖ್ಯವಾದ ಕನಸು; ಈ ಕನಸು ನನಸು ಆಗಲು ಇಲ್ಲಿದೆ ಸುಲಭ ಮಾರ್ಗ. ಈ ವಿಷಯವಾಗಿ ಮಧ್ಯಮ ವರ್ಗದವರಿಗೆ ದಿನ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೂಡ ಕೋಟಿಗಿಂತ ಕಡಿಮೆ ಬಾಕಿ ಇರದ ಪರಿಸ್ಥಿತಿ ಈಗ ನಿರ್ಮಾಣ ನಿರ್ಮಾಣವಾಗಿದೆ. ಇವತ್ತಿನಲ್ಲಿ ಹೋಂ ಲೋನ್ ಎಂಬುದು ಕನಸು ನನಸಾಗಲು ಬಹು ಪಾಲು ಜನರು ಅವಲಂಬಿಸುವ ಏಕೈಕ ಮಾರ್ಗ ಇದಾಗಿದೆ, ಆದರೆ ಈ ಸಾಲ ದೀರ್ಘಾವಧಿಯ ಬಡ್ಡಿ ಹೊರೆ ಹೊಂದಿರುವುದರಿಂದ ಸೂಕ್ತ ಬ್ಯಾಂಕ್ ಆಯ್ಕೆ ಮಾಡುವುದು ಬಹು ಮುಖ್ಯವಾಗಿದೆ.

ಯಾವ ಬ್ಯಾಂಕುಗಳಲ್ಲಿ ಬಡ್ಡಿದರ ಕಡಿಮೆ ಇರುತ್ತದೆ?

2025 ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್‌ಬಿಐ ರೆಪೋ ದರವನ್ನು ಅರ್ಧ ಶೇಕಡವಾರಿಗೆ ಇಳಿಸಿದ್ದಾರೆ. ಹಲವಾರು ಸಾರ್ವಜನಿಕ ಬ್ಯಾಂಕುಗಳು ಈಗ ಎಂಟು ಪರ್ಸೆಂಟ್ ಅಥವಾ ಅದಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಹೋಂ ಲೋನ್ ನೀಡಲಾಗುತ್ತಿದೆ. ಈ ಕೆಳಗಿನ ಪಟ್ಟಿಯಲ್ಲಿ ಪ್ರಮುಖ 10 ಪಿ ಎಸ್ ಯು ಬ್ಯಾಂಕುಗಳ ಬಡ್ಡಿದರ ವಿವರಣೆ ಇಲ್ಲಿದೆ ನೋಡಿ.

ಸಾಲದ ಬಡ್ಡಿದರ ಹಾಗೂ ಇಎಂಐ ವಿವರಗಳು.

• ಕೆನರಾ ಬ್ಯಾಂಕ್ ಇದರ ಬಡ್ಡಿ 7.80% 1 1ಲಕ್ಷಕ್ಕೆ 824 ರೂಪಾಯಿಗಳು.

WhatsApp Group Join Now
Telegram Group Join Now       

• ಬ್ಯಾಂಕ್ ಆಫ್ ಮಹಾರಾಷ್ಟ್ರ ಇದರ ಬಡ್ಡಿದರ 7.85% EMI, 827 ರೂಪಾಯಿಗಳು.

• ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಇದರ ಬಡ್ಡಿದರ 8.85%, EMI 827 ರೂಪಾಯಿಗಳು.

WhatsApp Group Join Now
Telegram Group Join Now       

• ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ಬಡ್ಡಿದರ 8.85%, EMI 827 ರೂಪಾಯಿಗಳು.

• ಇಂಡಿಯನ್ ಬ್ಯಾಂಕ್ ಇದರ ಬಡ್ಡಿದರ 7.90%, EMI 835 ರೂಪಾಯಿಗಳು.

• ಇಂಡಿಯನ್ ಓವರ್ಸೀಸ್ ಬ್ಯಾಂಕ್ ಇದರ ಬಡ್ಡಿದರ 7.90 ಇಎಂಐ 830 ರೂಪಾಯಿಗಳು.

