Toxic movie release date finele

Spread the love
  1. Toxic movie release date finele

ರಾಕಿಂಗ್‌ ಸ್ಟಾರ್ ಯಶ್ ಅಭಿಮಾನಿಗೆ ಡಬಲ್ ಧಮಾಕ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್‘ ಸಿನಿಮಾದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಮೊದಲು ಈ ವರ್ಷ ಏಪ್ರಿಲ್ 10ರಂದು ಬಿಡುಗಡೆಯಾಗಬೇಕಾಗಿದ್ದ ಈ ಚಿತ್ರ, ಹೆಚ್ಚಿನ ನಿರ್ಮಾಣ ಸಮಯ ಬೇಕಾದ ಕಾರಣ, ಇದೀಗ ಮಾರ್ಚ್ 19, 2026ರಂದು ಬಿಡುಗಡೆಯಾಗಲಿದೆ. ಈ ದಿನಾಂಕವು ಮುಂದಿನ ಉಗಾದಿ ಹಬ್ಬಕ್ಕೆ ಹೊಂದಿದ್ದು, ಯಶ್ ಅಭಿಮಾನಿಗಳಿಗೆ ಡಬಲ್ ಧಮಾಕ ನೀಡಲಿದೆ.

ಮಾರ್ಚ್ 22ರಂದು ಐಪಿಎಲ್ 2025ರ ಆರಂಭದ ದಿನವೇ ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ರವರು ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಸಿನಿಮಾ ಬಿಡುಗಡೆ ಪೋಸ್ಟರ್ ಹಂಚಿಕೊಂಡಿದ್ದಾರೆ. ಸದ್ಯ, ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮಾಡಲಾಗುತ್ತಿದೆ. ‘ಟಾಕ್ಸಿಕ್’ ಅನ್ನು ಹಾಲಿವುಡ್ ಮಟ್ಟದಲ್ಲಿ ನಿರ್ಮಿಸಲಾಗುತ್ತಿದ್ದು, ಗ್ಲೋಬಲ್ ಸಿನಿಮಾವಾಗಿ ರೂಪಿಸಲು ಯಶ್ ದೊಡ್ಡ ಮಟ್ಟದಲ್ಲಿ ಯೋಜನೆ ಹಾಕಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಶೂಟಿಂಗ್‌ಗೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಸಿನಿಮಾ ತಂಡ ಹೇಳಿದೆ.

Leave a Comment