Riot at the event of the movie ‘Vamana’;

Spread the love

Riot at the event of the movie ‘Vamana’;

‘ವಾಮನ’ ಸಿನಿಮಾದ ಇವೆಂಟ್‌ನಲ್ಲಿ ಗಲಾಟೆ;

ನಟ ದರ್ಶನ್ ಅಭಿಮಾನಿಗಳ ರೊಷಕ್ಕೆ ಪ್ರಸನ್ನ ಥಿಯೇಟರ್ ಹಾನಿಗೆ ಒಳಗಾಗಿದೆ!

ಧನ್ವೀರ್, ರೀಷ್ಮಾ ರವರ ಅಭಿನಯದ ‘ವಾಮನ’ ಸಿನಿಮಾವು ಏಪ್ರಿಲ್ 10ರಂದು ಬಿಡುಗಡೆ ಆಗಲಿದೆ. ಅದಕ್ಕೂ ಮುಂಚೆ ಗುರುವಾರ, ಮಾರ್ಚ್ 27ರಂದು, ಗ್ರ್ಯಾಂಡ್ ಆಗಿ ‘ವಾಮನ’ ಚಲನಚಿತ್ರದ ಪ್ರೀ-ರಿಲೀಸ್ ಇವೆಂಟ್ ಮಾಡಿದರು, ಚಿತ್ರದ ಟ್ರೈಲರ್ ಕೂಡ ಬಿಡುಗಡೆ ಮಾಡಿದೆ, ಚಿತ್ರತಂಡ ಮೊದಲೇ ಅಂದುಕೊಂಡಂತೆಯೇ, ಇವೆಂಟ್‌ ಜೋರಾಗಿ ಮಾಡಲಾಯ್ತು. ಆದರೆ ಆಮೇಲೆ ನಡೆದಿರುವುದು ಮಾತ್ರ ಬೇಸರದ ಸಂಗತಿ!

ನಿಜ, ಬೆಂಗಳೂರಿನಲ್ಲಿ ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್‌ನಲ್ಲಿ ಗುರುವಾರ ಸಂಜೆ ವಾಮನ ಸಿನಿಮಾದ ಇವೆಂಟ್‌ಗೆ ವ್ಯವಸ್ಥೆ ಮಾಡಲಾಗಿತ್ತು. ನಟ ದರ್ಶನ್ ಅವರ ಆಪ್ತರಾಗಿರುವ ಧನ್ವೀರ್‌ಗೆ D Boos ಅಭಿಮಾನಿಗಳು ನಟ ದರ್ಶನರನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು. ಈ ಸಿನಿಮಾದ ಟ್ರೇಲರ್ ದರ್ಶನ್ ಬಿಡುಗಡೆ ಮಾಡ್ತಾರೆ ಎಂದು ಮೊದಲೇ ಪ್ರಚಾರ ಮಾಡಲಾಗಿತ್ತು. ಹಾಗಾಗಿ, ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಥಿಯೇಟರ್ ಹತ್ತಿರ ಬಂದಿದ್ದರು. ಆದರೆ ಇವೆಂಟ್‌ಗೆ ನಟ ದರ್ಶನ್ ಕಾರಣಾಂತರದಿಂದ ಬರಲು ಆಗಲಿಲ್ಲ. ಯಾಕೆಂದರೆ, ನಟ ದರ್ಶನ್ ಅವರು ರಾಜಸ್ಥಾನದಲ್ಲಿ ಡೆವಿಲ್ ಶೂಟಿಂಗ್‌ನಲ್ಲಿ ಬ್ಯುಸಿ ಇರುವುದರಿಂದ ವಾಮನ ಚಿತ್ರದ ಇವೆಂಟ್‌ಗೆ ಅವರು ಬರಲು ಸಾಧ್ಯವಾಗಲಿಲ್ಲ. ಹಾಗಾಗಿ, ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇ ಅಲ್ಲದೆ

ಇತ್ತ ಪ್ರಸನ್ನ ಚಿತ್ರ ಮಂದಿರದ ಹತ್ತಿರ ನಟ ದರ್ಶನ್ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದರು. ಅಭಿಮಾನಿಗಳು ತಮ್ಮ ಪ್ರೀತಿಯ ನಟ ದರ್ಶನನ್ನು ನೋಡಲು ಪ್ರಸನ್ನ ಚಿತ್ರಮಂದಿರದ ಗೇಟ್, ಗ್ಲಾಸ್, ಕುರ್ಚಿಗಳನ್ನು ಮುರಿದು ಹಾಕಿದರು. ಇದರಿಂದ ಚಿತ್ರ ಮಂದಿರದ ಮಾಲೀಕರಿಗೆ ಲಕ್ಷಾಂತರ ರೂಪಾಯಿ ಲಾಸ್ ಆಗಿದೆ. ಚಿತ್ರ ಮಂದಿರದ ಬಾಲ್ಕಾನಿಯಲ್ಲಿ 10 ಮತ್ತು ಸೆಕೆಂಡ ಕ್ಲಾಸ್‌ನಲ್ಲಿ 80 ಕುರ್ಚಿಗಳು ಹಾಳಾಗಿವೆ. ಈ ಮಾಡಿದರೆ ನಾಳೆ ಶುಕ್ರವಾರ ಹೊಸ ಸಿನಿಮಾ ಪ್ರದರ್ಶನ ಮಾಡುವುದು ಹೇಗೆ ಎಂದು ಬೇಸರದಿಂದ ಚಿತ್ರ ಮಂದಿರದ ಮಾಲಿಕ ಮತ್ತು ಸಿಬ್ಬಂದಿ ಬೆಸರದಿಂದ ಹೇಳಿಕೊಂಡಿದ್ದಾರೆ.

 

WhatsApp Group Join Now
Telegram Group Join Now       

Leave a Comment