ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ರೇಷನ್ ಹಣದ ಬದಲು ಬೇಳೆ, ಸಕ್ಕರೆ, ಎಣ್ಣೆ ಕಿಟ್ ವಿತರಿಸಲು ಸರ್ಕಾರದ ನಿರ್ಧಾರ.
ಬಿಪಿಎಲ್ ಹಾಗೂ ರೇಷನ್ ಕಾರ್ಡ್ ಹೊಂದಿದವರಿಗೆ ಹೊಸ ಆಹಾರ ಕಿಟ್ ಯೋಜನೆ, ಇದರ ವಿವರಗಳು ಇಲ್ಲಿವೆ.
ಕರ್ನಾಟಕ ಸರ್ಕಾರವು ಬಿಪಿಎಲ್ ಹಾಗೂ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಂದು ಕುಟುಂಬಕ್ಕೆ ಆಹಾರ ಧಾನ್ಯಗಳನ್ನು ಕಿಟ್ ರೂಪದಲ್ಲಿ ಕೊಡಲು ಹೊಸ ಯೋಜನೆಯನ್ನು ಪ್ರಾರಂಭ ಮಾಡಿದೆ. ಇದರ ಅಡಿಯಲ್ಲಿ ತೊಗರಿ ಬೇಳೆ, ಕೊಬ್ಬರಿ ಎಣ್ಣೆ, ಸಕ್ಕರೆ, ಹಾಗೂ ಜೋಳ ಸೇರಿದಂತೆ ಅಗತ್ಯವಾದ ಪೋಷಕ ಅಂಶಗಳನ್ನು ಒದಗಿಸಲು ಚಿಂತನೆ ಮಾಡಲಾಗುತ್ತಿದೆ.
ಸ್ನೇಹಿತರೆ, ಇದೇ ರೀತಿ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಾಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಈ ಯೋಜನೆಯ ಮುಖ್ಯ ಅಂಶಗಳೇನು?
ಹಣದ ಬದಲು ಆಹಾರ ಕಿಟ್ಟು.
ಇದುವರೆಗೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಪಡಿತರ ದಾನ್ಯದಲ್ಲಿ 5 ಕೆ.ಜಿ ಅಕ್ಕಿ ಮತ್ತು ಐದು ಕೆಜಿಗೆ ಸಮವಾದ 150 ನಗದು, ಲಾಭಾರ್ಥಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ ಈಗ ನಗದು ಬದಲಿಗೆ ಪೋಷಕಾಂಶಯುಕ್ತ ಆಹಾರ ಪ್ಯಾಕ್ ನೀಡುವ ನಿರ್ಧಾರ ಮಾಡಿದೆ.
ಇದನ್ನು ಓದಿ: ಮನೆ ಕಟ್ಟಲು ಸಾಲ ಬೇಕಾ? ಈ ಬ್ಯಾಂಕ್ಗಳಲ್ಲಿ ಕಮ್ಮಿ ಬಡ್ಡಿಗೆ ಸಿಗುತ್ತೆ ಹೋಮ್ ಲೋನ್.
ಈ ಯೋಜನೆಯ ಮುಖ್ಯ ಉದ್ದೇಶವೇನು?
ಬಡವರು ಹಾಗೂ ಅನುಪಯುಕ್ತ ವರ್ಗದವರು ಸಮತೂಕವಾದ ಆಹಾರ ಪಡೆಯುವುದನ್ನು ಖಚಿತಪಡಿಸಬಹುದು.
ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಿ ರೈತರಿಗೆ ಪ್ರೋತ್ಸಾಹ ನೀಡುವುದು.
ರಾಜ್ಯದಲ್ಲೆಡೆ ಚರ್ಚೆ.
ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಅವರು ಈ ಪ್ರಸ್ತಾಪವನ್ನು ಕುಕನೂರು ಮತ್ತು ಯಲಬುರ್ಗಾ ತಾಲೂಕಿನ ಗ್ಯಾರಂಟಿ ಯೋಜನೆ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಇದನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಚರ್ಚಿಸಿ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಯೋಜನೆಯಿಂದ ಆಗುವ ಪ್ರಯೋಜನಗಳೇನು?
ಪೋಷಕಾಂಶದ ಭದ್ರತೆ ಅಂದರೆ ಬೇಳೆ ಎಣ್ಣೆ ಮತ್ತು ಸಕ್ಕರೆ ಸೇವನೆಯಿಂದ ಕುಟುಂಬಗಳ ಆರೋಗ್ಯ ಸುಧಾರಣೆ ಆಗುತ್ತದೆ.
ನಗದು ವಹಿವಾಟು ಕಡಿಮೆ ಆಗುವುದು, ಅದು ಹೇಗೆಂದರೆ, ಆಹಾರ ಕಿಟ್ ನೀಡುವುದರಿಂದ ಲಾಭ ಪಡೆಯುವ ಅಭ್ಯರ್ಥಿಗಳು ಹಣವನ್ನು ಇತರ ಅಗತ್ಯಗಳಿಗೆ ವಿನಿಯೋಗಿಸುವ ಅಗತ್ಯವಿಲ್ಲ.
ಸ್ಥಳಿ ಕೃಷಿಯ ಬೆಂಬಲ, ರಾಜ್ಯದ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಖಾತರಿ ಒದಗಿಸುತ್ತದೆ. ಈ ಯೋಜನೆ ಜಾರಿಗೆ ಬಂದರೆ ಕರ್ನಾಟಕದ ಬಿಪಿಎಲ್ ಹಾಗೂ ರೇಷನ್ ಕಾರ್ಡ್ ಹೊಂದಿರುವ ಕೋಟಿಗಟ್ಟಲೆ ಕುಟುಂಬಗಳು ಲಾಭ ಪಡೆಯುತ್ತವೆ. ಸರ್ಕಾರವು ಶೀಘ್ರದಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳುವ ನಿರೀಕ್ಷೆಯಲ್ಲಿದೆ ಎಂದು ಹೇಳಲಾಗುತ್ತಿದೆ.
ಮುಖ್ಯ ಸೂಚನೆ: ಈ ಬರವಣಿಗೆಯು ಸಾರ್ವಜನಿಕರ ಮಾಹಿತಿ ಆಧಾರಿತವಾಗಿದೆ ಮತ್ತು ಕರ್ನಾಟಕ ಸರ್ಕಾರದ ನೀತಿ ನಿರ್ಧಾರಗಳಿಗೆ ಅನುಗುಣವಾಗಿ ನವೀಕರಿಸಲ್ಪಡಬಹುದು.
ಸ್ನೇಹಿತರೆ, ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಟ್ರೆಂಡಿಂಗ್ ವಾಟ್ಸಪ್ ಚಾನಲ್ ಅನ್ನು ಸೇರಿಕೊಳ್ಳಿ. ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.