Sonu sood wife car accident in nagpur highway

Spread the love

Sonu sood wife car accident in nagpur highway

 

ಬಾಲಿವುಡ್​ ನಟ ಸೋನು ಸೂದ್ ಪತ್ನಿಯ ಕಾರು ಭೀಕರ ಅಪಘಾತ,

 

ಬಾಲಿವುಡ್​ ನಟ ಸೋನು ಸೂದ್​ ಅವರ ಪತ್ನಿ, ಸಹೋದರಿ, ಹಾಗೂ ಅವರ ಮಗ ಮೂರು ಜನ  ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತವಾಗಿದೆ.

 

WhatsApp Group Join Now
Telegram Group Join Now       

ಬಾಲಿವುಡ್​ ನಟ ಸೋನು ಸೂದ್​ ಅವರ ಪತ್ನಿ ಪ್ರಯಾಣಿಸುತ್ತಿದ್ದ ಕಾರು ನಿನ್ನೆ ಮಾರ್ಚ್‌ 25 ರಂದು ತುಂಬ ಗಂಭೀರವಾಗಿ ಅಪಘಾತವಾಗಿದೆ, ನಟ ಸೋನು ಸೂದ್ ರವರ ಪತ್ನಿ ಸೋನಾಲಿಯವರ ಸ್ಥಿತಿ ಗಂಭೀರವಾಗಿದೆ. ಇದೇ ಕಾರಿನಲ್ಲಿ ಪ್ರಯಾಣ ಮಾಡುತಿದ್ದ ಸೋನು ಸೂದ್ ಅವರ ಸಹೋದರಿ ಮತ್ತು ಅವರ ಮಗನಿಗೂ ಕೂಡ ತುಂಬ ಪೆಟ್ಟು ಗಳು ಆಗಿರುವುದರಿಂದ ಎಲ್ಲರಿಗೂ ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಅಪಘಾತವಾಗಿರುವ ಕಾರಿನ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರಲ್ಲಿ ಕಾರು ತುಂಬ ಡ್ಯಾಮೆಜ್ ಆಗಿರುವ ದೃಶ್ಯ ಕಂಡು ಬಂದಿದೆ. ಮುಂಬೈನ ನಾಗ್ಪುರ ಹೈವೇ ಬಳಿ ನಿನ್ನೆ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ, ಸ್ಥಳೀಯರು ಹೇಳುತ್ತಾರೆ. ಈ ವಿಷಯ ತಿಳಿದ ತಕ್ಷಣ, ಸೋನು ಸೂದ್ ನಾಗ್ಪುರಕ್ಕೆ ಹೋಗಿದ್ದಾರೆ.

ಈ ಅಪಘಾತ ಒಂದು ಟ್ರಕ್ಕಿಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತವಾಗಿರುವ ಕಾರಿನ ಫೋಟೋವನ್ನು ನೋಡಿದರೆ, ಇದು ಅತಿ ವೇಗವಾಗಿ ಚಲಿಸುತ್ತಿರುವಾಗ ಈ ಅಪಘಾತ ಸಂಭವಿಸಿದೆ ಎಂದು ಅನಿಸುತ್ತದೆ. ಘಟನೆ ಬಗ್ಗೆ ಮಾತನಾಡಿರುವ ನಟ, ಪತ್ನಿ ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದಾರೆ. ಆದರೆ, ತುಂಬ ಗಾಯಗಳಾಗಿವೆ. ಈ ಅಪಘಾತ ಆಗಿರುವುದನ್ನು ನೋಡಿದರೆ, ಈ ಮೂರು ಜನ ಉಳಿದಿರುವುದೇ ಒಂದು ದೊಡ್ಡ ಪವಾಡವೆಂದಿ ಹೇಳಿದ್ದಾರೆ. ನಟ ಸೋನು ಸುದ್ ರವರ ಸಹೋದರಿಯ ಮಗನನ್ನು ಹಾಗೂ ಸೋನಾಲಿ ಸೂದ್ ರನ್ನು ನಾಗಪುರ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಒಬ್ಬರಿಗೆ ತೀವ್ರ ಗಾಯಗಳು ಆಗಿವೆ ಎಂದು ತಿಳಿದು ಬಂದಿದೆ. ತಕ್ಷಣ, ಸೋನು ಸೂದ್ ಕೂಡ ಆಸ್ಪತ್ರೆಗೆ ಭಾವಿಸಿದ್ದಾರೆ. 48ರಿಂದ 72 ಗಂಟೆಗಳ ಸಮಯ, ಇವರಿಬ್ಬರನ್ನೂ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುವುದು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ ಎಂದು ವರದಿ ಆಗಿದೆ.

