Techie who killed his wife and stuffed her in a suitcase returns to Bengaluru; Rakesh’s father reveals every detail
ಪತ್ನಿ ಕೊಂದು ಸೂಟ್‌ಕೇಸ್‌ಗೆ ತುಂಬಿದ್ದ ಟೆಕ್ಕಿ ಬೆಂಗಳೂರಿಗೆ ವಾಪಸ್; ರಾಕೇಶ್ ತಂದೆ ಬಿಚ್ಚಿಟ್ರು ಇಂಚಿಂಚೂ ಮಾಹಿತಿ
ಬೆಂಗಳೂರಿನ ದೊಡ್ಡ ಕಮ್ಮನಹಳ್ಳಿಯಲ್ಲಿ ಪತ್ನಿ ಸಾಯಿಸಿ ಸೂಟ್‌ಕೇಸ್‌ನಲ್ಲಿ ತುಂಬಿದ್ದ.
ಪತ್ನಿಯ ಕೊಲೆಗೆ ಕಾರಣ ಏನಿರಬಹುದು ಎಂಬ ನಿಗೂಢ ಇಂದು ಬಯಲಾಗುವ ಸಾಧ್ಯತೆ ಇದೆ.
ರಾಕೇಶ್ ನನ್ನ ಮಗ, ಮೃತಗೌರಿ ನನ್ನ ಸಹೋದರಿಯ ತಂಗಿ ಎಂದ ರಾಕೇಶ್ ತಂದೆ.
ಬೆಂಗಳೂರಿನ ದೊಡ್ಡಕಮ್ಮನಹಳ್ಳಿಯಲ್ಲಿ ಮನೆ ಒಂದರಲ್ಲಿ ಪತ್ನಿಯನ್ನು ಕೊಂದು ಸೂಟ್ಕೇಶಿಯಲ್ಲಿ ತುಂಬಿ ಪರಾರಿಯಾಗಿದ್ದ ಗಂಡ ರಾಕೇಶ್ ನನ್ನು ಪೊಲೀಸರು ನಿನ್ನೆ ರಾತ್ರಿ ಬೆಂಗಳೂರಿಗೆ ವಾಪಸ್ ಬರುವಂತೆ ಮಾಡಿದ್ದಾರೆ.
ಆರೋಪಿಯನ್ನು ನಿನ್ನೆ ರಾತ್ರಿ ಕೋರಮಂಗಲದ ಎನ್‌ಜಿವಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.
ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿ ಆರೋಪಿಯನ್ನು 14 ದಿನಗಳ ಕಾಲ ಕಸ್ಟಡಿಗೆ ನೀಡಲು ಆದೇಶಿಸಿದರು. ರಾಕೇಶ್ ನನ್ನು ಪರಪ್ಪನ ಅಗ್ರಹಾರ ಕರೋಗ್ರೋಹಕ್ಕೆ ಸ್ಥಳಾಂತರಿಸಿದರು. ಪತ್ನಿಯನ್ನು ಕೊಲೆ ಮಾಡಲು ಕಾರಣ ಏನು ಎಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ.
ರಾಕೇಶ್ ತಂದೆ ಈ ವಿಷಯದ ಬಗ್ಗೆ
ಹೇಳಿದ್ದಾದರೂ ಏನು
ಮುಂದೆ ಓದಿ ತಿಳಿದುಕೊಳ್ಳಿ.
ರಾಕೇಶ್ ತನ್ನ ಪತ್ನಿ ಗೌರಿಯನ್ನು ಭಯಂಕರವಾಗಿ ಕೊಲೆ ಮಾಡಿ ಸೂಟ್ಕೇಸ್‌ನಲ್ಲಿ ನಲ್ಲಿ ತುಂಬಿ ಪುಣೆಗೆ ಹೋಗಿದ್ದ, ಈ ಕೃತ್ಯ ಮಾಡಲು ಕಾರಣ ಏನಿರಬಹುದು ಎಂಬುದು ನಿಗೂಢವಾಗಿ ಉಳಿದುಕೊಂಡಿದೆ. ಈ ಮಧ್ಯೆ, ರಾಕೇಶ್ ತಂದೆ ರಾಜೇಂದ್ರ ಕೆಡೇಕರ್ ಪ್ರಥಮ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಗೌರಿ ನನ್ನ ತಂಗಿಯ ಮಗಳು. ಗೌರಿ ಮತ್ತು ರಾಕೇಶ್ ಮದುವೆಗೆ ನಮ್ಮ ಕುಟುಂಬದಲ್ಲಿ ಯಾವಾಗಲೂ ಒಪ್ಪಿಗೆ ಇರಲಿಲ್ಲ. ಮದುವೆಯ ವಿಷಯ ಕುರಿತು ಕುಟುಂಬದ ಜೊತೆ ಗೌರಿ ಜಗಳ ಮಾಡಿಕೊಂಡಿದ್ದಳು. 2 ವರ್ಷದ ಹಿಂದೆ ಕುಟುಂಬದ ಎದುರ ಹಾಕಿಕೊಂಡು, ರಾಕೇಶ್ ಮತ್ತು ಗೌರಿ ಮದುವೆ ಆಗಿದ್ರು.
