Please leave the Malagasy ones alone; Sam Altman & Team’s sleep-deprived Ghibli dolls, Instagram, Facebook, X social media reels are filled with Ghibli and Ghibli-style AI images everywhere you look.

Please leave the Malagasy ones alone; Sam Altman & Team’s sleep-deprived Ghibli dolls, Instagram, Facebook, X social media reels are filled with Ghibli and Ghibli-style AI images everywhere you look.

ಮಲಗಾಕ್ಕಾದ್ರೂ ಬಿಡಿ ಪ್ಲೀಸ್;‌ ಸ್ಯಾಮ್‌ ಅಲ್ಟ್‌ಮನ್‌ & ಟೀಂ ನಿದ್ದೆಗೆಡಿಸಿದ ಘಿಬ್ಲಿ ಗೊಂಬೆಗಳು, ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌, ಎಕ್ಸ್‌ ಸೋಶಿಯಲ್‌ ಮೀಡಿಯಾ ರೀಲ್ಸ್‌ಗಳು ಎಲ್ಲಿ ನೋಡಿದ್ರೂ ಘಿಬ್ಲಿ, ಘಿಬ್ಲಿ ಶೈಲಿಯ AI ಚಿತ್ರಗಳು ಪೂರ್ತಿ ಧೂಳೆಬ್ಬಿಸಿವೆ.

ರೀಲ್ಸ್‌ಗಳಲ್ಲಿ ಟ್ರೆಂಡ್‌ ಹೆಚ್ಚಾದಂತೆ, ಚಾಟ್‌ ಚಾಟ್‌ಚಾಟ್‌ಜಿಪಿಟಿಯಲ್ಲಿ, ಓಪನ್‌ಎಐ, GROKನಲ್ಲಿ ಜನರ ಬೇಡಿಕೆ ಸಹ ಹೆಚ್ಚಾಗುತ್ತಿದೆ. ಈ ವಿಷಯದ ಬಗ್ಗೆ ತುಂಬಾ ಆಲೋಚನೆ ಮಾಡಿ, ಸ್ಯಾಮ್ ಅಲ್ಟ್‌ಮನ್ ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ. “ದಯವಿಟ್ಟು ಚಿತ್ರಗಳನ್ನು ರಚಿಸುವುದರಲ್ಲಿ ಶಾಂತರಾಗಿರಿ, ಇದು ಹುಚ್ಚುತನ, ನಮ್ಮ ತಂಡಕ್ಕೆ ನಿದ್ರೆ ಬೇಕು” ಎಂದು ಅವರು ಹೇಳಿದರು. Instagram ನಲ್ಲಿ facebook ನಲ್ಲಿ ಎಕ್ಸ್ ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ರಿಲ್ಸ್ ಗಳಲ್ಲಿ ಎಲ್ಲಿ ನೋಡಿದರಲ್ಲಿ ಓಪನ್ ಎಐನ ಘಿಬ್ಲಿ ಚಿತ್ರಗಳು ಧೂಳೆಬ್ಬಿಸಿವೆ. ದಿನದಿಂದ ದಿನಕ್ಕೆ ದಿನಗಳು ಕಳೆದಂತೆ ಜನರ ಹುಚ್ಚು ಮತ್ತು ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ, ದಯವಿಟ್ಟು ನಿಮ್ಮ ಭಾವಚಿತ್ರ ಘಿಬ್ಲಿಗೆ ಪರಿವರ್ತಿಸುವಲ್ಲಿ ಸ್ವಲ್ಪ ಕಡಿಮೆ ಮಾಡಿ, ನಮ್ಮ ತಂಡಕ್ಕೆ ನಿದ್ರೆ ಬೇಕು ಎಂದು ಓಪನ್‌ಎಐ ಸಿಇಒ ಸ್ಯಾಮ್ ಅಲ್ಟ್‌ಮನ್ ಮನವಿ ಮಾಡಿಕೊಂಡಿದ್ದಾರೆ. ಕ್ಲಾಸಿಕ್, ಬಾಲಿವುಡ್, ತಮ್ಮ ಭಾವಚಿತ್ರ, ಪ್ರಧಾನಿ ಮೋದಿ ಸೇರಿದಂತೆ ಇನ್ನೂ ಮುಂತಾದವರ ವೈರಲ್‌ ಮೀಮ್ಸ್‌ಗಳನ್ನು ಜಪಾನೀಸ್ ಒಪನ್AI ಕಲೆಯಾಗಿ ಪರಿವರ್ತಿಸುತ್ತಿದ್ದಾರೆ. ಆನಿಮೇಟೆಡ್ ಸಿನಿಮಾಗಳ ಪಾತ್ರಗಳಂತೆ ಇರುವ ಚಿತ್ರಗಳು ತುಂಬಾ ಟ್ರೆಂಡಿ ಆಗಿವೆ. ನಟ, ನಟಿಯರು, ರಾಜಕಾರಣಿಗಳು ಟ್ರೆಂಡ್ ಆಗೊಗಿದ್ದಾರೆ. ಇತ್ತೀಚೆಗೆ ಸಚಿನ್‌ ತೆಂಡೂಲ್ಕರ್‌, ಅಖಿಲೇಶ್‌ ಯಾದವ್‌, ತೆಲಂಗಾಣ ಮಾಜಿ ಸಿಎಂ ಕೆಟಿಆರ್‌, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ದೇವೇಂದ್ರ ಫಡ್ನವೀಸ್‌ ಸೇರಿದಂತೆ ಹಲವರು ತಮ್ಮ ಘಿಬ್ಲಿ ಫೋಟೋಗಳನ್ನು ಅವರವರ ಖಾತೆಗಳಲ್ಲಿ ಪೋಸ್ಟ್‌ ಮಾಡಿದ್ದಾರೆ.

