RCB vs KKR: Sunil narine Not out!
ಕಾರಣವೇನು.
2025ಮಾರ್ಚ್ 22 ರಂದು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ ಮೊದಲ ಪಂದ್ಯದಲ್ಲಿ RCB ಅಭಿಮಾನಿಗಳಿಗೆ ಸಾಕಷ್ಟು ಗೊಂದಲ ಸೃಷ್ಟಿ ಮಾಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಡುತ್ತಿರುವಾಗ ಅಂಪೈರ್ ತೀರ್ಮಾನ RCB ಅಭಿಮಾನಿಗಳಿಗೆ ಬೆಸರ ಉಂಟು ಮಾಡಿದೆ . ಟಾಸ್ ಗೆದ್ದ RCB ಬೌಲಿಂಗ್ ಆಯ್ಕೆ ಮಾಡಿತು, KKR ಬ್ಯಾಟಿಂಗ್ ಅಯ್ಕೆ ಮಾಡಿಕೊಂಡಿತು. 8ನೇ ಓವರ್ ನಲ್ಲಿ ಸುನಿಲ್ ನರೈನ್ ಬ್ಯಾಟ್‌ನಿಂದ ವಿಕೆಟ್‌ಗೆ ತಗಲಿಸಿದರು, ಬೇಲ್ಸ್ ಕೆಳಗಡೆ ಬಿತ್ತು ಆದರೂ ಅಂಪೈರ್ ಔಟ್ ಕೊಡಲಿಲ್ಲ, ಈ ವಿಷಯ ಚರ್ಚೆಗೆ ಕಾರಣವಾಯಿತು.
ಬ್ಯಾಟ್ಸ್‌ಮನ್ ಬ್ಯಾಟ್‌ನಿಂದ ವಿಕೆಟ್ ತಾಗಿ ಬೇಲ್ಸ್ ಕೆಳಗಡೆ ಬಿದ್ದಾಗ ಅದನ್ನು ಹಿಟ್ ವಿಕೆಟ್ ಎಂದು ಔಟ್ ಕೊಡಲಾಗುತ್ತದೆ, ಅದರೆ ಇಲ್ಲಿ ಬ್ಯಾಟರ್ ನನ್ನು ಔಟ್ ಎಂದು ಅಂಪೈರ್ ಔಟ್ ಎಂದು ಹೇಳಲಿಲ್ಲ. ಸುನಿಲ್ ನರೈನ್‌ರವರಿಗೆ ಔಟ್ ಕೊಡದೇ ಇರುವುದು RCB ಅಭಿಮಾನಿಗಳಗೆ ಬೇಸರ ಉಂಟುಮಾಡಿದೆ. RCB ಅಬಿಮಾನಿಗಳು ಇದು ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ರೊಚ್ಚಿಗೆದ್ದು ಸೋಷಿಯಲ್ ಮೀಡಿಯಾದಲ್ಲಿ ಪೊಸ್ಟ್ ಮಾಡಿದ್ದಾರೆ.
ಆಗಿರದೆ ಕ್ರಿಕೆಟ್ ನಿಯಮ ಎನಿದೆ ನೋಡಿ.
ಈ ಪಂದ್ಯಕ್ಕೆ ಅಭಿಜೀತ್ ಬೆಂಗೇರಿ ಮತ್ತು ವಿನೋದ್ ಶೇಷನ್ ಅಂಪೈರ್ ಗಳಾಗಿದ್ದರು, ಔಟ್ ಕೊಡದೇ ಇರುವುದು ಇದು ಸರಿನಾ? ಹೌದು ಇದು ಸರಿಯಾದ ನಿರ್ಧಾರವಾಗಿದೆ. ರಸಿಕ್ ಸಲಾಂ ದಾರ್ ಬೌಲಿಂಗ್ ಮಾಡುತಿದ್ದರು ಲೆಗ್ ಅಂಪೈರ್ ವೈಡ್ ಎಂದು ಪರಿಗಣಿಸಿ ತೀರ್ಪು ಕೊಟ್ಟರು.ಸುನಿಲ್ ನರೈನ್ ಚೆಂಡನ್ನು ಜೋರಾಗಿ ಹೊಡೆಯಲು ಬಲವಾಗಿ ಬ್ಯಾಟ್ ಬೀಸಿದರು,ಆಗ ಚೆಂಡು ಸುನಿಲ್ ನರೈನ್ ಅವರ ಮೇಲೆ ಹೋದ ಕಾರಣದಿಂದ ಬ್ಯಾಟ್ ಬೀಸಲು ಹೋಗಿ ಸುಮ್ಮನಾದರು. ತಮ್ಮ ಬ್ಯಾಟ್ ಅನ್ನು ಕೆಳಗೆ ಹಾಕುವಾಗ,ಸುನಿಲ್ ನರೈನ್ ಬೇಲ್ಸ್ ಟಚ್ ಮಾಡಿದರು.
