ಬ್ಯಾಂಕಲ್ಲಿ ಗೋಲ್ಡ್ ಲೋನ್ ಪಡೆಯಲು ಹೊಸ ನಿಯಮಗಳು.
ಗ್ರಾಹಕರಿಗೆ ಬ್ಯಾಂಕಿಂಗ್ ಹಾಗೂ ಹಣಕಾಸು ವಲಯದಲ್ಲಿ ಜನಸ್ನೇಹಿ ವ್ಯವಸ್ಥೆಯನ್ನು ಒದಗಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನದ ಮೇಲೆ ಜನಸಾಮಾನ್ಯರಿಗೆ ಸಾಲವನ್ನು ಒದಗಿಸಲು ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ವಿಷಯದ ಕುರಿತು ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ಕೊಡಲಾಗಿದೆ; ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.
ಇವಾಗಿನ ಈ ಲೇಖನದಲ್ಲಿ ಭಾರತೀಯ ರಿಜರ್ವ್ ಬ್ಯಾಂಕ್ ಚಿನ್ನದ ಮೇಲೆ ಬ್ಯಾಂಕ್ ಮೂಲಕ ಸಾಲವನ್ನು ತೆಗೆದುಕೊಳ್ಳಲು ಯಾವೆಲ್ಲ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ, ಇದರಿಂದ ಗ್ರಾಹಕರಿಗೆ ಸಿಗುವ ಪ್ರಯೋಜನಗಳೇನು, ಈ ನೇಮ ಯಾವಾಗಿನಿಂದ ಜಾರಿಗೆ ಬರಲಿದೆ, ಇದೇ ತರ ಸಂಪೂರ್ಣ ಅಗತ್ಯ ಮಾಹಿತಿಯನ್ನು ಈ ಕೆಳಗಡೆ ಕೊಡಲಾಗಿದೆ.
ಚಿನ್ನದ ಮೇಲೆ ಸಾಲವನ್ನು ಪಡೆಯಲು ಬದಲಾವಣೆ ಮಾಡಲು ಹೊರಟಿರುವ ಪ್ರಮುಖ ಅಂಶಗಳು ಇಲ್ಲಿವೆ.
• ಹತ್ತು ಗ್ರಾಂ ಬಂಗಾರದ ಮೇಲಿನ ಸಾಲದ ಮಿತಿ ಏರಿಕೆ.
ಪ್ರಸ್ತುತ 10 ಗ್ರಾಂ ಚಿನ್ನದ ಮೌಲ್ಯಕ್ಕೆ ಶೇಕಡ 75% ಗಳಷ್ಟು ಮಾತ್ರ ಸಾಲವನ್ನು ಬ್ಯಾಂಕ್ ಮೂಲಕ ಸಾರ್ವಜನಿಕರು ಪಡೆಯಲು ಅವಕಾಶ ಇತ್ತು. ಆದರೆ ಈಗ ಈ ನೇಮದಲ್ಲಿ ಸಡಿಲಿಕೆಯನ್ನು ಮಾಡಿ ಇನ್ನು ಮುಂದೆ 85% ಗಳಷ್ಟು ಚಿನ್ನದ ಮೇಲೆ ಸಾಲವನ್ನು ನೀಡಲು ಆರ್ ಬಿ ಐ ನಿಯಮದಲ್ಲಿ ಸಡಿಲಿಕೆ ಮಾಡಿದೆ. ಉದಾರಣೆಗೆ 1 ಲಕ್ಷ ಬೆಲೆ ಬಾಳುವ ಚಿನ್ನವನ್ನು ಬ್ಯಾಂಕಿನಲ್ಲಿ ಅಡ ಇಟ್ಟರೆ 85,000 ಸಾಲವನ್ನು ಪಡೆಯಬಹುದು.
• 2.50 ಲಕ್ಷಕ್ಕಿಂತ ಕಡಿಮೆ ಸಾಲವನ್ನು ಪಡೆಯಲು ಕ್ರೆಡಿಟ್ ಸ್ಕೋರ್ ಮೌಲ್ಯಮಾಪನದ ಅಗತ್ಯ ಇರುವುದಿಲ್ಲ.
2.50 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಮೊತ್ತದ ಚಿನ್ನದ ಸಾಲಕ್ಕೆ ಆದಾಯದ ಮೌಲ್ಯಮಾಪನ ಅಥವಾ ಕ್ರೆಡಿಟ್ ಚೆಕ್ ನ ಅಗತ್ಯ ಇರುವುದಿಲ್ಲ. ಆದುದರಿಂದ, ಸಣ್ಣ ಸಾಲಗಾರರು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು, ಸುಲಭವಾಗಿ ಚಿನ್ನದ ಮೇಲೆ ಸಾಲವನ್ನು ತೆಗೆದುಕೊಳ್ಳಲು ತುಂಬಾ ಸಹಾಯವಾಗುತ್ತಾರೆ.
• ಸಾಲ ಮುಗಿದ ನಂತರ ಚಿನ್ನ ಅಥವಾ ಬೆಳ್ಳಿಯ ತ್ವರಿತ ವಾಪಸ್ ಇರುತ್ತದೆ.