• ಬ್ಯಾಂಕ್ ಆಫ್ ಬರೋಡ ಇದರ ಬಡ್ಡಿದರ 8%, EMI 836 ರೂಪಾಯಿಗಳು.

• ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದರ ಬಡ್ಡಿದರ 8%, EMI 836 ರೂಪಾಯಿಗಳು.

• ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ಬಡ್ಡಿದರ 8%, EMI 836 ರೂಪಾಯಿಗಳು.

• IDBI ಬ್ಯಾಂಕ್ ಇದರ ಬಡ್ಡಿದರ 8.25%, EMI 852 ರೂಪಾಯಿಗಳು.

ಇದನ್ನು ಒಮ್ಮೆ ಓದಿ: ವಿಕಲಚೇತನರು ಹಾಗೂ ಹಿರಿಯ ನಾಗರೀಕರ NGO ಗಳ ನೋಂದಣಿ ಮಾದರಿ ಬದಲು

ಇದರಲ್ಲಿ ಕೆನರಾ ಬ್ಯಾಂಕ್ ನೀಡುವ 7.80% ಬಡ್ಡಿದರ ಅತಿ ಕಡಿಮೆ ಇದೆ. ಹೀಗಾಗಿ, ಅತಿ ಕಡಿಮೆ ಬಡ್ಡಿಯಲ್ಲಿ ಸಾಲ ಬೇಕಾದರೆ ಇದು ನಿಮಗೆ ಉತ್ತಮ ಆಯ್ಕೆ ಎಂದು ಹೇಳಬಹುದು.

ಹೋಂ ಲೋನ್ ಬೇಗ ತೀರಿಸುವುದರಿಂದ ಏನಾಗುತ್ತದೆ?

ದೀರ್ಘ ಅವಧಿಯ ಸಾಲದಲ್ಲಿ ಬಡ್ಡಿಪಾಲು ಬಹುಮಟ್ಟಿಗೆ ಹೆಚ್ಚಾಗಿರುತ್ತದೆ. ಉದಾಹರಣೆಗೆ, 50 ಲಕ್ಷ ಹೋಂ ಲೋನ್ 30 ವರ್ಷಕ್ಕೆ 8% ಬಡ್ಡಿಯಲ್ಲಿ ಪಡೆದರೆ, ಬಡ್ಡಿ 82 ಲಕ್ಷ ರೂಪಾಯಿ ಪಾವತಿಸಬೇಕಾಗುತ್ತದೆ.

ಇದರ ಒಟ್ಟು ಮೊತ್ತ 1.32 ಕೋಟಿ ಆಗುತ್ತದೆ.

ಇದೇ ಸಾಲ 20 ವರ್ಷಕ್ಕೆ ತೀರಿಸಿದರೆ ಬಡ್ಡಿ 50.37 ಲಕ್ಷ ಮಾತ್ರ ಒಟ್ಟು ಒಂದು ಕೋಟಿ ರೂಪಾಯಿ ಆಗುತ್ತದೆ.

ಇದನ್ನು 10 ವರ್ಷದಲ್ಲಿ ತೀರಿಸಿದರೆ ಬಡ್ಡಿ 22.79 ಲಕ್ಷ ಆಗುತ್ತದೆ, ಒಟ್ಟು 72.79 ಲಕ್ಷ ರೂಪಾಯಿ ಆಗುತ್ತದೆ.

ಆದ್ದರಿಂದ, ಸ್ಪಷ್ಟವಾಗಿ, ನಮಗೆ ಇದರಲ್ಲಿ ಗೊತ್ತಾಗುವುದೇನೆಂದರೆ, ನಾವು ಬೇಗನೆ ಸಾಲ ತೀರಿಸಿದರೆ, ನಮಗೆ ಅಷ್ಟೇ ಹೆಚ್ಚು ಉಳಿತಾಯ ಆಗುತ್ತದೆ.