ಅಂಪೈರ್ ಗಳು ಇದನ್ನು ನೋಡಿ ಏನು ಹೇಳದೆ ಸುಮ್ಮನಾದರು. ಆದರೆ ಟಿಮ್ ಡೇವಿಡ್ ಮೇಲ್ಮನವಿ ಸಲ್ಲಿಸಿದರು ಆಗ ಕೂಡ ಅಂಪೈರ್ ಗಳು ಸುಮ್ಮನಿದ್ದರು. ಔಟ್ ಇದ್ದರೂ ಅಂಪೈರ್ ಗಳು ಔಟ್ ಕೊಟ್ಟಿಲ್ಲ ಎನ್ನುವುದು RCB ಅಭಿಮಾನಿಗಳ ಆರೋಪ, ಆದರೆ ಅಂಪೈರ್ ಗಳು ರೂಲ್ಸ್ ಪ್ರಕಾರನೆ ಇದಿದ್ದಾರೆ.
ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ನಿಯಮಗಳ ಪ್ರಕಾರ, ಒಬ್ಬ ಬ್ಯಾಟ್ಸ್‌ಮನ್ ಬಾಲ್ ಹೊಡೆಯಲು ಯತ್ನಿಸಿದಾಗ ಮಾತ್ರ ವಿಕೆಟ್‌ಗೆ ಬ್ಯಾಟ್ ತಾಕಿದರೆ ಅದನ್ನು ಹಿಟ್ ವಿಕೆಟ್ ಎಂದು ನಿರ್ಧರಿಸಲಾಗುತ್ತದೆ. ಸುನಿಲ್ ನರೈನ್ ಬಾಲ್ ಹೊಡೆಯಲು ಪ್ರಯತ್ನಿಸದೆ ಇದ್ದ ಕಾರಣ ಅವರನ್ನು ನಾಟೌಟ್ ಎಂದು ತೀರ್ಮಾನಿಸಲಾಯಿತು.
ಅಕಸ್ಮಾತ ವೈಡ್ ಬಾಲ್ ಆಗಿದ್ದರೆ ಹಿಟ್ ವಿಕೆಟ್ ಆಗುತ್ತಿತ್ತು. ಇಲ್ಲಿ ಮುಖ್ಯವಾದ ನಿಯಮಗಳು ಏನೆಂದರೆ ಬ್ಯಾಟ್ಸ್‌ಮನ್ ಬಾಲನ್ನು ಆಡುವಾಗ ಇಲ್ಲ ಆಡಲು ಪ್ರಯತ್ನ ಮಾಡುವಾಗ ಸ್ಟಂಪ್‌ಗಳನ್ನು ಹೊಡೆದು ಬೇಲ್ಸ್ ಕೆಳಗೆ ಬಿದ್ದರೆ. ಅದು ನೆಮದ ಪ್ರಕಾರ ಡೆಲಿವರಿ ಆಗಿರಲಿ ಅಥವಾ ವೈಡ್ ಆಗಿರಲಿ ಔಟ್ ಕೊಡಲಾಗುತ್ತದೆ. ಆದರೆ, ಬಾಲ್ ಪಾಸ್ ಆದ ನಂತರ ಬ್ಯಾಟ್ಸ್‌ಮನ್ ಸ್ಟಂಪ್‌ಗಳನ್ನು ತಗಲಿದರೆ ಮತ್ತು ಅದನ್ನು ಆಡಲು ಮುಂದಾದರೆ ಅದನ್ನು ಔಟ್ ಕೊಡಲಾಗಿದೆ ಇಲ್ಲಿ ಹಾಗಾಗಿಲ್ಲ ಕೊಡಲು ಆಗುವುದಿಲ್ಲ” ಎಂದು ನಿಯಮ ಸೂಚಿಸುತ್ತದೆ.