ಗೌರಿ ಯಾವಾಗಲೂ ನನ್ನ ಮಗ ಮತ್ತು ಕುಟುಂಬಸ್ಥರ ಜೊತೆ ತುಂಬಾ ಸಾರಿ, ಬಾರಿ ಜಗಳ ಆಡುತ್ತಿದ್ದಳು. ಗಂಡ-ಹೆಂಡತಿ ಮತ್ತು ಕುಟುಂಬಸ್ಥರ ಈ ಜಗಳ ಪೊಲೀಸ್ ಠಾಣೆವರೆಗೂ ಹೋಗಿತ್ತು.
ರಾಕೇಶ್, ಕಳೆದ ಮಾರ್ಚ್ 27 ಗುರುವಾರ ಮಧ್ಯಾಹ್ನ ನನಗೆ ಕಾಲ್ ಮಾಡಿ ತನ್ನ ಹೆಂಡತಿ ಗೌರಿನನ್ನು ಕೊಲೆ ಮಾಡಿದ್ದೀನಿ ಎಂದು ಹೇಳಿದ್ದ.
ಪತ್ನಿಯನ್ನು ಕೊಲೆ ಮಾಡಿ ಸೂಟ್‌ಕೇಸ್‌ನಲ್ಲಿ ತುಂಬಿ ಬೆಂಗಳೂರಿನಿಂದ ಎಸ್ಕೇಪ್ ಆದ ಪತಿ. ಆಮೇಲೆ ಏನೇನಾಯ್ತು?
ಫೋನ್‌ನಲ್ಲಿ ಆಕೆ ನನಗೆ ತುಂಬಾ ಕಿರುಕುಳ ಕೊಡುತ್ತಿದ್ದಳು ಡಂದಿದ್ದ. ಅದಕ್ಕೆ ನಾನು ಈ ತರ ಮಾಡಿದ್ದೇನೆ ಎಂದಿದ್ದ. ಗೌರಿ ತನ್ನ ತಾಯಿಗೂ ಎರಡು ಮೂರು ದಿನದ ಹಿಂದೆ ಫೋನ್ ಮಾಡಿ, ಫೋನಿನಲ್ಲಿ ಕಿರುಕುಳ ಕೊಡುತ್ತಿದ್ದಳು. ಅವರ ಅಮ್ಮ ಕೂಡ ಮಗಳಿಗೆ ಬುದ್ಧಿ ಹೇಳಿದ್ದಳು. ಗೌರಿಯ ತಾಯಿ ನನ್ನ ಸ್ವಂತ ತಂಗಿ. ಗೌರಿ, ನನ್ನ ಸ್ವಂತ ಸೋದರ ಸೊಸೆ. ನನ್ನ ತಾಯಿ ವಯಸ್ಸಾಗಿದೆ, ಅವರಿಗೂ ಕೂಡ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ಅಲ್ಲೂ ಪೊಲೀಸ್ ಸ್ಟೇಷನ್ನಲ್ಲಿ ತುಂಬಾ ಸಾರಿ ಕಂಪ್ಲೆಂಟ್ಗಳು ಆಗಿವೆ .
ಇದೇ ಸಮಯದಲ್ಲಿ ನನ್ನ ಮಗ ರಮೇಶ್ ತಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀನಿ ಎಂದು ಹೇಳಿದ್ದ. ಅದಕ್ಕೆ ನಾನು ನಿನ್ನ ನಿರ್ಧಾರ ತುಂಬಾ ಸರಿ ಇಲ್ಲ ಅಂತ ನಾನು ಬುದ್ಧಿ ಹೇಳಿದ್ದೆ. ಮುಂಬೈನ ಮೆಗವಾಡಿ ಪೊಲೀಸರಿಗೆ ಈ ಕೊಲೆ ವಿಷಯದ ಬಗ್ಗೆ ಕೂಡಲೇ ನಾನೆ ಹೇಳಿದೆ. ನನ್ನ ತಂಗಿ ಅಂದರೆ ಗೌರಿ ತಾಯಿ ಮತ್ತು ಸ್ಥಳೀಯ ಪೊಲೀಸರಿಗೆ ನಾನು ಈ ಕೊಲೆ ವಿಷಯ ತಿಳಿಸಿದ್ದೆ. ಆಮೇಲೆ ಶಿರವಾರ ಪೊಲೀಸರು ಆತನನ್ನು ಪತ್ತೆ ಹಚ್ಚಿದರು.
ರಾಕೇಶ್ ಬೆಂಗಳೂರಿನಿಂದ ಬಂದು ಕರ್ನಾಟಕ-ಮಹಾರಾಷ್ಟ್ರದ ಗಡಿಯಲ್ಲಿ ಜಿರಳೆ ಔಷಧಿ ಕುಡಿದಿದ್ದಾನೆ. ಬೈಕ್ ಸವಾರನೋರ್ವ ಅಸ್ವಸ್ಥನಾಗಿದ್ದವನ ಕಂಡು ಸ್ಥಳೀಯ ಆಸ್ಪತ್ರೆಗೆ ಸೆರಿಸಿದ್ದಾನೆ ಎಂದು ಆರೋಪಿ ರಾಕೇಶ್ ತಂದೆ ರಾಜೇಂದ್ರ ಹೇಳಿಕೆ ನೀಡಿದ್ದಾರೆ.