ನಮ್ಮ ತಂಡಕ್ಕೆ ನಿದ್ರೆ ಬೇಕು!

ರೀಲ್ಸ್‌ಗಳಲ್ಲಿ ಟ್ರೆಂಡ್‌ ಹೆಚ್ಚಾದಂತೆ, ಚಾಟ್‌ ಚಾಟ್‌ಚಾಟ್‌ಜಿಪಿಟಿಯಲ್ಲಿ, ಓಪನ್‌ಎಐ, GROKನಲ್ಲಿ ಜನರ ಬೇಡಿಕೆ ಸಹ ಹೆಚ್ಚಾಗುತ್ತಿದೆ. ಈ ವಿಷಯದ ಬಗ್ಗೆ ಸ್ಯಾಮ್ ಅಲ್ಟ್‌ಮನ್ ತುಂಬ ಯೋಚನೆ ಮಾಡಿ ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿ. “ದಯವಿಟ್ಟು ಘಿಬ್ಲಿ ಚಿತ್ರಗಳನ್ನು ರಚಿಸುವುದರಲ್ಲಿ ಸ್ವಲ್ಪ ಶಾಂತಿಯುತದಿಂದಿರಿ, ತಾಳ್ಮೆಯಿಂದಿರಿ, ಇದು ಹುಚ್ಚುತನ, ನಮ್ಮ ತಂಡಕ್ಕೆ ನಿದ್ರೆ ಬೇಕು” ಎಂದು ಅವರು ಹೇಳಿದರು. ಹೊರೆ ಹೆಚ್ಚಿರುವಾಗ ಬಹಳಷ್ಟು ಜನರು ಎಚ್ಚರವಾಗಿರಬೇಕಾಗುತ್ತದೆಯೇ? ಎಂದು ಸ್ಯಾಮ್ ಅಲ್ಟ್‌ಮನ್ ಟ್ವೀಟ್‌ಗೆ ಎಲಾನ್‌ ಮಸ್ಕ್‌ ಕಾಮೆಂಟ್‌ ಮಾಡಿ ಪ್ರಶ್ನಿಸಿದ್ದಾರೆ. ಇದಕ್ಕೆ ಸ್ಟಾಲ್‌ಮನ್‌, “ಘಿಬ್ಲಿ ಆರ್ಟ್‌ ಪ್ರಾರಭ ಆದಾಗಿನಿಂದಲೂ ಸೇವೆಯನ್ನು ಮುಂದುವರಿಸಲು ಕೆಲಸ ಮಾಡುತ್ತಿದ್ದಾರೆ. ಜನರ ಬೇಡಿಕೆ ಜಾಸ್ತಿ ಆಗುತ್ತಿದೆ. ಇದರಿಂದಾಗಿ ಓವರ್‌ಲೋಡ್ ಲೋಡ್‌ ಸಮಸ್ಯೆ ಆಗುತ್ತಿದೆ. ಈ ಸಮಸ್ಯೆಯನ್ನು ಸರಿ ಪಡಿಸಲು ನಮ್ಮ ತಂತ್ರಜ್ಞಾನ ವಿಭಾಗ ಸತತವಾಗಿ ಕೆಲಸ ಮಾಡುತ್ತಿದೆ. ಹಿಂದೆ ಎಂದು ಈ ತರ ಸಮಸ್ಯೆ ಆಗಿರಲಿಲ್ಲ” ಎಂದು ಸ್ಟಾಲ್‌ಮನ್‌ ಉತ್ತರಿಸಿದ್ದಾರೆ.