ಸಾಲದ ಮರುಪಾವತಿ ಆದ ದಿನದಿಂದ ಅಥವಾ ಗರಿಷ್ಠ ಏಳು ಕೆಲಸದ ದಿನಗಳ ಕೆಲಸದ ಒಳಗೆ ಗ್ರಾಹಕರು ಬ್ಯಾಂಕ್ನಲ್ಲಿ ಅಡವಿ ಇಟ್ಟಿರುವ ಚಿನ್ನ ಅಥವಾ ಬೆಳ್ಳಿಯನ್ನು ಗ್ರಾಹಕರಿಗೆ ವಾಪಸ್ ಕೊಡಲಾಗುತ್ತದೆ. ವಾಪಾಸ್ ಕೊಡಲು ತಡ ಆದರೆ ಸಾಲದ ಕೊಟ್ಟಿರುವ ಬ್ಯಾಂಕ್ಗಳು ಪ್ರತಿ ದಿನಕ್ಕೆ 50,00 ಗಳಂತೆ ಪರಿಹಾರವನ್ನು ಗ್ರಾಹಕರಿಗೆ ನೀಡಬೇಕು ಎಂದು ನೂತನ ನೇಮದಲ್ಲಿ ಉಲ್ಲೇಖ ಮಾಡಲಾಗಿದೆ.
ಇದನ್ನು ಓದಿ: ಕರ್ನಾಟಕ ಸಬ್ಸಿಡಿ ಸಹಿತ ಸ್ವಉದ್ಯೋಗ ಸಾಲ ಯೋಜನೆಗೆ ಅರ್ಜಿಗೆ ಆಹ್ವಾನ
• ಚಿನ್ನ ಹಾಗೂ ಬೆಳ್ಳಿಯ ಮೇಲೆ ಬ್ಯಾಂಕ್ ಮೂಲಕ ಸಾಲ ಪಡೆಯುವ ಮಿತಿಗಳೇನು.
ಸಾಲಾ ಪಡೆದುಕೊಳ್ಳುವವರು ಬ್ಯಾಂಕ್‌ನಲ್ಲಿ ಚಿನ್ನ ಅಥವಾ ಬೆಳ್ಳಿಯ ಮೇಲೆ ಸಾಲವನ್ನು ಪಡೆಯಲು ಈ ಕೆಳಗಿನ ಮಿತಿಯನ್ನು ಅನುಸರಿಸಬೇಕಾಗುತ್ತದೆ.
1. ಚಿನ್ನದ ಮೇಲೆ ಸಾಲ ಗರಿಷ್ಠ ಒಂದು ಕೆಜಿಯವರೆಗೆ ಇದೆ.
2. ಬೆಳ್ಳಿ ನಾಣ್ಯಗಳು ಗರಿಷ್ಠ 500 ಗ್ರಾಂ ಗಳವರೆಗೆ ಇವೆ.
3. ಚಿನ್ನದ ನಾಣ್ಯಗಳ ಮೇಲೆ ಸಾಲ ಪಡೆಯಲು ಗರಿಷ್ಠ 50 ಗ್ರಾಂ ಗಳವರೆಗೆ ಅವಕಾಶ ಇರುತ್ತದೆ.
4. ಇದೇ ಮಾದರಿಯಲ್ಲಿ ಬೆಳ್ಳಿ ಆಭರಣಗಳು ಗರಿಷ್ಠ 10 ಕೆ.ಜಿ ವರೆಗೆ ಇರುತ್ತವೆ.
• ಬ್ಯಾಂಕಿನಿಂದ ಪೂರ್ಣ ಪರಿಹಾರ ಏನು.
ಅಡ ಇಟ್ಟ ಚಿನ್ನದ ಡ್ಯಾಮೇಜ್ ಅಥವಾ ಕಳೆದುಹೋದರೆ ಬ್ಯಾಂಕುಗಳು ಗ್ರಾಹಕರಿಗೆ ಪೂರ್ಣ ಪರಿಹಾರ ನೀಡಬೇಕಾಗುತ್ತದೆ.
• ಪಾರದರ್ಶಕ ಹರಾಜು ಪ್ರಕ್ರಿಯೆ ಇರುತ್ತದೆ.
ಸಾಲದ ಡಿಫಾಲ್ಟ್ ಆದರೆ ಚಿನ್ನವನ್ನು ಹರಾಜು ಮಾಡುವ ಮುಂಚಿತವಾಗಿ ಸಾಲಗಾರರಿಗೆ ಸರಿಯಾದ ಸೂಚನೆಯನ್ನು ನೀಡುತ್ತದೆ.
ಹರಾಜಿನ ಕನಿಷ್ಠ ಬೆಲೆ ಮಾರುಕಟ್ಟೆ ಮೌಲ್ಯದ ಕನಿಷ್ಠ 90% ಆಗಿರಬೇಕು; ರಾಜಿಯಿಂದ ಉಳಿದ ಯಾವುದೇ ಹೆಚ್ಚುವರಿ ಮೊತ್ತವನ್ನು ಏಳು ದಿನದ ಕೆಲಸದ ದಿನಗಳವರೆಗೆ ಸಾಲಗಾರರಿಗೆ ವಾಪಸ್ ನೀಡುತ್ತದೆ.
ಇದನ್ನು ಓದಿ: ಮನೆ ಕಟ್ಟಲು ಸಾಲ ಬೇಕಾ? ಈ ಬ್ಯಾಂಕ್ಗಳಲ್ಲಿ ಕಮ್ಮಿ ಬಡ್ಡಿಗೆ ಸಿಗುತ್ತೆ ಹೋಮ್ ಲೋನ್.
ಹೊಸ ನಿಯಮ ಯಾವಾಗಿನಿಂದ ಜಾರಿಗೆ ಆಗಲಿದೆ?
ಗ್ರಾಹಕರು ಚಿನ್ನ ಹಾಗೂ ಬೆಳ್ಳಿಯ ಮೇಲೆ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಆರ್ಬಿಐನಿಂದ ನಿಂದ ರೂಪಿಸಿರುವ ಹೊಸ ನೇಮವು ಏಪ್ರಿಲ್ 1, 2026 ರಂದು ಜಾರಿಗೆ ಬರಲಿದೆ.
ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.