WhatsApp Group Join Now
Telegram Group Join Now       

ಈ ಅವಘಡದಿಂದ ತುಂಬ ಜನ ಶಾಕ್​ ಆಗಿದ್ದಾರೆ. ಸೋನು ಸೂದ್ ರವರು ನಟನೆಗಿಂತಲೂ ಹೆಚ್ಚಾಗಿ ಅವರು ಬಡ ಬಗ್ಗರಿಗೆ ಸಹಾಯ ಮಾಡುವುದರಲ್ಲಿ ಎತ್ತಿದಕೈ. ಅವರು ನಿರ್ಗತಿಕರಿಗೆ ಸಹಾಯ ಮಾಡಲು ಯಾವಾಗಲೂ ಮುಂದೆ ಇದ್ದಾರೆ. ಇದೇ ವಿಷಯಕ್ಕೆ ಜನರು ಆತನನ್ನು ‘ರಿಯಲ್ ಹೀರೋ ಎಂದು ಕರೆಯುತ್ತಾರೆ. ಸೋನು ಸುಂದರವರು ರೀಲ್‌ನಲ್ಲಿ ಮಾತ್ರ ವಿಲನ್, ತಮ್ಮ ನಿಜ ಜೀವನದಲ್ಲಿ ಹೀರೋ ಎಂದು ಹೇಳಿದರೆ ತಪ್ಪಾಗಲಾರದು, ಯಾಕಂದರೆ ಕೊರೋನಾ ಟೈಮಿನಲ್ಲಿ ಅದೆಷ್ಟೋ ಜನರಿಗೆ ತುಂಬಾ ಸಹಾಯ ಮಾಡಿದ್ದಾರೆ. ಇವರು ಸಹಾಯ ಮಾಡುವ ವಿಷಯ ಪ್ರಚಾರಕ್ಕೆ ಬಂದಿದ್ದು ಕೊರೋನಾ ಸಂದರ್ಭದಲ್ಲಿ, ಹಲವರಿಗೆ ಸಹಾಯ ಮಾಡುವ ಮೂಲಕ ನಿಜ ಜೀವನದಲ್ಲಿ ಹೀರೋ ಎಂದು ಅನಿಸಿಕೊಂಡರು. ಆ ಸಮಯದಲ್ಲಿ ಹಲವಾರು ಮಂದಿ ಸೋನು ರವರನ್ನು ನೆನಪಿಸಿಕೊಂಡಿದ್ದು ಇದೆ, ಸದಾ ಪರರಿಗ ಒಳ್ಳೆಯದನ್ನು ಬಯಸುವ ಇವರಿಗೆ ಇವರ ಕುಟುಂಬಕ್ಕೆ ಹೀಗಾಗಬಾರದಿತ್ತು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ನಟ ಸೋನು ಸೂದ್, ಸೋನಾಲಿ ಯವರನ್ನು 1996 ಸೆಪ್ಟೆಂಬರ್ 25 ರಂದು ಮದುವೆಯಾದರು. ನಾಗಪುರದಲ್ಲಿ ಇಂಜಿನಿಯರಿಂಗ್ ಓದುವಾಗ ಇವರಿಬ್ಬರ ನಡುವೆ ಪ್ರೇಮ ಶುರುವಾಯಿತು, ಆಗ ಸೋನಾಲಿಯವರು ಎಂಬಿಎ ಓದುತ್ತಿದ್ದರು. ಇವರಿಬ್ಬರ ಮಧ್ಯೆ ಪ್ರೇಮ ಸುರುವಾದ ನಂತರ ಹಲವು ವರ್ಷಗಳವರೆಗೆ ಡೇಟಿಂಗ್ ಮಾಡುತ್ತಿದ್ದರು. ಈಗ ಇವರಿಬ್ಬರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಸೋನು ಸೂದ್ ತಮ್ಮ ಕುಟುಂಬದ ವಯಕ್ತಿಕ ವಿಚಾರಗಳನ್ನು ಸಾರ್ವಜನಿಕರ ಮಧ್ಯೆ ಹಂಚಿಕೊಂಡಿರುವುದು ತುಂಬಾ ಕಡಿಮೆ.

 

Leave a Comment