When will the money of Grihalakshmi arrive? Lakshmi Hebbalkar, who gave good news to women on Ugadi,

When will the money of Grihalakshmi arrive? Lakshmi Hebbalkar, who gave good news to women on Ugadi,

Gruhalakshmi Money: ಗೃಹಲಕ್ಷ್ಮಿ ಹಣ ಯಾವಾಗ ಬರುತ್ತದೆ? ಯುಗಾದಿ ವೇಳೆ ಮಹಿಳೆಯರಿಗೆ good news ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಗೃಹಲಕ್ಷ್ಮಿ ಹಣದ ಬಗ್ಗೆ ಗೃಹಿಣಿಯರಿಗೆ ಖುಷಿ ನೀಡಿದ್ದರು. ಮಾರ್ಚ್ 31ರ ನಂತರ ಗೃಹಲಕ್ಷ್ಮಿ ಹಣ ಅವರವರ ಖಾತೆಗೆ ಬರುತ್ತೆ ಅಂತ ಹೇಳಿದ್ದರು. ಇದೀಗ ಗೃಹಲಕ್ಷ್ಮಿ ಹಣದ ರಿಲೀಸ್ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಪ್‌ಡೇಟ್ಸ್ ನೀಡಿದ್ದಾರೆ.

ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಹೇಳಿದ್ದೇನು?

ಬೆಳಗಾವಿ: ಗೃಹಲಕ್ಷ್ಮಿ ಹಣ ಯಾವಾಗ ಬರುತ್ತೆ? ಶಿವರಾತ್ರಿ ಮುಗೀತು, ಯುಗಾದಿನೂ ಮುಗೀತು ಆದ್ರೂ ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತ ರಾಜ್ಯದ ಗೃಹಿಣಿಯರು ಕಾತುರದಿಂದ ಕಾಯುತ್ತಿದ್ದಾರೆ. ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಗೃಹಲಕ್ಷ್ಮಿ ಹಣದ ಬಗ್ಗೆ ಗೃಹಿಣಿಯರಿಗೆ ಧೈರ್ಯ ನೀಡಿದ್ದರು. ಮಾರ್ಚ್ 31ರ ನಂತರ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಅಕೌಂಟ್ ಗೆ ಬರುತ್ತೆ ಅಂತ ಹೇಳಿದ್ದರು. ಇದೀಗ ಗೃಹಲಕ್ಷ್ಮಿ ಹಣದ ರಿಲೀಸ್ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಅಪ್‌ಡೇಟ್ಸ್ ನೀಡಿದ್ದಾರೆ.

ಈದ್ ಹಬ್ಬಕ್ಕೆ ಗೃಹಲಕ್ಷ್ಮಿ ಹಣ ರಿಲೀಸ್

ಈಗಾಗಲೇ ಒಂದು ತಿಂಗಳ ಗೃಹಲಕ್ಷ್ಮಿ ಹಣವನ್ನು ಟ್ರಿಜರಿಗೆ ಕಳುಹಿಸಲಾಗಿದೆ ಅಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟವಾಗಿ ಹೇಳಿದ್ದಾರೆ. ಈ ವಿಷಯದ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಅವರು, ಯುಗಾದಿ ಮರುದಿನ ಈದ್ ಹಬ್ಬಕ್ಕೆ ಜನವರಿ ತಿಂಗಳ ಹಣ ಬಿಡುಗಡೆ ಆಗುತ್ತೆ ಅಂತ ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ.

Leave a Comment