Tamil actor and director Manoj Bharathiraj died of a heart attack on 2025 March 26.
ನಟ-ನಿರ್ದೇಶಕ ಭಾರತಿರಾಜ ಅವರ ಪುತ್ರ ಮನೋಜ್ ಭಾರತಿರಾಜ ಅವರು ನಿಧನ.
ನಟ-ನಿರ್ದೇಶಕ ಭಾರತಿರಾಜ ಅವರ ಪುತ್ರ ಮನೋಜ್ ಭಾರತಿರಾಜ ಅವರು ಮಂಗಳವಾರ (ಮಾರ್ಚ್ 25, 2025) ಹೃದಯಾಘಾತದಿಂದ ನಿಧನರಾದರು. ಅವರು 48 ವರ್ಷ ವಯಸ್ಸಿನಲ್ಲಿ ಕೊನೆ ಉಸಿರು ಹೇಳದಿದ್ದಾರೆ. ಮನೋಜ್ ಅವರ ಅಗಲುವಿಕೆ ತಮಿಳು ಚಿತ್ರರಂಗಕ್ಕೆ ಭಾರೀ ನಷ್ಟವಾಗಿದೆ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಆಘಾತ ತಂದಿದೆ.
ಮನೋಜ್ ಭಾರತಿರಾಜರ ಚಿತ್ರರಂಗದ ಜೀವನ.
ಮನೋಜ್ ಭಾರತಿರಾಜ ಅವರು 1999ರಲ್ಲಿ ತಮ್ಮ ತಂದೆ ಭಾರತಿರಾಜ ಅವರು ನಿರ್ದೇಶಿಸಿದ ತಾಜ್ ಮಹಲ್ ಚಿತ್ರದಲ್ಲಿ ನಟನಾಗಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ಮೂಲಕ ಅವರು ಜನರ ಮನಸ್ಸು ಸೆಳೆದರು, ಆ ಬಳಿಕ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದರು. ಅವರ ಪ್ರಮುಖ ಚಲನಚಿತ್ರಗಳು, ಸಮುದಿರಂ (2001), ಕಡಲ್ ಪೂಕಲ್ (2001), ಅಲ್ಲೀ ಅರ್ಜುನ (2002), ವರಷ ಮೆಲ್ಲಾಂ ವಸಂತಂ (2002), ಈರ ನಿಲಂ (2003) ಇನ್ನೂ ಮುಂತಾದ ಯಶಸ್ವಿ ಚಿತ್ರಗಳನ್ನು ತಮಿಳು ಚಿತ್ರ ರಂಗಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ.
ಇವರು ಬರೀ ನಟನಾಗಿ ಮಾತ್ರವಲ್ಲ, ಮನೋಜ್ ಭಾರತಿರಾಜ ಅವರು ಪರದೆ ಹಿಂದೆ ಕೆಲಸ ಮಾಡಲು ಆಸಕ್ತಿ ಹೊಂದಿದ್ದರು. 2023ರಲ್ಲಿ ಅವರು ‘ಮಾರ್ಗಳಿ ತಿಂಗಲ್’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಮನೋಜ್ ಭಾರತಿರಾಜ ಅವರ ತಂದೆ ಭಾರತಿರಾಜ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ದೇಶನದಲ್ಲಿ ಕೂಡ ಅವರ ಪ್ರತಿಭೆ ಜನಪ್ರಿಯತೆ ಪಡೆದುಕೊಂಡರು.
ಹಲವಾರು ಗಣ್ಯರಿಂದ ಸಂತಾಪ ಸೂಚನೆ
ಮನೋಜ್ ಅವರು ನಿಧನರಾದ ಸುದ್ದಿ ತಿಳಿದು ತಮಿಳು ಚಿತ್ರರಂಗದ ಹಲವು ಗಣ್ಯರು ಸಂತಾಪ ಸೂಚಿಸಿದರು. ಸೂಪರ್ ಸ್ಟಾರ್ ವಿಜಯ್, ಕಮಲ್ ಹಾಸನ್, ನಟ ಸೂರ್ಯ ಸೇರಿದಂತೆ ಇನ್ನೂ ಹಲವರು ಮನೋಜ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದರು.
ನಟ ಸೂರ್ಯ ಅವರು ಭಾರತಿರಾಜ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಅವರು ಮನೋಜ್ ಅವರ ದೇಹಕ್ಕೆ ಹಾರ ಹಾಕಿದ ನಂತರ, ಭಾರತಿರಾಜರ ಕೈ ಹಿಡಿದು, ಅವರ ನೋವನ್ನು ವ್ಯಕ್ತಪಡಿಸಿದರು. ಈ ವೇಳೆ ಭಾರತಿರಾಜ ಅವರು ತಮ್ಮ ಮಗನ ಅಗಲುವಿಕೆಯಿಂದ ತುಂಬಾ ದುಃಖಿತರಾಗಿದ್ದರು. ಸೂರ್ಯ ಅವರು ಕೆಲವು ನಿಮಿಷಗಳ ಕಾಲ ಅಲ್ಲಿಯೇ ಉಳಿದು ಭಾರತಿರಾಜ ಅವರಿಗೆ ಧೈರ್ಯ ತುಂಬಿದರರು.
ಭಾರತಿರಾಜರ ಕುಟುಂಬಕ್ಕೆ ಅಷ್ಟೇ ಅಲ್ಲದೆ, ತಮಿಳು ಚಿತ್ರರಂಗಕ್ಕೂ ಕೂಡ ದೊಡ್ಡ ನಷ್ಟವಾಗಿದೆ.
ಮನೋಜ್ ಅವರ ಕುಟುಂಬಕ್ಕೆ ಈ ಆಘಾತವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟವಾಗಿದೆ. ಅವರು ತಮಿಳು ಚಲನಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರೂ, ತಮ್ಮ ತಂದೆ ಭಾರತಿರಾಜರವರಿಗಂತೂ ಅತ್ಯಂತ ಪ್ರಿಯ ಪುತ್ರರಾಗಿದ್ದರು. ಕುಟುಂಬದವರು, ಅಭಿಮಾನಿಗಳು ಮತ್ತು ಸ್ನೇಹಿತರು ಅವರ ಅಗಲುವಿಕೆಯಿಂದ ಮನನೊಂದು ಅಂತಿಮ ನಮನ ಸಲ್ಲಿಸುವದಲ್ಲಿ ಯಶಸ್ವಿಯಾದರು.
ಮನೋಜ್ ಭಾರತಿರಾಜ ಅವರ ಅಗಲುವಿಕೆಯಿಂದ ತಮಿಳು ಚಿತ್ರರಂಗ ಮತ್ತೊಂದು ಪ್ರತಿಭಾವಂತ ವ್ಯಕ್ತಿಯನ್ನು ಕಳೆದುಕೊಂಡಿತು. ಮನೋಜ್ ಭಾರತಿರಾಜ ರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ಭಗವಂತನನ್ನು ಪ್ರಾರ್ಥಿಸೊಣ.