ನಮ್ಮ ತಂಡ ನಿದ್ರೆ ಮಾಡಬೇಕು ಎಂದು ಟ್ವೀಟ್‌ ಮಾಡಿದ ಕೂಡಲೇ, ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿ, ಇವಾಗಿರುವ ನಿಮ್ಮ ತಂಡವನ್ನು ವಜಾಗೊಳಿಸಿ ಮತ್ತು ಹೊಸ ತಂಡವನ್ನು ಮಾಡಿಕೊಳ್ಳಲು ಕಾಮೆಂಟ್ ಮೂಲಕ ಸ್ಯಾಮ್ ಅಲ್ಟ್‌ಮನ್ ಗೆ ಸಲಹೆ ನೀಡಿದ್ದಾನೆ; ಅದಕ್ಕೆ ಸ್ಯಾಮ್ ಅಲ್ಟ್ಮನ್ ಪ್ರತಿಕ್ರಿಯಿಸಿ, “ಧನ್ಯವಾದಗಳು ನಿಮ್ಮ ಸಲಹೆಗೆ ಎಂದು ಹೇಳಿ ಕೃತಕ ಸಾಮಾನ್ಯ ಬುದ್ಧಿಮತ್ತೆ (AGI) ಅಭಿವೃದ್ಧಿ ಪಡಿಸುವುದರ ಜೊತೆಗೆ ವಿಶ್ವದ ಅತಿದೊಡ್ಡ ವೆಬ್‌ಸೈಟ್ ನಿರ್ಮಿಸುವ ಪ್ರಯತ್ನದಲ್ಲಿ ಇದೆ, ನಮ್ಮ ತಂಡ ಸದ್ಯ ಶ್ರಮಿಸುತ್ತಿದೆ, ಕಷ್ಟ ಪಟ್ಟಿದೆ” ಎಂದು ಸಮರ್ಥಿಸಿದ್ದಾರೆ.