ನೀವು ಸಾಲ ಬೇಗನೆ ತೀರಿಸುವ ಟಿಪ್ಸ್ ಇಲ್ಲಿದೆ.

ಪ್ರತಿ ವರ್ಷ ಇಎಂಐ ಹೆಚ್ಚಿಸಿ, ಪ್ರತಿ ವರ್ಷ 5% ಇಎಂಐ ಹೆಚ್ಚಿಸಿದರೆ 20 ವರ್ಷದ ಸಾಲವನ್ನು 12 ವರ್ಷಗಳಲ್ಲಿ ತೀರಿಸಬಹುದು. ಸಾಲದ ಅವಧಿ ಕಡಿಮೆ ಮಾಡಿಕೊಳ್ಳಿ, ಹೆಚ್ಚು ಆದಾಯ ಬಂದಾಗ ಲಂಪ್ಸಮ್ ರೀತಿಯಲ್ಲಿ ಪಾವತಿಸಿ. ಸಾಲದ ಅವಧಿ ಕಡಿಮೆ ಮಾಡಿ, ಪ್ರೀ ಪೇಮೆಂಟ್ ಮಾಡಿ; ಬಹುಪಾಲು ಬ್ಯಾಂಕುಗಳು ಈಗ ಪೇಮೆಂಟ್ ಚಾರ್ಜ್ ಹಾಕುವುದಿಲ್ಲ. ಇದನ್ನು ಉಪಯೋಗಿಸಿಕೊಳ್ಳಿ.

ಡೌನ್ ಪೇಮೆಂಟ್ ಎಷ್ಟು ಕೊಡಬಹುದು?

ಹೋಂ ಲೋನ್ ಪಡೆದು ಅಧಿಕ ಬಡ್ಡಿ ತೀರಿಸದಿರುವುದು ಉತ್ತಮ. ಸಾಮಾನ್ಯವಾಗಿ 15ರಿಂದ ರಿಂದ 25% ಡೌನ್ ಪೇಮೆಂಟ್ ನೀಡುವುದು ಮಾನ್ಯ. ಉದಾಹರಣೆಗೆ, 50 ಲಕ್ಷ ರೂಪಾಯಿ ಸಾಲಕ್ಕೆ 7.5 ಲಕ್ಷದಿಂದ 12.5 ಲಕ್ಷ ಡೌನ್ ಪೇಮೆಂಟ್ ನೀಡಿದರೆ, ಬಡ್ಡಿಯೂ ಕಡಿಮೆಯಾಗುತ್ತದೆ ಹಾಗೂ EMI ಮೇಲಿನ ಒತ್ತಡವು ಕಡಿಮೆಯಾಗುತ್ತದೆ.

ಹೋಂ ಲೋನ್ ಪಡೆಯುವಾಗ ಬಡ್ಡಿದರ ಅವಧಿ EMI ಮತ್ತು ತಮ್ಮ ಬಜೆಟ್ ಅನ್ನು ಆಧಾರ ಮಾಡಿಕೊಂಡು ಪ್ಲಾನ್ ಮಾಡುವುದು ಉತ್ತಮ. ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕುಗಳು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವುದರಿಂದ ಅವು ಉತ್ತಮ ಆಯ್ಕೆಯಾಗಿ ಪರಿಣಮಿಸುತ್ತವೆ. ಜೊತೆಗೆ ತಮ್ಮ ಆದಾಯದಲ್ಲಿ ಹೆಚ್ಚಳವಾದಂತೆ ಸಾಲವನ್ನು ಬೇಗನೆ ಮುಗಿಸುವುದು ಹಣದ ಉಳಿತಾಯಕ್ಕು ಮುತ್ತು ಮನಸ್ಸಿನ ನೆಮ್ಮದಿಗೂ ಸಹಾಯವಾಗುತ್ತದೆ.

ಸ್ನೇಹಿತರೆ, ಇದೇ ರೀತಿ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

 

Leave a Comment