Terrorist shooting leaves innocent victims.

Spread the love

Terrorist shooting leaves innocent victims.

ಭಯೋತ್ಪಾದಕರ ಗುಂಡಿನ ದಾಳಿ ಅಮಾಯಕರ ಬಲಿ. ನೂತನ ಸಂಖ್ಯೆ 26ಕ್ಕೆ ಏರುತ್ತಿದೆ.

ಜಮ್ಮು-ಕಾಶ್ಮೀರದ ಅನಂತನಾಗರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರ ಪಹಲ್ಗಾಮ್ ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ಗುಂಡಿನ ದಾಳಿಯಲ್ಲಿ 26 ಜನ ಮೃತಪಟ್ಟಿದ್ದಾರೆ, ಇದು 2019ರ ಪುಲ್ವಾಂ ದಾಳಿಯ ನಂತರ ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಈ ದಾಳಿಯಲ್ಲಿ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮಂಗಳವಾರ ಮಧ್ಯಾನ ಪಾಲ್ಗಾಮ್ ನ ಪ್ರವಾಸಿ ಬಸ್ ನಿಲ್ದಾಣದ ಹತ್ತಿರ ಶಸ್ತ್ರ ಸಚ್ಚಿತರು ಪ್ರವಾಸಿಗರನ್ನು ಗುರಿಯಾಗಿಸಿ ಕೊಂಡಿದ್ದಾರೆ. ದಾಳಿಯ ಸಮಯದಲ್ಲಿ ಅನೇಕ ಪ್ರವಾಸಿಗರು ಮತ್ತು ಸ್ಥಳೀಯರು ಸೇರಿದಂತೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಸುರಕ್ಷತಾ ಪಡೆಗಳು ತಕ್ಷಣ ಗಡಮ ಸ್ಥಳವನ್ನು ಉಗ್ರದ ಹುಡುಕಾಟ ಮಾಡುತ್ತಿದ್ದಾರೆ.

ಈ ದಾಳಿಯಿಂದ ಮೃತಪಟ್ಟವರಲ್ಲಿ ಶಿವಮೊಗ್ಗದ ಉದ್ಯಮಿ ಸೇರಿದ್ದಾರೆ.

ಈ ದಾಳಿಯಿಂದ ಮೃತಪಟ್ಟವರಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಕೂಡ ಸೇರಿದ್ದಾರೆ. ಅವರು ತಮ್ಮ ಪತ್ನಿ ಪಲ್ಲವಿ ಮತ್ತು ಎಂಟು ವರ್ಷದ ಮಗನೊಂದಿಗೆ ಮಹಾಲ್ ಗಂಗೆ ಪ್ರವಾಸಕ್ಕೆ ಬಂದಿದ್ದರು. ದಾಳಿಯಲ್ಲಿ ಮಂಜುನಾಥ್ ಮೃತಪಟ್ಟರು; ಅವರ ಕುಟುಂಬದವರಿಗೆ ಯಾವುದೇ ಹಾನಿಯಾಗಿಲ್ಲ, ತಾಯಿ, ಮಗ, ಇಬ್ಬರು ಸುರಕ್ಷಿತವಾಗಿದ್ದಾರೆ.

ಈ ದುಷ್ಟರ ದಾಳಿಯಿಂದ ಶಿವಮೊಗ್ಗದ ಉದ್ಯಮಿ ಮಂಜುನಾಥ್ ಅವರು, ಅಷ್ಟಲ್ಲದೆ ವಿದೇಶಿ ಪ್ರವಾಸಿಗರು ಕೂಡ ಈ ದುಷ್ಟರ ದಾಳಿಯಿಂದ ಪ್ರಾಣ ಸಾವನ್ನಪ್ಪಿದ್ದಾರೆ. ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದಂತೆ, ಮೃತ 26 ಜನರಲ್ಲಿ ಇಬ್ಬರು ವಿದೇಶಿ ಪ್ರವಾಸಿಗರು ಮತ್ತು ಇಬ್ಬರು ಸ್ಥಳೀಯರು ಸೇರಿದ್ದಾರೆ. ಉಳಿದವರಲ್ಲಿ ಹೆಚ್ಚಿನವರು ಇತರ ರಾಜ್ಯಗಳಿಂದ ಬಂದ ಪ್ರವಾಸಿಗಳು ಕೂಡ ಇದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

WhatsApp Group Join Now
Telegram Group Join Now       

ಈ ದಾಳಿಯ ಹಿಂದೆ ಯಾವ ಭಯೋತ್ಪಾದಕ ಸಂಘಟನೆ ಕೈವಾಡವಿದೆ ಎಂಬುದು ಇನ್ನು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಯಾವುದೇ ಸಂಘಟನೆ ಇದರ ಹೊಣೆ ಹೊತ್ತುಕೊಂಡಿಲ್ಲ, ಆದರೆ ಭಾರತೀಯ ಸುರಕ್ಷಿತ ಪಡೆಗಳು ಈ ದಾಳಿಯ ಹಿಂದೆ ಲಸ್ಕರ್ ಎ ತೈಬಾ ಅಥವಾ ಜೈಶ್-ಎ-ಮೊಹಮ್ಮದ್ ಕೈವಾಡ ಈ ಉಗ್ರರ ಕೈವಾಡ ಇರಬಹುದು ಎಂದು ಊಹಿಸಲಾಗಿದೆ.