ಕ್ರಿಸ್‌ ಎಂಬುವವರು ಟ್ವೀಟ್‌ ಮಾಡಿ, ನೀವು AGI ಟೈಮ್‌ ಲೈನ್ಗಳಲ್ಲಿ ಇದ್ದರೆ ದೃಢಪಡಿಸಿ ಎಂದಿದ್ದಾರೆ. ಅದಕ್ಕೆ ಸಿಇಓ ನೀವು ನಿರಂತರವಾಗಿ ಘಿಬ್ಲಿ ಆರ್ಟ್‌ ಪ್ರಯೋಗ ಮಾಡೋದನ್ನ, GPUs ಬಳಸುವುದನ್ನು ಕಡಿಮೆ ಮಾಡಿ ಅಥವಾ ನಿಲ್ಲಿಸಿ, AGI ಜಲ್ದಿ ಚಾಲ್ತಿಗೆ ಬರುತ್ತದೆ ಎಂದು ಉತ್ತರಿಸಿದ್ದಾರೆ. ChatGPT ಯ ಸ್ಥಳೀಯ ಇಮೇಜ್ ಜನರೇಷನ್ ವೈಶಿಷ್ಟ್ಯವು ಕಂಪನಿಯ ಸಂಪನ್ಮೂಲಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತಿದೆ. ಕೆಲವೇ ದಿನಗಳ ಹಿಂದೆ, ಓಪನ್‌ಎಐನ ಗ್ರಾಫಿಕ್ಸ್ ಪ್ರೊಸೆಸಿಂಗ್ ಯೂನಿಟ್ (GPU) ಬೆಲೆ ಇಳಿಕೆ ಆಗುತ್ತಿದೆ ಎಂದು ಉಲ್ಲೇಖಿಸಿ, ChatGPT ಪ್ಲಸ್ ಮತ್ತು ಪ್ರೊ ಬಳಕೆದಾರರಿಗೆ ಸಹ ಇಮೇಜ್ ತಯಾರಿಕೆಯ ಮೇಲೆ ರೂಲ್ಸ್ ಅನ್ನು ಅಲ್ಟ್‌ಮನ್ ಘೋಷಿಸಿದರು.

WhatsApp Group Join Now
Telegram Group Join Now       

ಘಿಬ್ಲಿ ಬಗ್ಗೆ ಮಿಯಾಝಾಕಿ ಹಯಾವೋ ಬೇಸರ,

ಕಲೆ ಎಂಬುದು ಒಬ್ಬ ಮನುಷ್ಯ ಭಾವನೆ ವ್ಯಕ್ತಪಡಿಸಲು ಇರುವಂತದ್ದು. ಕಲಾವಿದರು ಹೊಸ ಕಲೆ ರೂಪಿಸಲು ತಮ್ಮ ಜೀವನವನ್ನೇ ಪ್ರತಿ ಚೌಕಟ್ಟು ಅವರ ಅನುಭವಗಳು, ಭಾವನೆಗಳು ಮತ್ತು ನಿರಂತರ ಸಮರ್ಪಣೆಯ ಪ್ರತಿಬಿಂಬವಾಗಿದೆ. ಈ AI ರಚಿಸಿದಿಂದ ಘಿಬ್ಲಿ ಮೂಲ ತತ್ವ ಹಾಳು ಮಾಡುತ್ತದೆ. ನಿಜವಾದ ಕಲೆ ಸತತವಾಗಿ ಪ್ರಯತ್ನ ಮತ್ತು ಹೋರಾಟದಿಂದ ಕೂಡಿರುತ್ತದೆ. ಈ ಜಪಾನಿನ ಕಲೆ ಕಾರ್ಯರೂಪಕ್ಕೆ ತರಲು ಹದಿಮೂರು ತಿಂಗಳಿಗೂ ಹೆಚ್ಚು ದಿನ ಬೇಕಾಯಿತು. ಮಾನವನ ಸ್ಪರ್ಶ ಇಲ್ಲದೆ ಯಂತ್ರದಿಂದ ಸೃಷ್ಟಿ ಆಗುವ ಕಲೆಗೆ ಯಾವುದೇ ಭಾವನೆ ಪೀಲಿಂಗ್ಸ್ ಇರೋದಿಲ್ಲ. ಘಿಬ್ಲಿ ಚಿತ್ರ ಕ್ಷಣಾರ್ಧದಲ್ಲಿ ತಯಾರಿಸುವುದು ನನಗೆ ಮಾಡಿರುವ ಅವಮಾನ ಎಂದು ಮಿಯಾಝಾಕಿ ಹಯಾವೋ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದಾರೆ.

ಏನಿದು ಘಿಬ್ಲಿ ಆರ್ಟ್‌?

ಈ ಘಿಬ್ಲಿ ಚಿತ್ರದ ಮೂಲ ಜಪಾನ್‌ನಲ್ಲಿ ಇರುವುದು. ಜಪಾನ್‌ನ ಅತ್ಯಂತ ಜನಪ್ರಿಯವಾದ ಆನಿಮೇಷನ್‌ ಫಿಲ್ಮ್‌ ಸ್ಟುಡಿಯೋ ಒಂದರ ಹೆಸರು ಘಿಬ್ಲಿ. 1985ರಲ್ಲಿ ಮಿಯಾಝಾಕಿ ಹಯಾವೋ, ಸುಜುಕಿ ಟೊಶಿವೊ ಹಾಗೂ ತಕಾಹತ ಇಸಾವೊ ಈ ಸ್ಟುಡಿಯೋವನ್ನು ನಿರ್ಮಿಸಿತು. ಭಾವನಾತ್ಮಕವಾಗಿ ಆಕರ್ಷಕವಾಗಿ ಕಥೆ ಹೇಳುವದಕ್ಕೆ, ಕೈಯಿಂದ ಬಿಡಿಸಿದ ಚಿತ್ರಿಸಿದ ಅನಿಮೇಷನ್‌ಗೆ ಘಿಬ್ಲಿ ಸ್ಟುಡಿಯೋ ಹೆಸರುವಾಸಿಯಾಗಿದೆ. 90ರ ದಶಕದಲ್ಲಿ, ಮೈ ನೇಬರ್‌ ಟೊಟೊರೊ, ಕಿಕಿಸ್‌ ಡೆಲಿವರಿ ಸರ್ವೀಸ್‌, ಸೇರಿದಂತೆ ಹಲವು ಆನಿಮೇಟೆಡ್‌ ಸಿನಿಮಾ/ಧಾರವಾಹಿಗಳು ಪ್ರಸಿದ್ಧಿ ಪಡೆದಿದ್ದರು. ಎಲ್ಲೆಲ್ಲಿ ಘಿಬ್ಲಿ ಚಿತ್ರ ರಚಿಸಬಹುದು ಈ ಘಿಬ್ಲಿ ಚಿತ್ರವನ್ನು OpenAI ಮಾತ್ರವಲ್ಲದೇ ಎಕ್ಸ್‌ನ ಗ್ರಾಕ್‌, ಗೂಗಲ್‌ ಜೆಮಿನಿ, ಇನ್ನೂ ಮುಂತಾದ ಪ್ಲಾಟ್‌ಫಾರ್ಮ್‌ಗಳಲ್ಲಿ ರಚಿಸಬಹುದು. ಗೆಳೆಯರು, ತಮ್ಮ ಕುಟುಂಬದವರ ಫೋಟೋಗಳನ್ನು ಅಪ್ಲೋಡ್‌ ಮಾಡಿ ಎಐನಿಂದ ಸೃಷ್ಟಿಸಿದ ಘಿಬ್ಲಿ ಚಿತ್ರಗಳನ್ನು ಪೋಸ್ಟ್ ಮಾಡ್ತಿದ್ದಾರೆ. ದೊಡ್ಡ, ದೊಡ್ಡ ಬ್ರ್ಯಾಂಡ್‌ಗಳು ತಮ್ಮ ಜಾಹೀರಾತುಗಳಿಗೆ ಘಿಬ್ಲಿ ಚಿತ್ರಗಳನ್ನು ಬಳಸಿಕೊಂಡು ಪ್ರಚಾರ ಮಾಡಲಿಕ್ಕೆ ಪ್ರಾರಂಭಿಸಿವೆ.

WhatsApp Group Join Now
Telegram Group Join Now       

 

Leave a Comment