ಇದು 2019ರ ನಂತರ ದೊಡ್ಡ ದಾಳಿ ಇದಾಗಿದೆ.

2019ರ ಫೆಬ್ರುವರಿಯಲ್ಲಿ ಪುಲ್ವಾಮದಲ್ಲಿ ನಡೆದ CRPF ಮೇಲೆ ದಾಳಿಯಲ್ಲಿ 40 ಕ್ಕೂ ಹೆಚ್ಚು ಭಾರತೀಯ ಸೈನಿಕರು ಪ್ರಾಣವನ್ನು ಬಿಟ್ಟರು; ಅದರ ನಂತರ ಕಾಶ್ಮೀರದಲ್ಲಿ ಇಟ್ಟು ದೊಡ್ಡ ಪ್ರಮಾಣದ ದಾಳಿ ನಡೆದಿರಲಿಲ್ಲ. ಈ ದಾಳಿಯಿಂದ ಅಮಾಯಕರು ತಮ್ಮ ಪ್ರಾಣವನ್ನು ಬಿಟ್ಟಿದ್ದಾರೆ. ಅಮಾನುಶವಾಗಿ ಮೃಗರಂತೆ ಅಮಾಯಕರ ಪ್ರಾಣವನ್ನು ಈ ದುಷ್ಕರ್ಮಿಗಳು ತುಂಬಾ ಅಮಾನುಷರಾದ ಮಾನವೀಯತೆನೆ ಇಲ್ಲದಿರುವ ಈ ಮೃಗ ರಾಕ್ಷಸರನ್ನು ತಕ್ಷಣವೇ ಹುಡುಕಿ ಗುಂಡಿಟ್ಟು ಕೊಂದುಬಿಡಿ ಎಂದು ಗೃಹ ಮಂತ್ರಿ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

WhatsApp Group Join Now
Telegram Group Join Now       

ರಾಜ್ಯ ಮತ್ತು ಕೇಂದ್ರ ಸರಕಾರದ ಪ್ರತಿಕ್ರಿಯೆ

ಕೇಂದ್ರ ಮತ್ತು ರಾಜ್ಯ ಸರಕಾರದ ನಡುವೆ ಈ ಘಟನೆಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಮಂತ್ರಿ ಅಮಿತ್ ಶಾ ಈ ದಾಳಿಯನ್ನು ನೃಶಂಸ ಮತ್ತು ದುಷ್ಟ ಎಂದು ಖಂಡಿಸಿದ್ದಾರೆ. ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ಸುರಕ್ಷತಾ ವ್ಯವಸ್ಥೆಯನ್ನು ಹೆಚ್ಚು ಬಿಗಿಗೊಳಿಸಲು ನಿರ್ಧಾರ ಮಾಡಿದೆ.

ತುರ್ತು ಪರಿಸ್ಥಿತಿ ವ್ಯವಸ್ಥೆ.

ಘಟನೆಯ ನಂತರ ಪಾಲ್ಗಾಮ್‌ನಲ್ಲಿ ಇನ್ನೂ ಹೆಚ್ಚಿಗೆ ಸುರಕ್ಷೇತ್ರ ರಚನೆ ಪ್ರಾರಂಭಿಸಲಾಗಿದೆ. ಪ್ರವಾಸಿಗರಿಗೆ ಸಲಹೆ ಕೊಟ್ಟು ಅನವಶ್ಯಕವಾಗಿ ಪ್ರಯಾಣ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಈ ದಾಳಿಯು ಕಾಶ್ಮೀರದ ಭದ್ರತಾ ಪರಿಸ್ಥಿತಿಯ ಮೇಲೆ ಹೊಸ ಪ್ರಶ್ನೆಗಳು ಕೇಳಿ ಬರುತ್ತವೆ. ಭಯೋತ್ಪಾದನೆ ವಿರುದ್ಧದ ಕಾರ್ಯಚರಣೆಗಳು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂಬುದು ವಿಶೇಷಕರ ಅಭಿಪ್ರಾಯ ಎಂದು ಹೇಳಲಾಗಿದೆ.

ಸ್ನೇಹಿತರೆ, ಪ್ರತಿನಿತ್ಯ ಇದೇ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Leave a Comment